Last Updated:
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 14 ರಂದು ಪ್ರಾರಂಭವಾಗುತ್ತದೆ. ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಸ್ಪಿನ್ ಬೌಲರ್ಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 15 ಆರಂಭವಾಗಲಿದೆ. ಈ ಸರಣಿಯು 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಭಾಗವಾಗಿದೆ. ಬಿಸಿಸಿಐ (BCCI) ಈಗಾಗಲೇ ಈ ಮಹತ್ವದ ಸರಣಿಗಾಗಿ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಸರಣಿಗೆ ಇನ್ನೂ ಎರಡು ವಾರಗಳು ಬಾಕಿ ಉಳಿದಿದ್ದು, ಪ್ಲೇಯಿಂಗ್ ಇಲೆವೆನ್ ಬಗ್ಗೆ ಚರ್ಚೆಗಳು ಇಂದಿನಿಂದಲೇ ಆರಂಭವಾಗಿವೆ. ಸತತ ಸರಣಿಗಳಿಂದ ಕಡೆಗಣಿಸಲ್ಪಡುತ್ತಿರುವ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಈ ಸರಣಿಯಲ್ಲಿ ಭಾರತಕ್ಕೆ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂದು ಟೀಮ್ ಇಂಡಿಯಾ ಮಾಜಿ ವಿಕೆಟ್ ಕೀಪರ್ ದೀಪ್ ದಾಸ್ಗುಪ್ತಾ ಭವಿಷ್ಯ ನುಡಿದಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 14 ರಂದು ಪ್ರಾರಂಭವಾಗುತ್ತದೆ. ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಸ್ಪಿನ್ ಬೌಲರ್ಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಎರಡನೇ ಮತ್ತು ಅಂತಿಮ ಟೆಸ್ಟ್ ಆಗಸ್ಟ್ 22 ರಿಂದ 26 ರವರೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ದೃಷ್ಟಿಯಿಂದ ಈ ಸರಣಿ ಭಾರತಕ್ಕೂ ನಿರ್ಣಾಯಕವಾಗಿದೆ. ಈ ಸರಣಿಯಲ್ಲಿ ಭಾರತ ಮೇಲುಗೈ ಸಾಧಿಸಬೇಕೆಂದರೆ ಭಾರತದ ತನ್ನ ಪ್ಲೇಯಿಂಗ್ XI ತಂಡದಲ್ಲಿ ಕುಲದೀಪ್ ಯಾದವ್ ಅವರನ್ನು ಸೇರಿಸಿಕೊಳ್ಳಬೇಕು. ಶ್ರೀಲಂಕಾದ ಪರಿಸ್ಥಿತಿಗಳಿಗೆ ರಿಸ್ಟ್ ಸ್ಪಿನ್ನರ್ ಅತ್ಯಗತ್ಯ ಎಂದು ತಿಳಿಸಿದ್ದಾರೆ.
“ಅಲ್ಲಿನ (ಶ್ರೀಲಂಕಾ) ಪರಿಸ್ಥಿತಿಗೆ ಇದು ಒಳ್ಳೆಯ ತಂಡ ಎಂದು ನಾನು ಭಾವಿಸುತ್ತೇನೆ. ವೇಗದ ಬೌಲರ್ಗಳು ಕಡಿಮೆ ಮತ್ತು ಸ್ಪಿನ್ನರ್ಗಳು ಹೆಚ್ಚು ಅನುಕೂಲ ನೀಡುತ್ತದೆ. ನಾಲ್ಕು ಸ್ಪಿನ್ನರ್ಗಳೊಂದಿಗೆ ಆಡುವ ಅವಕಾಶವಿರಬಹುದು ಎಂದು ನಾನು ಭಾವಿಸುತ್ತೇನೆ. ಶ್ರೀಲಂಕಾದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಇದು ಮೊದಲು ಸಂಭವಿಸಲಿದೆ. ತಂಡದಲ್ಲಿ ಹೆಚ್ಚುವರಿ ಸ್ಪಿನ್ನರ್ ಇರುವುದು ಮುಖ್ಯವಾಗಿತ್ತು. ಅದು ನಿರೀಕ್ಷೆಯಂತೆ ಆಗಿದೆ ಎಂದು ನಾನು ಭಾವಿಸುತ್ತೇನೆ” ಎಂದು ದಾಸ್ಗುಪ್ತಾ ಶನಿವಾರ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ಅವರು ವಾಷಿಂಗ್ಟನ್ ಸುಂದರ್ ಅವರನ್ನು ತಮ್ಮ ನೆಚ್ಚಿನ ಸ್ಪಿನ್ನರ್ ಎಂದು ಹೆಸರಿಸಿದ್ದಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪ್ರವಾಸಕ್ಕೂ ಮೊದಲು ವಾಷಿಂಗ್ಟನ್ ನನ್ನ ನೆಚ್ಚಿನ ಸ್ಪಿನ್ನರ್ ಆಗಿದ್ದರು. ಗಾಯದಿಂದಾಗಿ, ಅವರು ತಂಡದಲ್ಲಿಲ್ಲ. ಅದು ಅನಿರೀಕ್ಷಿತ ಎಂದು ನಾನು ಭಾವಿಸುತ್ತೇನೆ. ಆದರೆ ತಂಡದಲ್ಲಿ ಇಲ್ಲದಿರುವ ಯಾವುದೇ ಹೆಸರುಗಳ ಬಗ್ಗೆ ನನಗೆ ಯೋಚಿಸಲು ಸಾಧ್ಯವಿಲ್ಲ. ಸುಂದರ್ ಲಭ್ಯವಿಲ್ಲದ ಕಾರಣ, ಭಾರತ ತಂಡದ ಮ್ಯಾನೇಜ್ಮೆಂಟ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಕುಲ್ದೀಪ್ ಯಾದವ್ ಆಡಿಸಬೇಕು. ಸುಂದರ್ ಅಲಭ್ಯತೆ ರಿಸ್ಟ್-ಸ್ಪಿನ್ನರ್ ಆಗಿ ಕಡ್ಡಾಯವಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡಿಸಲು ದಾರಿ ಮಾಡಿಕೊಟ್ಟಿದೆ” ಎಂದು ದೀಪ್ ದಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಕುಲ್ದೀಪ್ ಯಾದವ್ ಪ್ರಸ್ತುತ ಇಂಗ್ಲೆಂಡ್ನಲ್ಲಿ ಏಕದಿನ ಕಪ್ನಲ್ಲಿ ಆಡುತ್ತಿದ್ದಾರೆ. ಅವರು ಯಾರ್ಕ್ಷೈರ್ ತಂಡದ ಭಾಗವಾಗಿದ್ದಾರೆ. 2017ರಲ್ಲಿ ಪಾದಾರ್ಪಣೆ ಮಾಡಿದ ನಂತರ ಕುಲದೀಪ್ 18 ಟೆಸ್ಟ್ ಪಂದ್ಯಗಳಲ್ಲಿ 79 ವಿಕೆಟ್ಗಳನ್ನು ಕಬಳಿಸಿದ್ದು, ಇನ್ನಿಂಗ್ಸ್ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಕಳೆದ ಇಂಗ್ಲೆಂಡ್ ಟೆಸ್ಟ್ ಸರಣಿಗೆ ಕುಲದೀಪ್ ಅವರನ್ನು ಆಯ್ಕೆ ಮಾಡದಿರುವುದು ಭಾರತೀಯ ತಂಡದ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡಕ್ಕೆ ಕುಲದೀಪ್ ನಿರ್ಣಾಯಕರಾಗಬಹುದು.
Aug 01, 2026 10:16 PM IST
India vs Sri Lanka: 18 ಪಂದ್ಯಗಳಲ್ಲಿ 79 ವಿಕೆಟ್ ಪಡೆದಿರುವ ಈ ಬೌಲರ್ ಭಾರತಕ್ಕೆ ಟ್ರಂಪ್ ಕಾರ್ಡ್! ಶ್ರೀಲಂಕಾ ಸರಣಿಗಾಗಿ ಮಾಜಿ ಕ್ರಿಕೆಟರ್ ಮಹತ್ವದ ಸಲಹೆ














