Last Updated:
ಬೆಂಗಳೂರಿನಲ್ಲಿ 18.50 ಕಿ.ಮೀ. ಉದ್ದದ ಟೋಲ್ ಫ್ಲೈಓವರ್ ನಿರ್ಮಾಣಕ್ಕೆ 2,283 ಕೋಟಿ ರೂ. ವೆಚ್ಚ. ರಾಗಿಗುಡ್ಡದಿಂದ ನೈಸ್ ಜಂಕ್ಷನ್ವರೆಗೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಯೋಜನೆ.
ಬೆಂಗಳೂರು (Bengaluru) ಮಹಾನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಿಪರೀತ ಸಂಚಾರ ದಟ್ಟಣೆಗೆ (Traffic Jam) ಬ್ರೇಕ್ ಹಾಕಲು ಮತ್ತೊಂದು ಬೃಹತ್ ಫ್ಲೈಓವರ್ (Flyover) ಯೋಜನೆ ಸಿದ್ಧವಾಗಿದೆ. ಆದರೆ ಈ ರಿಲೀಫ್ ಜೊತೆಗೆ ನಗರದ ವಾಹನ ಸವಾರರಿಗೆ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ. ಹೌದು, ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಾಣವಾಗಲಿರುವ ಈ ಹೊಸ ಎಲಿವೇಟೆಡ್ ಕಾರಿಡಾರ್ ಸಂಪೂರ್ಣ ‘ಟೋಲ್’ (Toll) ಮಯವಾಗಿರಲಿದೆ.














