IPL 2027: ಮುಂಬೈ ಇಂಡಿಯನ್ಸ್ ಅಚ್ಚರಿ ನಿರ್ಧಾರ! ಹಾರ್ದಿಕ್ ಪಾಂಡ್ಯ ತಂಡದಲ್ಲೇ ಇರ್ತಾರೆ, ಆದ್ರೆ ನಾಯಕ ಮಾತ್ರ ಚೇಂಜ್ | ಕ್ರೀಡಾ ಸುದ್ದಿ | ACTPnews

ಮುಂಬೈ ಇಂಡಿಯನ್ಸ್

[ad_1]

Last Updated:

ನಾಯಕತ್ವ ಬದಲಾವಣೆ ಸೇರಿ ಕಾರ್ಯತಂತ್ರ ರೂಪಿಸುವ ಸಲುವಾಗಿ ನಡೆದ ಸಭೆಯಲ್ಲಿ ಮುಂಬೈ ಇಂಡಿಯನ್ಸ್ ಮಾಲೀಕರ ಜೊತೆಗೆ ಮಾಜಿ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಮಹೇಲ ಜಯವರ್ಧನೆ ಭಾಗವಹಿಸಿದ್ದರು ಎಂದು ವರದಿಯಾಗಿದೆ. ತಿಲಕ್ ವರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ಹೆಸರುಗಳನ್ನು ನಾಯಕತ್ವಕ್ಕೆ ಮುಂಚೂಣಿಯಲ್ಲಿವೆ ಎಂದು ತಂಡದ ಮೂಲಗಳು ಸೂಚಿಸಿವೆ.

ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್

2027ರ ಐಪಿಎಲ್ (IPL 2027) ಋತುವಿಗೆ ಮುಂಚಿತವಾಗಿ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಗಮನಾರ್ಹ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ನಾಯಕತ್ವದ ಪಾತ್ರದಿಂದ ಮುಕ್ತಗೊಳಿಸಿ, ಫ್ರಾಂಚೈಸಿ ಹೊಸ ನಾಯಕನನ್ನು ನೇಮಿಸಲು ಎದುರು ನೋಡುತ್ತಿದೆ ಎಂದು ವರದಿಗಳು ಸೂಚಿಸುತ್ತವೆ. ಆದರೆ ಪಾಂಡ್ಯರನ್ನ ಕೈಬಿಡುವ ಬದಲು ಅವರನ್ನ ಮುಂಬೈ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರಿಸಲು ಬಯಸಲಿದೆ ಎಂದು ತಿಳಿದುಬಂದಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports