IND vs WI: 3 ಪಂದ್ಯಗಳ ಸರಣಿಯಲ್ಲಿ ಹೆಚ್ಚು ಸಿಕ್ಸರ್​! ಇಂಗ್ಲೆಂಡ್ ಹೆಸರಿನಲ್ಲಿದ್ದ ಆಲ್​ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಭಾರತ | ಕ್ರೀಡಾ ಸುದ್ದಿ | ACTPnews

ಕೆಎಲ್ ರಾಹುಲ್-ಬ್ರಾರ್ (PTI)


Last Updated:


ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಈ ಚೊಚ್ಚಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸಿಡಿಲಬ್ಬರದ 6 ಸಿಕ್ಸರ್‌ಗಳನ್ನು ಚಚ್ಚಿದರೆ, ರೋಹಿತ್ ಶರ್ಮಾ 3, ಗಾಯಕ್ವಾಡ್ 4, ನಮನ್ ಧೀರ್ 2 ಮತ್ತು ಅನ್ಶುಲ್ ಕಾಂಬೋಜ್ 2 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಒಟ್ಟು 17 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ಪ್ರಸ್ತುತ ಸರಣಿಯಲ್ಲಿ ತನ್ನ ಒಟ್ಟಾರೆ ಸಿಕ್ಸರ್‌ಗಳ ಸಂಖ್ಯೆಯನ್ನು 45ಕ್ಕೆ ಹೆಚ್ಚಿಸಿಕೊಂಡಿದೆ.

 ಕೆಎಲ್ ರಾಹುಲ್-ಬ್ರಾರ್ (PTI)
ಕೆಎಲ್ ರಾಹುಲ್-ಬ್ರಾರ್ (PTI)

ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವೆ ಪ್ರಸ್ತುತ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯವು ಶನಿವಾರ (ಅಕ್ಟೋಬರ್ 3) ನ್ಯೂ ಚಂಡೀಗಢದ ಪಿಸಿಎ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಗ್ರೌಂಡ್ ಎ ನಲ್ಲಿ ನಡೆಯುತ್ತಿದೆ. ಈ ತವರು ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಬ್ಯಾಟಿಂಗ್ ನಡೆಸಿದ ಭಾರತ ತಂಡವು ಕೆ.ಎಲ್. ರಾಹುಲ್ ಅವರ ಅಜೇಯ ಶತಕ (129) ಹಾಗೂ ರೋಹಿತ್ ಶರ್ಮಾ (92) ಮತ್ತು ರುತುರಾಜ್ ಗಾಯಕ್ವಾಡ್ (59) ಅವರ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 351 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿದೆ.

17 ಸಿಕ್ಸರ್ ಸಿಡಿಸಿದ ಭಾರತೀಯ ಬ್ಯಾಟರ್ಸ್

ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಈ ಚೊಚ್ಚಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸಿಡಿಲಬ್ಬರದ 6 ಸಿಕ್ಸರ್‌ಗಳನ್ನು ಚಚ್ಚಿದರೆ, ರೋಹಿತ್ ಶರ್ಮಾ 3, ಗಾಯಕ್ವಾಡ್ 4, ನಮನ್ ಧೀರ್ 2 ಮತ್ತು ಅನ್ಶುಲ್ ಕಾಂಬೋಜ್ 2 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡವು ಒಟ್ಟು 17 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ, ಪ್ರಸ್ತುತ ಸರಣಿಯಲ್ಲಿ ತನ್ನ ಒಟ್ಟಾರೆ ಸಿಕ್ಸರ್‌ಗಳ ಸಂಖ್ಯೆಯನ್ನು 45ಕ್ಕೆ ಹೆಚ್ಚಿಸಿಕೊಂಡಿದೆ.

3 ಪಂದ್ಯಗಳ ಸರಣಿಯಲ್ಲಿ ಗರಿಷ್ಠ ಸಿಕ್ಸರ್

ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಭರ್ಜರಿ 45 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ, 3 ಪಂದ್ಯಗಳ ದ್ವಿಪಕ್ಷೀಯ ಏಕದಿನ (ODI) ಸರಣಿಯೊಂದರಲ್ಲಿ ಒಂದೇ ತಂಡ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಇಂಗ್ಲೆಂಡ್ ತಂಡದ ದಾಖಲೆಯನ್ನು ಮುರಿದು ಹೊಸ ಇತಿಹಾಸ ಬರೆದಿದೆ. ಈ ಹಿಂದೆ ಮಾರ್ಚ್ 2021ರ ಭಾರತ ಪ್ರವಾಸದ ವೇಳೆ ಇಂಗ್ಲೆಂಡ್ ತಂಡವು ಭಾರತದ ವಿರುದ್ಧ 37 ಸಿಕ್ಸರ್‌ಗಳನ್ನು ಚಚ್ಚಿದ್ದು ಹಿಂದಿನ ದಾಖಲೆಯಾಗಿತ್ತು.

ಇದರೊಂದಿಗೆ, ಪ್ರಸ್ತುತ ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳು ಸಿಡಿಸಿರುವ ಈ 45 ಸಿಕ್ಸರ್‌ಗಳು, ಯಾವುದೇ ಒಂದು ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ ತಂಡವು ಬಾರಿಸಿದ ಸಾರ್ವಕಾಲಿಕ ಅತ್ಯಧಿಕ ಸಿಕ್ಸರ್ ಸಂಖ್ಯೆಯಾಗಿದೆ.

ಆಸ್ಟ್ರೇಲಿಯಾ ಹೆಸರಲ್ಲಿದೆ ವಿಶ್ವದಾಖಲೆ

ದ್ವಿಪಕ್ಷೀಯ ಏಕದಿನ (ODI) ಸರಣಿಯೊಂದರಲ್ಲಿ ಒಂದೇ ತಂಡ ಬಾರಿಸಿದ ಸಾರ್ವಕಾಲಿಕ ಗರಿಷ್ಠ ಸಿಕ್ಸರ್‌ಗಳ ವಿಶ್ವ ದಾಖಲೆಯು ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಆಸೀಸ್ ಪಡೆ 2013 ರಲ್ಲಿ ಭಾರತದ ವಿರುದ್ಧ ನಡೆದ 6 ಪಂದ್ಯಗಳ ಸರಣಿಯಲ್ಲಿ ಬರೋಬ್ಬರಿ 66 ಸಿಕ್ಸರ್‌ಗಳನ್ನು ಚಚ್ಚಿತ್ತು. ನಂತರ 2019 ರಲ್ಲಿ ವೆಸ್ಟ್ ಇಂಡೀಸ್ ತಂಡವು ಕೂಡ ಇಂಗ್ಲೆಂಡ್ ವಿರುದ್ಧ ತನ್ನ ತವರಿನಲ್ಲಿ ನಡೆದ 5 ಪಂದ್ಯಗಳ ಸರಣಿಯಲ್ಲಿ 66 ಸಿಕ್ಸರ್‌ಗಳನ್ನು ಸಿಡಿಸಿ ಈ ದಾಖಲೆಯನ್ನು ಸಮಗಟ್ಟಿತ್ತು.

ಆಸ್ಟ್ರೇಲಿಯಾ 66 ಸಿಕ್ಸರ್ vs ಭಾರತ, 6 ಪಂದ್ಯಗಳ ಸರಣಿ, 2013

ವೆಸ್ಟ್ ಇಂಡೀಸ್ 66 ಸಿಕ್ಸರ್ vs ಇಂಗ್ಲೆಂಡ್, 5 ಪಂದ್ಯಗಳ ಸರಣಿ, 2019

ದಕ್ಷಿಣ ಆಫ್ರಿಕಾ 55 ಸಿಕ್ಸರ್ vs ಆಸ್ಟ್ರೇಲಿಯಾ, 5 ಪಂದ್ಯಗಳ ಸರಣಿ, 2023

ಇಂಗ್ಲೆಂಡ್ 45 ಸಿಕ್ಸರ್ vs ಪಾಕಿಸ್ತಾನ, 5 ಪಂದ್ಯಗಳ ಸರಣಿ, 2019

ಭಾರತ 45 ಸಿಕ್ಸರ್ vs ವೆಸ್ಟ್ ಇಂಡೀಸ್, 3 ಪಂದ್ಯಗಳ ಸರಣಿ, 2026



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed