IPL 2027: ಹಾರ್ದಿಕ್ ಪಾಂಡ್ಯ ಮಾತ್ರವಲ್ಲ, ಮುಂಬೈ ಇಂಡಿಯನ್ಸ್​ನ ಈ​ ಆಟಗಾರನ ಮೇಲೆ ಬಿದ್ದಿವೆ ಆ 3 ತಂಡಗಳ ಕಣ್ಣು! | ಕ್ರೀಡಾ ಸುದ್ದಿ | ACTPnews

ಮುಂಬೈ ಇಂಡಿಯನ್ಸ್​​


Last Updated:

IPL 2026 ಋತುವಿನಲ್ಲಿ ಸೂರ್ಯಕುಮಾರ್ ಯಾದವ್ ಅವರ ನೀರಸ ಪ್ರದರ್ಶನವು ಮುಂಬೈ ಇಂಡಿಯನ್ಸ್‌ನ ಪ್ಲೇ ಆಫ್​​ ಸಾಧ್ಯತೆಗಳ ಹಾಳು ಮಾಡಿತು. ಅವರು 13 ಪಂದ್ಯಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ ಕೇವಲ 270 ರನ್‌ಗಳನ್ನು ಗಳಿಸಿದ್ದರು.

ಮುಂಬೈ ಇಂಡಿಯನ್ಸ್​​
ಮುಂಬೈ ಇಂಡಿಯನ್ಸ್​​

ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ (Mumbai Indians) ತೊರೆಯಲಿದ್ದಾರೆ ಎಂಬ ಊಹಾಪೋಹಗಳ ಬೆನ್ನಲ್ಲೆ ಟೀಮ್ ಇಂಡಿಯಾದ ಮಾಜಿ T20 ನಾಯಕ ಮತ್ತು ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Surya Kumar Yadav) ತಂಡವನ್ನು ತೊರೆಯಬಹುದು ಎಂಬ ವರದಿಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಕಳಪೆ ಫಾರ್ಮ್‌ನಿಂದಾಗಿ ಟೀಮ್ ಇಂಡಿಯಾ T20 ನಾಯಕತ್ವ ಮತ್ತು ತಂಡದಲ್ಲಿ ಸ್ಥಾನ ಎರಡನ್ನೂ ಕಳೆದುಕೊಂಡಿರುವ ಸೂರ್ಯ ಅವರನ್ನ ಬಿಡಲು ಮುಂಬೈ ಸಿದ್ಧವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಮುಂಬೈ ಅವರನ್ನು ಲಖನೌ ಸೂಪರ್ ಜೈಂಟ್ಸ್‌ಗೆ ಮಾರಾಟ ಮಾಡಲು ಪ್ರಯತ್ನಿಸಿದೆ ಎಂಬ ಊಹಾಪೋಹವೂ ಹರಡಿದೆ. ಅವರ ನಿರ್ಗಮನದ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲದಿದ್ದರೂ, ಅವರು ತಂಡವನ್ನು ತೊರೆಯುವ ಸಾಧ್ಯತೆ ಹೆಚ್ಚಿದೆ ಎಂಬ ಮಾತು ಕೇಳಿಬರುತ್ತಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports