Darshan Case: ದರ್ಶನ್​ ಕೇಸ್​​ಗೆ ಬಿಗ್​ ಟ್ವಿಸ್ಟ್​ ಕೊಟ್ಟ ‘ಸಾಕ್ಷಿ’! ಕೋರ್ಟ್​​ ಟ್ರಯಲ್ ವೇಳೆ ಸ್ಪೋಟಕ ಮಾಹಿತಿ ಬಯಲು | | ACTPnews

News18


Last Updated:

ಕೊಲೆ ಆರೋಪಿ ದರ್ಶನ್​ ಕೇಸ್​​​ಗೆ ಬಿಗ್​ ಟ್ವಿಸ್ಟ್​ ಕೊಡುತ್ತಾ ಈ ಸಾಕ್ಷಿಯ ಹೇಳಿಕೆ? ದಾಸನಿಗೆ ಶುರುವಾಗುತ್ತಾ ಮತ್ತೊಂದು ಸಂಕಷ್ಟ? ಅಸಲಿಗೆ ಈ ಸಾಕ್ಷಿ ಕೋರ್ಟ್​ ಮುಂದೆ ಹೇಳಿದ್ದೇನು ಗೊತ್ತಾ? ದರ್ಶನ್​ಗೆ ಢವಢವ.

News18
News18

ಬೆಂಗಳೂರು (ಜು.01): ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​​ನಲ್ಲಿ ಟ್ರಯಲ್ ನಡೆಯುತ್ತಿದ್ದು, ಸಾಕ್ಷಿ ವಿಚಾರಣೆ​​ ವೇಳೆ ಸ್ಫೋಟಕ ಮಾಹಿತಿ ರಿವೀಲ್ ಆಗಿದೆ. ಕೊಲೆ ಆರೋಪಿ, ನಟ ದರ್ಶನ್ (Darshan) ​ ಕೇಸ್​​​ಗೆ ಬಿಗ್​ ಟ್ವಿಸ್ಟ್​ ಕೊಡುತ್ತಾ ಈ ಸಾಕ್ಷಿಯ ಹೇಳಿಕೆ? ದಾಸನಿಗೆ ಶುರುವಾಗುತ್ತಾ ಮತ್ತೊಂದು ಸಂಕಷ್ಟ? ಅಸಲಿಗೆ ಈ ಸಾಕ್ಷಿ ಕೋರ್ಟ್​ ಮುಂದೆ ಹೇಳಿದ್ದೇನು?

ಸಾಕ್ಷಿಗೆ ಬೆದರಿಕೆ ಹಾಕಿದ್ಯಾರು?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ವೇಳೆ ಸ್ಪೋಟಕ ಬೆಳವಣಿಗೆ ನಡೆದಿದ್ದು, ಟ್ರಯಲ್ ವೇಳೆ ಅಪರಿಚಿತರು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಂದಿದೆ.  ಪ್ರಾಸಿಕ್ಯೂಷನ್ ಸಾಕ್ಷಿ ಓರ್ವರಿಗೆ ಅಪರಿಚಿತ ವ್ಯಕ್ತಿಯಿಂದ  ವಾಟ್ಸಾಪ್ ಮೂಲಕ ಕರೆ ಬಂದಿದ್ದು, ಆರೋಪಿಗಳ ಪರವಾಗಿ ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕ್ತಿದ್ದಾರೆ ಎಂದು ಸಾಕ್ಷಿಯೋರ್ವ ಕೋರ್ಟ್​​ಗೆ ತಿಳಿಸಿದ್ದಾರೆ.

ಸಾಕ್ಷಿಗೆ ಅಪರಿಚಿತ ಹೇಳಿದ್ದೇನು?

1. ಆರೋಪಿಗಳನ್ನು ಗುರುತಿಸಲು ಆಗುವುದಿಲ್ಲ ಎಂದು ಹೇಳು

2. ಬಾರ್ ಬಳಿ ಇರುವ ಸಿಸಿಟಿವಿಯನ್ನ ಪೊಲೀಸರು ಎತ್ತುಕೊಂಡು ಹೋದ್ರು ಎಂದು ಹೇಳು

3. ಕಿಡ್ನಾಪ್ ಮಾಡಿದ ಆರೋಪಿಗಳನ್ನ ಗುರುತಿಸಲಾಗುವುದಿಲ್ಲ ಎಂದು ಹೇಳು

4. ಪೊಲೀಸರ ಮಹಜರಿನಲ್ಲಿ ಏನಿದೆ ಎಂಬುವುದು ನನಗೆ ಗೊತ್ತಿಲ್ಲ ಅಂತೇಳು

ಈ ರೀತಿ ಸಾಕ್ಷಿಗೆ ಬೆದರಿಕೆ ಹಾಕಲಾಗ್ತಿದೆ ಎನ್ನುವ ಮಾಹಿತಿ ಹೊರ ಬಂದಿದ್ದು, ಇದ್ರಿಂದ ನನಗೆ ಭಯವಾಗುತ್ತಿದೆ. ನಮ್ಮ ಬಾರ್ ಬಳಿ ಅನುಮಾನಸ್ಪಾದ ವ್ಯಕ್ತಿಗಳು ಓಡಾಟ ಮಾಡುತ್ತಿದ್ದಾರೆ‌ ಎಂದು ಕೋರ್ಟ್​ ಟ್ರಯಲ್ ವೇಳೆ ನ್ಯಾಯಾಧೀಶರ ಮುಂದೆ ಸಾಕ್ಷಿಗಳು ತಿಳಿಸಿದ್ದಾರೆ.

ಸಾಕ್ಷಿ ರಕ್ಷಣೆಗೆ ಕೋರ್ಟ್ ಸೂಚನೆ

59 CCH ನ್ಯಾಯಾಲಯದಲ್ಲಿ ನಡೆಯುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ನಡೀತಿದ್ದು, ಸಾಕ್ಷ್ಯ ತಿರುಚಲು ಯತ್ನಿಸಿರುವುದಕ್ಕೆ ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸುವಂತೆ ಸಾಕ್ಷಿಗೆ ಜಡ್ಜ್ ಸೂಚನೆ ನೀಡಿದ್ದಾರೆ. ಸಾಕ್ಷಿ ಹೇಳಿಕೆ ದಾಖಲಿಸಿಕೊಂಡ 59 CCH ನ್ಯಾಯಾಧೀಶರು‌‌, ಸಾಕ್ಷಿ ನುಡಿಯುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಭದ್ರತೆ ಒದಗಿಸುವಂತೆ ತನಿಖಾಧಿಕಾರಿಗೆ  ಸೂಚನೆ ನೀಡಿದ್ದಾರೆ.

ದರ್ಶನ್​​ಗೆ ಶುರುವಾಗುತ್ತಾ ‘ಸಾಕ್ಷಿ’ ಸಂಕಷ್ಟ?

ರೇಣುಕಾಸ್ವಾಮಿ ಕೇಸ್​ನಲ್ಲಿ ನಟ ದರ್ಶನ್ ಎ2 ಆಗಿದ್ದಾರೆ. ಟ್ರಯಲ್​ ವೇಳೆ 60ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಯುತ್ತಿದ್ದು, ಜೈಲಿನಲ್ಲಿರೋ ದರ್ಶನ್​ ಹಾಗೂ ಪವಿತ್ರಾ ಗೌಡಗೆ ಢವಢವ ಶುರುವಾಗಿದೆ. ಯಾವ ಸಾಕ್ಷಿಗಳು ಆರೋಪಿಗಳಿಗೆ ಸಂಕಷ್ಟ ತರುತ್ತೆ ಅನ್ನೋ ಟೆನ್ಷನ್ ಹೆಚ್ಚಿದೆ. ಇದರ ನಡುವೆಯೇ ಸಾಕ್ಷಿ ಬೆದರಿಕೆ ಹಾಕಿದ ವಿಚಾರ ಬಯಲಾಗಿದ್ದು, ಬ್ಲ್ಯಾಕ್​ ಮೇಲ್​ ಮಾಡಿದ್ದು ಯಾರು ಅನ್ನೋ ತನಿಖೆ ಕೂಡ ನಡೆಯುವ ಸಾಧ್ಯತೆ ಇದೆ.

ಜೈಲಿಗೆ ಹೋದ್ಮೇಲೂ ರಾಜಾಥಿತ್ಯ, ಅಸಭ್ಯ ಸನ್ನೆ ಸೇರಿದಂತೆ ಅನೇಕರ ವಿಚಾರಕ್ಕೆ ದರ್ಶನ್​ ಸುದ್ದಿಯಾಗಿದ್ರು. ಇದೀಗ ಸಾಕ್ಷಿ ಬೆದರಿಕೆ ಹಿಂದಿನ ಸೂತ್ರಧಾರರು ಯಾರು ಅನ್ನೋ ವಿಚಾರದಲ್ಲೂ ಸಂಕಷ್ಟಕ್ಕೆ ಸಿಲುಕ್ತಾರಾ ಈ ನಟ ಅನ್ನೋ ಪ್ರಶ್ನೆ ಮೂಡಿದೆ.

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed