Last Updated:
ಭಾರತ ತಂಡ ಈಗ ಕೊಲಂಬೊದಲ್ಲಿ ಶ್ರೀಲಂಕಾ XI ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದೆ. ಶ್ರೀಲಂಕಾ XI ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಆಯ್ಕೆ ಮಾಡಿಕೊಂಡಿದೆ.
ಭಾರತ (India) ಮತ್ತು ಶ್ರೀಲಂಕಾ (Sri Lanka) XI ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ಕೊಲಂಬೊದಲ್ಲಿ ಶುರುವಾಗಿದೆ. ಟಾಸ್ (Toss) ಗೆದ್ದ ಶ್ರೀಲಂಕಾ XI ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಶ್ರೀಲಂಕಾ ಚೆನ್ನಾಗಿ ಬ್ಯಾಟಿಂಗ್ ಆರಂಭಿಸಿದೆ. ಮೊದಲ ದಿನದ ಮೊದಲ ಸೆಷನ್‌ನಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ವಿಕೆಟ್ ಪಡೆಯಲು ಶ್ರಮಿಸಿದರು. ಬೌಲರ್‌ಗಳು ಕೆಲವು ಅವಕಾಶಗಳನ್ನು ಸೃಷ್ಟಿಸಿದರೂ, ಫೀಲ್ಡರ್‌ಗಳು ಕ್ಯಾಚ್ ಹಿಡಿಯಲಿಲ್ಲ. ಭಾರತದ ನಾಯಕ ಕೆಎಲ್ ರಾಹುಲ್ (KL Rahul) ಸ್ಲಿಪ್‌ನಲ್ಲಿ ಸುಲಭ ಕ್ಯಾಚ್ ಅನ್ನು ಬಿಟ್ಟುಕೊಟ್ಟರು.














