Last Updated:
ಬಲರಾಮನ ದಿನಗಳು ಎಷ್ಟು ಕೋಟಿ ಬಜೆಟ್‌ನ ಸಿನಿಮಾ ಆಗಿದೆ. ಈ ಚಿತ್ರಕ್ಕೆ ಬಾಲಿವುಡ್ ಕಲಾವಿದರು ಬಂದ್ಮೇಲೆ ಇನ್ನೆಷ್ಟು ಕೋಟಿ ಆಗಿದೆ. ಈ ಎಲ್ಲ ವಿಷಯವನ್ನ ಚಿತ್ರದ ನಾಯಕ ಮತ್ತು ನಿರ್ಮಾಪಕ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಮಾದೇವ ಬಂದ್ಮೇಲೆ ವಿನೋದ್ ಪ್ರಭಾಕರ್ (Vinod Prabhaakar) ಲಕ್ ಚೇಂಜ್ ಆಗಿದೆ. ಇಂಡಸ್ಟ್ರಿಯಲ್ಲಿ ಮಾರ್ಕೆಟ್ ವ್ಯಾಲ್ಯೂ ಕೂಡ ಬದಲಾಗಿದೆ. ಹಾಗಂತ ಸ್ವತಃ ವಿನೋದ್ ಪ್ರಭಾಕರ್ (Vinod Prabhaakar) ಹೇಳಿದ್ದಾರೆ. ತಾವು ಅಭಿನಯದ ಬಲರಾಮನ ದಿನಗಳು ಚಿತ್ರಕ್ಕೆ (Balaramana Dinagalu Movie) ದುಡ್ಡುಹಾಕುವಷ್ಟು ಇವರಿಗೆ ನಂಬಿಕೆ ಬಂದಿದೆ. 7 ಕೋಟಿ ಬಜೆಟ್ ಅಲ್ಲಿಯೇ ಈ ಚಿತ್ರವನ್ನ ತೆಗೆಯಬೇಕು ಅಂತ ಮೊದಲು ಅಂದುಕೊಂಡಿದ್ದರು. ಅಷ್ಟರಲ್ಲಿಯೇ ಆಗ್ಬೇಕು ಅಂತಲೂ ಹೇಳಿದ್ದರು. ಆದರೆ, ಶ್ರೇಯಸ್ ಅಂತ ಇನ್ನೊಬ್ಬರು ಈ ಚಿತ್ರದ ನಿರ್ಮಾಣಕ್ಕೆ (Movie Produce) ಕೈಹಾಕಿದರು. ಆಗಲೇ ಈ ಚಿತ್ರ ದೊಡ್ಟಮಟ್ಟದಲ್ಲಿ ರೆಡಿ ಆಗಿದೆ. ಇನ್ನೇನು ಇದೇ ಜೂನ್-26 ರಂದು ಇದು ತೆರೆ ಕಾಣುತ್ತಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಾದೇವ ಬಂದ್ಮೇಲೆ….
ಮಾದೇವ ಬಂದ್ಮೇಲೆ….
ಆದರೆ, ಅದು ಮಲ್ಪಿಪ್ಲೆಕ್ಸ್ ಅಲ್ಲಿಯೇ ಪ್ರಾಬ್ಲಂ ಆಗಿತ್ತು. ಸಿಂಗಲ್ ಥಿಯೇಟರ್ ಅಲ್ಲಿ ಏನು ತೊಂದರೆ ಇರಲಿಲ್ಲ. ಈ ಸಿನಿಮಾ ಬಂದ್ಮೇಲೆ ಸುಮಾರು ವಿಚಾರಗಳು ಚೇಂಜ್ ಆಗಿವೆ. ಮಾರ್ಕೆಟ್ ವ್ಯಾಲ್ಯೂ ಕೂಡ ಚೇಂಜ್ ಆಗಿದೆ. ಬಲರಾಮನ ದಿನಗಳು ಚಿತ್ರವನ್ನ 7 ಕೋಟಿ ವೆಚ್ಚದಲ್ಲಿಯೇ ಮಾಡಿ ಮುಗಿಸಬೇಕು ಅಂತಲೇ ವಿನೋದ್ ಪ್ರಭಾಕರ್ ಹೇಳಿದ್ದರು.
ಬಲರಾಮನ ದಿನಗಳು ಚಿತ್ರದ ಬಜೆಟ್ 7 ಕೋಟಿ ದಾಟಿ ಹೋಗಿದೆ. ಅದೆಷ್ಟು ಅನ್ನೋ ನಂಬರ್ಸ್ ಅನ್ನ ವಿನೋದ್ ಪ್ರಭಾಕರ್ ಹೇಳಿಕೊಳ್ಳಲಿಲ್ಲ.
ಬಲರಾಮನ ದಿನಗಳು ಚಿತ್ರ ಪಾರ್ಟ್-2 ಏನು ಬರೋದಿಲ್ಲ. ಚಿತ್ರ ನೋಡಿದರೆ ನಿಮಗೆ ಅದು ಅರ್ಥ ಆಗುತ್ತದೆ. ಆದರೆ, ಈ ಚಿತ್ರಕ್ಕಾಗಿ ಸುಮಾರು ಅಧ್ಯಯನ ಕೂಡ ಆಗಿದೆ.
ಅಗ್ನಿಶ್ರೀಧರ್, ರವಿ ಬೆಳಗೆರೆ ಸೇರಿದಂತೆ ಹಲವು ಪುಸ್ತಕಗಳನ್ನು ಡೈರೆಕ್ಟರ್ ಕೆ.ಎಂ.ಚೈತನ್ಯ ಓದಿದ್ದಾರೆ. ಪೊಲೀಸ್ ಆಫೀಸರ್‌ಗಳನ್ನ ಮೀಟ್ ಆಗಿದ್ದಾರೆ. ಆ ಸಮಯದಲ್ಲಿದ್ದ ಹೆಸರಾಂತ ಕ್ರೈಮ್ ರಿಪೋರ್ಟರ್ ಡೇನಿಯಲ್ ಜಾರ್ಜ್ ಅವರನ್ನು ಮೀಟ್ ಆಗಿದ್ದಾರೆ. 80-90 ಅಲ್ಲಿದ್ದ ಇವರು Resource Person ಆಗಿಯೇ ಈ ಚಿತ್ರದ ಡೈರೆಕ್ಟರ್‌ಗೆ ಸಾಥ್ ಕೊಟ್ಟಿದ್ದಾರೆ.
ಬಜೆಟ್ 7 ಕೋಟಿ ದಾಟಿ ಹೋಗಿದೆ
ಬಲರಾಮನ ದಿನಗಳು ಚಿತ್ರದಲ್ಲಿ 7 ಹಾಡುಗಳಿವೆ. ಎಲ್ಲ ರೀತಿಯ ಹಾಡುಗಳು ಇಲ್ಲಿವೆ. ಈಗಾಗಲೇ ಎರಡು ಹಾಡುಗಳು ಬಂದಿವೆ. ಮೂರನೇ ಹಾಡು ಇದೀಗ ರಿಲೀಸ್ ಆಗಿದೆ.
ಜೂನ್-26 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರದ ನಾಯಕ ವಿನೋದ್ ಪ್ರಭಾಕರ್ ಅವರೂ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಚಿತ್ರದ ರಿಲೀಸ್ ಅನ್ನ ಇವರು ಪಕ್ಕ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ.
ಆದರೆ, ಎಷ್ಟು ಥಿಯೇಟರ್ ಅಲ್ಲಿ ಈ ಚಿತ್ರ ರಿಲೀಸ್ ಆಗುತ್ತದೆ ಅನ್ನೋದು ಇನ್ನಷ್ಟೆ ಗೊತ್ತಾಗಬೇಕಿದೆ. ಇನ್ನುಳಿದಂತೆ ಇದು ಆ ದಿನಗಳು ಚಿತ್ರದ ಮತ್ತೊಂದು ಅಧ್ಯಾಯ ಅಂತಲೇ ಕೆ.ಎಂ.ಚೈತನ್ಯ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 09, 2026 11:05 PM IST













