IND vs ENG: ಸಂಜು, ಅಭಿಷೇಕ್ ಅಲ್ಲ, ಆತನನ್ನ ಕಂಟ್ರೋಲ್ ಮಾಡಲು ಇಂಗ್ಲೆಂಡ್ ಮಹಾ ಪ್ಲಾನ್! 15ರ ಪೋರನ ಬಗ್ಗೆ ಇಂಗ್ಲೆಂಡ್​ ಕ್ಯಾಪ್ಟನ್ ಸಂಚಲನ ಹೇಳಿಕೆ​ | ಕ್ರೀಡಾ ಸುದ್ದಿ | ACTPnews

ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್


Last Updated:

ಐರ್ಲೆಂಡ್ ಸರಣಿಯ ಸಮಯದಲ್ಲಿ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ಸಿಗದಿದ್ದರೂ, ಡರ್ಹಾಮ್‌ನಲ್ಲಿ ನಡೆಯಲಿರುವ ಮುಂಬರುವ ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವೈಭವ್​ ಕುರಿತು ಚರ್ಚೆಗಳು ಮಾತ್ರ ಕಡಿಮೆ ಆಗಿಲ್ಲ.

ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್
ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್

ಕ್ರಿಕೆಟ್ ಜಗತ್ತಿನ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಅಂತರರಾಷ್ಟ್ರೀಯ ಪದಾರ್ಪಣೆ ಮೇಲೆ ನೆಟ್ಟಿವೆ. ಅವರು ಯಾವಾಗ ಮೈದಾನಕ್ಕೆ ಇಳಿಯುತ್ತಾರೆ ಎಂದು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಜುಲೈ 1 ರಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ T20 ಪಂದ್ಯಕ್ಕೂ ಮುನ್ನ, ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಸೂರ್ಯವಂಶಿ ಬಗ್ಗೆ ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ಈ ಪಂದ್ಯದಲ್ಲಿ ಯುವಕ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರೆ, ಅವರ ಬೌಲಿಂಗ್ ಘಟಕವು ಆರಂಭದಿಂದಲೇ ಅವರ ಆರ್ಭಟವನ್ನ ತಡೆಯಲು ತಮ್ಮ ತಂತ್ರಗಳೊಂದಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಬ್ರೂಕ್ ಎಚ್ಚರಿಸಿದ್ದಾರೆ.

ಐರ್ಲೆಂಡ್ ಸರಣಿಯ ಸಮಯದಲ್ಲಿ ಸೂರ್ಯವಂಶಿಗೆ ತಂಡದಲ್ಲಿ ಅವಕಾಶ ಸಿಗದಿದ್ದರೂ, ಡರ್ಹಾಮ್‌ನಲ್ಲಿ ನಡೆಯಲಿರುವ ಮುಂಬರುವ ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ವೈಭವ್​ ಕುರಿತು ಚರ್ಚೆಗಳು ಮಾತ್ರ ಕಡಿಮೆ ಆಗಿಲ್ಲ.

ಪ್ಲಾನ್ ಸಿದ್ಧವಾಗಿದೆ ಎಂದ ಹ್ಯಾರಿ ಬ್ರೂಕ್

ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ವೈಭವ್ ಸೂರ್ಯವಂಶಿ ಆಡುತ್ತಾರೋ ಇಲ್ಲವೋ? ಎಂಬ ಎರಡೂ ಸನ್ನಿವೇಶಗಳಿಗೂ ತಾಬೂ ಸಿದ್ಧರಾಗಿದ್ದೇವೆ ಎಂದು ಹೇಳಿದರು. “ನಮ್ಮ ಬೌಲರ್‌ಗಳು ವೈಭವ್ ಸೂರ್ಯವಂಶಿ ಆರ್ಭಟವನ್ನ ಹೇಗೆ ತಡೆಯುವುದು ಎಂಬುದನ್ನು ಕಂಡುಹಿಡಿಯಲು ತೆರೆಮರೆಯಲ್ಲಿ ಸಾಕಷ್ಟು ಹೋಮ್ ವರ್ಕ್​ ಮಾಡಿದ್ದಾರೆ. ಅದಕ್ಕೆ ಅನುಗುಣವಾಗಿ ನಾವು ಯೋಜನೆಗಳನ್ನು ಸಿದ್ಧಪಡಿಸಿದ್ದೇವೆ” ಎಂದು ಬ್ರೂಕ್ ಸ್ಪಷ್ಟಪಡಿಸಿದ್ದಾರೆ.

ಅಬ್ಬರಿಸಿದ್ದ ವೈಭವ್

ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ಆತ್ಮವಿಶ್ವಾಸವು ಅವರು ಯಾವುದೇ ಸವಾಲಿಗೆ ಸಿದ್ಧರಾಗಿದ್ದಾರೆ ಎಂದು ಸೂಚಿಸುತ್ತದೆ. ಇತ್ತೀಚೆಗೆ, ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ತ್ರಿಕೋನ ಸರಣಿಯ ಫೈನಲ್‌ನಲ್ಲಿ, ಅವರು ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ವಿಧ್ವಂಸಕ ಇನ್ನಿಂಗ್ಸ್ ಆಡಿ ವಿಶ್ವದ ಗಮನ ಸೆಳೆದಿದ್ದರು. ಇದಲ್ಲದೆ, ರಾಜಸ್ಥಾನ್ ರಾಯಲ್ಸ್ ಐಪಿಎಲ್‌ನಲ್ಲಿ ಕ್ವಾಲಿಫೈಯರ್ 2 ಅನ್ನು ದಾಟಲು ವಿಫಲವಾದರೂ, ವೈಭವ್ ಸೂರ್ಯವಂಶಿ ತಮ್ಮ ಅತ್ಯುತ್ತಮ ಪ್ರದರ್ಶನಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದರು.

ಆರಂಭಿಕ ಪರ ನಿಂತ ಶ್ರೇಯಸ್ ಅಯ್ಯರ್

ವೈಭವ್​ ಪದಾರ್ಪಣೆ ಮಾಡುವುದನ್ನ ನೋಡಲು ಇಡೀ ವಿಶ್ವವೇ ಕಾದು ಕುಳಿತಿದೆ. ಆದರೆ ನಾಯಕ ಶ್ರೇಯಸ್​ ಅಯ್ಯರ್ ಹಾಗೂ ಮ್ಯಾನೇಜ್​ಮೆಂಟ್ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್​​ ಪರ ನಿಲ್ಲಲು ನಿರ್ಧರಿಸಿದೆ. 2026 ರ ಟಿ 20 ವಿಶ್ವಕಪ್‌ನಲ್ಲಿ ಸತತ ಮೂರು ಅರ್ಧಶತಕಗಳನ್ನು ಬಾರಿಸಿದ್ದ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಪ್ರಸ್ತುತ ಫಾರ್ಮ್ ಕಳೆದುಕೊಳ್ಳುವ ಮೂಲಕ ಹೋರಾಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 5 ರನ್​ ಗಳಿಸಿದರೆ, ಎರಡನೇ ಪಂದ್ಯದಲ್ಲಿ ಅವರು ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕ್ ಆಗಿ ಔಟಾದರು.

ಸಂಜು ಸ್ಯಾಮ್ಸನ್​ಗೆ ಎಡಗೈ ಅಸ್ತ್ರ

ಎಡಗೈ ವೇಗಿ ಜೈ ಮುಂದ್ರಾ ಅವರನ್ನು ಎರಡೂ ಪಂದ್ಯಗಳಲ್ಲಿ ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು. ಇದರ ಲಾಭವನ್ನು ಪಡೆದುಕೊಂಡ ಇಂಗ್ಲೆಂಡ್, ಸ್ಯಾಮ್ಸನ್ ಅವರನ್ನು ಟಾರ್ಗೆಟ್ ಮಾಡಲು ಲ್ಯೂಕ್ ವುಡ್ ಅಥವಾ ಸ್ಯಾಮ್ ಕರನ್ ಅವರನ್ನು ಆರಂಭದಲ್ಲಿಯೇ ನಿಯೋಜಿಸಲು ಯೋಜಿಸುತ್ತಿದೆ. ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧ ಬಲವಾದ ದಾಖಲೆಯನ್ನು ಹೊಂದಿರುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಐರ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಆರಂಭಿಕರ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಈ ಸರಣಿಯಲ್ಲೂ ಅವರಿಬ್ಬರಿಗೂ ಅವಕಾಶ ನೀಡುವುದು ಪಕ್ಕಾಗಿದೆ.

15 ವರ್ಷದ ವೈಭವ್ ಸೂರ್ಯವಂಶಿ ಈ ಪ್ರವಾಸದಲ್ಲಿ ಪದಾರ್ಪಣೆ ಮಾಡುವುದು ಖಚಿತವಾದರೂ, ಇಂದು ಅದು ಸಂಭವಿಸುತ್ತದೆಯೇ ಎಂಬುದು ಟಾಸ್ ನಂತರವೇ ತಿಳಿಯಲಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: ಸಂಜು, ಅಭಿಷೇಕ್ ಅಲ್ಲ, ಆತನನ್ನ ಕಂಟ್ರೋಲ್ ಮಾಡಲು ಇಂಗ್ಲೆಂಡ್ ಮಹಾ ಪ್ಲಾನ್! 15ರ ಪೋರನ ಬಗ್ಗೆ ಇಂಗ್ಲೆಂಡ್​ ಕ್ಯಾಪ್ಟನ್ ಸಂಚಲನ ಹೇಳಿಕೆ​



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed