Last Updated:
ಬಾಲಿವುಡ್‌ನ ಕಾಕ್ಟೇಲ್-2 ಚಿತ್ರದ ವಲ್ಲಹಾ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಬಿಂದಾಸ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕೃತಿ ಸೆನೋನ್ ಮತ್ತು ಶಾಹಿದ್ ಕೂಡ ಇದರಲ್ಲಿ ಸಾಥ್ ಕೊಟ್ಟಿದ್ದಾರೆ. ಈ ಮೂವರ ಈ ಹಾಡಿನಲ್ಲಿ ಒಂದು ಕತೆ ಕೂಡ ಇದೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಾಕ್ಟೇಲ್-2 ಚಿತ್ರದ (Cocktail-2 Movie) ವಲ್ಲಹಾ ಹಾಡು ರಿಲೀಸ್ ಆಗಿದೆ. ಪಂಜಾಬಿ ಮತ್ತು ವೆಸ್ಟರ್ನ್ ಹೀಗೆ ಎರಡೂ ಸಂಗೀತದ ಮಿಶ್ರಣವೇ ಇದಾಗಿದೆ. ಮ್ಯೂಸಿಕ್ ಡೈರೆಕ್ಟರ್ ಪ್ರೀತಂ ಇಲ್ಲಿ ‘ಚಕ್ ಗಿಲಾಸಿ’ (Chakk Gilas) ಅನ್ನುವ ಹುಕ್ ಲೈನ್ ಬಳಕೆ ಮಾಡಿದ್ದಾರೆ. ಇದು ಇಡೀ ಹಾಡಿಗೆ ಪಂಜಾಬಿ ಫೀಲ್ ಕೊಟ್ಟಿದೆ. ಕಾರಣ ಇದು ಪಂಜಾಬಿ ಪದವೇ ಆಗಿದೆ. ಇದೇನೋ ಹಾಡಿನ ವಿಚಾರ ಆಯಿತು. ಆದರೆ, ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಬಿಂದಾಸ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಕೃತಿ ಸೆನೋನ್ (Kriti Sanon) ಕೂಡ ಅಷ್ಟೆ ಬಿಂದಾಸ್ ನೋಡಿ. ಇವರ ನಡುವೆ ಶಾಹಿದ್ ಕಪೂರ್ ಮಸ್ತ್ ಆಗಿಯೇ ಕಾಣಿಸಿದ್ದಾರೆ. ಅಷ್ಟೆ ಮಜಾ ಕೂಡ ಮಾಡಿದ್ದಾರೆ. ಈ ಮೂವರ ಹಾಡು ಟ್ರೆಂಡಿ ಅನಿಸುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಾಕ್ಟೇಲ್-2 ಚಿತ್ರದ ಈ ವಲ್ಲಹಾ ಟ್ರೆಂಡಿ ಆಗಿದೆ. ಪಂಜಾಬಿ ಗಾಯಕ ಹರ್ಡಿ ಸಂಧು ಮತ್ತು ನೈಜೀರಿಯನ್ ಗಾಯಕ ಬಯಾನಿ ಈ ಹಾಡನ್ನ ಹಾಡಿದ್ದಾರೆ. ಪ್ರೀತಂ ಇಲ್ಲಿ ಟ್ರೆಂಡಿ ಹಾಡನ್ನ ಕಂಪೋಸ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಬಿಂದಾಸ್ (ಚಿತ್ರ ಕೃಪೆ: ಶಾಹಿದ್ ಕಪೂರ್ ಇನ್‌ಸ್ಟಾಗ್ರಾಮ್)
ಅಮಿತಾಭ್ ಭಟ್ಟಾಚಾರ್ಯ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ‘ಚಕ್ ಗಿಲಾಸಿ’ ಅನ್ನುವ ಕ್ಯಾಚಿ ಪದವನ್ನು ಬರೆದಿದ್ದಾರೆ. ಇದನ್ನ ಕ್ಲಬ್ ಮತ್ರು ಪಾರ್ಟಿ ಸಾಂಗ್ ರೀತಿನೇ ಡಿಸೈನ್ ಮಾಡಿದ್ದಾರೆ.
ಈ ಹಾಡಿನ ವಿಡಿಯೋ ಕೂಡ ಇದೀಗ ರಿಲೀಸ್ ಆಗಿದೆ. ಅಷ್ಟೆ ಕಲರ್‌ಫುಲ್ ಆಗಿಯೇ ಈ ಗೀತೆ ಬಂದಿದೆ. ವಿದೇಶದ ಲೋಕೇಷನ್‌ಗಳು ಅಷ್ಟೆ ಅದ್ಭುತವಾಗಿಯೇ ಬಂದಿವೆ.
ಕಾಕ್ಟೇಲ್-2 ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜೂನ್-19 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಡೈರೆಕ್ಟರ್ ಹೊಮಿ ಅದಜಾನಿಯಾ ಬೇರೆ ಕತೆ ಹೇಳುತ್ತಿದ್ದಾರೆ.
ಈ ಹಿಂದಿನ ಕತೆಯಲ್ಲಿ ಒಂದು ರೋಮ್ಯಾಂಟಿಕ್ ಕಾಮಿಡಿ ಡ್ರಾಮಾ ಇಟ್ಟಿದ್ದರು. ಈ ಸಲವು ಅದು ಇರುತ್ತದೆ ಬಿಡಿ. ಯಾಕಂದ್ರೆ ಇದು ಕಾಕ್ಟೇಲ್ ಚಿತ್ರದ ಎರಡನೇ ಭಾಗವೇ ಆಗಿದೆ.
ತ್ರಿಕೋನ ಪ್ರೇಮ ಕಥೇನಾ (ಚಿತ್ರ ಕೃಪೆ: ಶಾಹಿದ್ ಕಪೂರ್ ಇನ್‌ಸ್ಟಾಗ್ರಾಮ್)
ಚಿತ್ರವನ್ನ ಈಗಾಗಲೆ ಹೇಳಿದಂತೆ ಹೊಮಿ ಅದಜಾನಿಯಾ ಡೈರೆಕ್ಷನ್ ಮಾಡಿದ್ದಾರೆ. ಪ್ರೀತಂ ಸಂಗೀತ ಕೊಟ್ಟಿದ್ದಾರೆ. ಈ ಹಿಂದಿನ ಚಿತ್ರದಲ್ಲಿ ಸೈಫ್ ಅಲಿ ಖಾನ್ ಇದ್ದರು. ದೀಪಿಕಾ ಪಡುಕೋಣೆ ನಟಿಸಿದ್ದರು. ಡಯಾನಾ ಪೆಂಟಿ ಈ ಸಿನಿಮಾದಲ್ಲಿದ್ದರು.
ಈ ಒಂದು ಹಾಡಿನಲ್ಲಿ ಒಂದು ಸ್ಟೋರಿನೇ ಇದೆ. ಬಿಂದಾಸ್ ಆಗಿಯೇ ಇರೋ ಈ ಮೂವರು ಪರಸ್ಪರ ಬೇಸರ ಮಾಡಿಕೊಳ್ಳುವ ದೃಶ್ಯಗಳೂ ಇವೆ. ಮದುವೆಗೆ ಒಬ್ಬರಲ್ಲ ಇಬ್ಬರು ರೆಡಿ ಆಗುವ ದೃಶ್ಯವೂ ಇದೆ.
ರಶ್ಮಿಕಾ ಬದಲು ಕೃತಿ ಮೇಲೆ ಶಾಹಿದ್ ಲವ್ ಇರೋದು ಗೊತ್ತಾಗುತ್ತದೆ. ಆದರೆ, ಕೊನೆಗೆ ಇಬ್ಬರನ್ನು ಬಿಟ್ಟು ಹೋಗುವ ದೃಶ್ಯವೂ ಈ ಒಂದು ಹಾಡಿನಲ್ಲಿದೆ. ಈ ಮೂಲಕ ಈ ಒಂದು ಗೀತೆ ಸಾಕಷ್ಟು ಕುತೂಹಲ ಮೂಡಿಸಿದೆ. ಇಬ್ಬರಲ್ಲಿ ಶಾಹಿದ್ ಯಾರನ್ನ ಮದುವೆ ಆಗುತ್ತಾರೆ ಅನ್ನೋ ಪ್ರಶ್ನೆನೂ ಹುಟ್ಟಿಕೊಂಡಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jun 09, 2026 11:04 PM IST













