IPL 2026: ಅಗ್ರಸ್ಥಾನದಲ್ಲಿರುವ ಆರ್​​​ಸಿಬಿಯಿಂದ ಪ್ಲೇಆಫ್​ಗೂ ಮುನ್ನ ಮಾಸ್ಟರ್ ಪ್ಲಾನ್?! ಈ ಒಂದು ಬದಲಾವಣೆ ಮಾಡ್ಕೊಂಡ್ರೆ ಮತ್ತೆ ಟ್ರೋಫಿ ಗೆಲ್ಲೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews

ಆರ್​​ಸಿಬಿ


Last Updated:

ಆರ್​​​ಸಿಬಿ ಐಪಿಎಲ್ 2026 ರಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ. ಹಾಲಿ ಚಾಂಪಿಯನ್ ಆಗಿರುವುದು ಆರ್​​​ಸಿಬಿ ಎರಡನೇ ಟ್ರೋಫಿ ಮೇಲೆ ಕಣ್ಣಿಟ್ಟಿದ್ದು, ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಆರ್​​ಸಿಬಿ
ಆರ್​​ಸಿಬಿ

ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರಾಟ್ ಕೊಹ್ಲಿ (Virat Kohli) ಮತ್ತು ಫಿಲ್ ಸಾಲ್ಟ್ (Phil Salt) ಅವರನ್ನು ಆರಂಭಿಕ ಆಟಗಾರರನ್ನಾಗಿ ಕಣಕ್ಕೀಳಿಸಿತ್ತು. ಆರು ಪಂದ್ಯಗಳ ನಂತರ, ಗಾಯದಿಂದಾಗಿ ಸಾಲ್ಟ್ ಅವರನ್ನು ಆಡುವ ಹನ್ನೊಂದರಿಂದ ಹೊರಗಿಡಲಾಯಿತು. ಸಾಲ್ಟ್ ಬದಲಿಗೆ, ಕೊಹ್ಲಿ ಜೊತೆಗೆ ಇನ್ನಿಂಗ್ಸ್ (Innings) ಆರಂಭಿಸಲು ಯುವ ಇಂಗ್ಲೆಂಡ್ (England) ಎಡಗೈ ಬ್ಯಾಟರ್ ಜಾಕೋಬ್ ಬೆಥೆಲ್ (Jacob Bethel) ಅವರಿಗೆ ಅವಕಾಶ ನೀಡಲಾಯಿತು. ಆದರೆ, ಇಲ್ಲಿಯವರೆಗೆ ಬೆಥೆಲ್ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುವುದಲ್ಲಿ ವಿಫಲರಾಗಿದ್ದಾರೆ.

ಜಾಕೋಬ್ ಬೆಥೆಲ್ ಒಬ್ಬ ಪ್ರತಿಭಾನ್ವಿತ ಬ್ಯಾಟರ್. 2026 ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಪರ ಆಡುತ್ತಿದ್ದ ಅವರು ಭಾರತದ ವಿರುದ್ಧ ಸ್ಮರಣೀಯ ಶತಕ ಗಳಿಸಿದರು. ಐಪಿಎಲ್‌ನಲ್ಲಿ ಬೆಥೆಲ್ ಆ ಪ್ರದರ್ಶನವನ್ನು ಪುನರಾವರ್ತಿಸಬೇಕೆಂದು ಆರ್‌ಸಿಬಿ ಬಯಸಿತ್ತು.

ಆರ್​​​ಸಿಬಿ ಮಾಸ್ಟರ್ ಪ್ಲಾನ್

ಬೆಥೆಲ್ ಇದುವರೆಗಿನ ತನ್ನ ಪ್ರದರ್ಶನದಿಂದ ಆರ್‌ಸಿಬಿಯನ್ನು ಸಂಪೂರ್ಣವಾಗಿ ನಿರಾಶೆಗೊಳಿಸಿದ್ದಾರೆ. ಸಾಲ್ಟ್ ನಿರ್ಗಮನದ ನಂತರ, ಬೆಥೆಲ್ ಏಳು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಜೊತೆಗೆ ಆರ್‌ಸಿಬಿ ಪರ ಇನ್ನಿಂಗ್ಸ್ ಅನ್ನು ತೆರೆದಿದ್ದಾರೆ. ಈ ಏಳರಲ್ಲೂ ಬೆಥೆಲ್ ವಿಫಲರಾಗಿದ್ದಾರೆ. ಈಗ ಅಗ್ರಸ್ಥಾನದಲ್ಲಿರುವ ಆರ್​​​ಸಿಬಿಯಿಂದ ಪ್ಲೇಆಫ್​ಗೂ ಮುನ್ನ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.

ಬೆಥಲ್ ಕಳಪೆ ಫಾರ್ಮ್​

ಬೆಥೆಲ್ ಏಳು ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ಅರ್ಧಶತಕ ಗಳಿಸಿಲ್ಲ. ಅವರ ಗರಿಷ್ಠ ಸ್ಕೋರ್ 27. ಎಡಗೈ ಬ್ಯಾಟರ್ ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 97 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಬೆಥೆಲ್ ಅವರ ಪ್ರದರ್ಶನ ಆರ್‌ಸಿಬಿಯ ನಿರೀಕ್ಷೆಗಳಿಗೆ ವಿರುದ್ಧವಾಗಿದೆ. ಸಾಲ್ಟ್ ಆರ್‌ಸಿಬಿಗೆ ಸೇರುವವರೆಗೆ, ತಂಡವು ಕೊಹ್ಲಿ ಜೊತೆಗೆ ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕ ಆಟಗಾರನಾಗಿ ಪ್ರಯತ್ನಿಸಬಹುದು.

ಅಯ್ಯರ್ ಆರಂಭಿಕ?

ಬೆಥೆಲ್ ಅವರನ್ನು ಆರ್​​​ಸಿಬಿ ಆಡುವ ಹನ್ನೊಂದರ ಬಳಗದಿಂದ ಕೈಬಿಡಲು ಯೋಜನೆ ಹಾಕಿಕೊಂಡಿದೆ. ಬೆಥಲ್ ಬದಲಿಗೆ ವೆಂಕಟೇಶ್ ಅಯ್ಯರ್ ಅಥವಾ ದೇವದತ್ ಪಡಿಕ್ಕಲ್ ಅವರನ್ನು ಆರಂಭಿಕರಾಗಿ ಕಣಕ್ಕೀಳಿಸುವ ಸಾಧ್ಯತೆಯಿದೆ. ಅಯ್ಯರ್ ಎಡಗೈ ಬ್ಯಾಟರ್ ಆಗಿದ್ದು, ಅವರಿಗೆ ಐಪಿಎಲ್‌ನಲ್ಲಿ ಅಪಾರ ಅನುಭವವಿದೆ. ಸ್ಪೋಟಕ ಬ್ಯಾಟಿಂಗ್ ಮತ್ತು ಇನ್ನಿಂಗ್ಸ್‌ ಎರಡರಲ್ಲೂ ಆಡಬಲ್ಲರು.

ನಾಲ್ವರು ವಿದೇಶಿ ಆಟಗಾರರು ಯಾರು?

ಬೆಥಲ್ ಅವರನ್ನು ಕೈಬಿಡುವ ಮೂಲಕ ವೇಗಿ ಜಾಕೋಬ್ ಡಫಿ ಅವರನ್ನು ಆಡಿಸಬಹುದು. ಆಗ ತಂಡದಲ್ಲಿ ಡಫಿ, ಜೋಶ್ ಹ್ಯಾಜಲ್​​ವುಡ, ಟಿಮ್ ಡೇವಿಡ್ ಮತ್ತು ರೊಮಾರಿಯೋ ಶೆಫರ್ಡ್ ನಾಲ್ವರು ವಿದೇಶಿ ಆಟಗಾರರು ಸ್ಥಾನ ಪಡೆಯಲಿದ್ದಾರೆ. ಆರ್​​ಸಿಬಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಲಿದೆ.

ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್-11 : ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಕೋಬ್ ಡಫಿ, ಜೋಶ್ ಹ್ಯಾಜಲ್‌ವುಡ್.

ಇಂಪ್ಯಾಕ್ಟ್ ಪ್ಲೇಯರ್: ಸುಯಾಶ್ ಶರ್ಮಾ

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IPL 2026: ಅಗ್ರಸ್ಥಾನದಲ್ಲಿರುವ ಆರ್​​​ಸಿಬಿಯಿಂದ ಪ್ಲೇಆಫ್​ಗೂ ಮುನ್ನ ಮಾಸ್ಟರ್ ಪ್ಲಾನ್?! ಈ ಒಂದು ಬದಲಾವಣೆ ಮಾಡ್ಕೊಂಡ್ರೆ ಮತ್ತೆ ಟ್ರೋಫಿ ಗೆಲ್ಲೋದು ಪಕ್ಕಾ!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports