Garuda Ram: ತೆಲುಗು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಕೆಜಿಎಫ್ ಗರುಡ! ಯಾವ ಮೂವಿ? ಯಾವಾಗ ರಿಲೀಸ್? | | ACTPnews

ಕೆಜಿಎಫ್ ಗರುಡ ರಾಮ ಕಂಪ್ಲೀಟ್ ಚೇಜ್; ನಾಗಬಂಧ ಚಿತ್ರದಲ್ಲಿ ಇವರದ್ದೇ ಹವಾ!


Last Updated:

ಕೆಜಿಎಫ್ ಚಿತ್ರದ ಖಳನಾಯಕ ನಟ ಗರುಡ ರಾಮ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ತೆಲುಗು ನಾಗಬಂಧಂ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಇವರು ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಇದರ ವಿವರ ಇಲ್ಲಿದೆ ಓದಿ.

ಕೆಜಿಎಫ್ ಗರುಡ ರಾಮ ಕಂಪ್ಲೀಟ್ ಚೇಜ್; ನಾಗಬಂಧ ಚಿತ್ರದಲ್ಲಿ ಇವರದ್ದೇ ಹವಾ!
ಕೆಜಿಎಫ್ ಗರುಡ ರಾಮ ಕಂಪ್ಲೀಟ್ ಚೇಜ್; ನಾಗಬಂಧ ಚಿತ್ರದಲ್ಲಿ ಇವರದ್ದೇ ಹವಾ!

ಕೆಜಿಎಫ್ ಚಿತ್ರದ (KGF Movie) ಗರುಡ ರಾಮ್ ಕಂಪ್ಲೀಟ್ ಬದಲಾಗಿದ್ದಾರೆ. ಸದಾ ಉದ್ದನೆಯ ಗಡ್ಡದಲ್ಲಿಯೇ ಇವರು ಕಾಣಿಸುತ್ತಿದ್ದರು. ಆದರೆ, ಇದೀಗ ಕ್ಲೀನ್ ಸೇವ್ ಲುಕ್ (Clean Shave Look) ಅಲ್ಲಿಯೇ ಇದ್ದಾರೆ. ಸಖತ್ ಸ್ಟೈಲಿಶ್ ಆಗಿಯೂ ಕಾಣಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ನಾಗಬಂಧಂ ಚಿತ್ರದ (Nagabandham Movie) ಪ್ರೆಸ್ ಮೀಟ್ ಅಲ್ಲಿ ಇವರು ಈ ಹೊಸ ರೂಪದಲ್ಲಿ (New Look) ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ. ಯಾರಪ್ಪ ಇದು ಹೊಸಬರು ಅನ್ನುವ ಹಾಗೇನೆ ಮಿಂಚಿದ್ದಾರೆ. ಇವರ ಹೊಸ ಲುಕ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕೆಜಿಎಫ್ ಗರುಡ ರಾಮ್ ಕಂಪ್ಲೀಟ್ ಚೇಂಜ್

ಗುರುಡ ರಾಮ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಕ್ಲೀನ್ ಸೇವ್ ಲುಕ್ ಅಲ್ಲಿಯೇ ಇವರು ಕಾಣಿಸುತ್ತಿದ್ದಾರೆ. ಸದಾ ಲಾಂಗ್ ಬಿಯರ್ಡ್ ಮತ್ತು ಲಾಂಗ್ ಹೇರ್ ಸ್ಟೈಲ್ ಅಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು.
kgf fame garuda ram new look surprise at nagabandham movie press meet in bengaluru

ನಾಗಬಂಧಂ ಚಿತ್ರದಲ್ಲಿ ನಾಗಸಾಧು ರೋಲ್ (ಚಿತ್ರ ಕೃಪೆ: ಗರುಡ ರಾಮ್ ಇನ್‌ಸ್ಟಾಗ್ರಾಮ್)

ಆದರೆ, ನಾಗಬಂಧಂ ಚಿತ್ರದ ಪ್ರೆಸ್ ಮೀಟ್ ಅಲ್ಲಿ ಗರುಡ ರಾಮ್ ವಿಭಿನ್ನವಾಗಿಯೇ ಕಾಣಿಸಿಕೊಂಡಿದ್ದಾರೆ. ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಇವರು ಗರುಡ ರಾಮ್ ಹೌದೋ ಅಲ್ವೋ ಅನ್ನುವ ಹಾಗೇನೆ ಎಲ್ಲರೂ ನೋಡಿದ್ದಾರೆ.

ನಾಗಬಂಧಂ ಚಿತ್ರದಲ್ಲಿ ನಾಗಸಾಧು ರೋಲ್

ನಾಗಬಂಧಂ ಸಿನಿಮಾದಲ್ಲಿ ಗರುಡ ರಾಮ್ ಅವರು ನಾಗಾ ಸಾಧು ರೋಲ್ ಮಾಡಿದ್ದಾರೆ. ಈ ಪಾತ್ರಕ್ಕಾಗಿಯೇ ಹೆಚ್ಚು ಕಡಿಮೆ ಸತತ 8 ಗಂಟೆ ಮೇಕ್‌ಅಪ್ ಗಾಗಿಯೇ ಕುಳಿತುಕೊಂಡಿದ್ದಾರೆ.

ಏನು ತಿನ್ನದೇನೆ ರಾತ್ರಿ ಇಡೀ ಶೂಟಿಂಗ್ ಕೂಡ ಮಾಡಿದ್ದಾರೆ. ಮುಂಬೈನಿಂದ ಬಂದ ಮೇಕ್‌ಅಪ್ ಕಲಾವಿದರು ಗರುಡ ರಾಮ್ ಅವರಿಗೆ ಮೇಕ್‌ಅಪ್ ಮಾಡಿದ್ದಾರೆ ಅಂತಲೂ ಗರುಡ ರಾಮ್ ಹೇಳಿಕೊಂಡಿದ್ದಾರೆ.

ಜುಲೈ-3 ರಂದು ರಿಲೀಸ್

ನಾಗಬಂಧಂ ಚಿತ್ರ ಪ್ಯಾನ್ ಇಂಡಿಯಾ ಚಿತ್ರವೇ ಆಗಿದೆ. ಜುಲೈ-3 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಬಹು ಕೋಟಿ ವೆಚ್ಚದ ಈ ಚಿತ್ರದಲ್ಲಿ ಕನ್ನಡದ ನಟರು ಇದ್ದಾರೆ. ಕೆಜಿಎಫ್ ಚಿತ್ರದ ಗರುಡ ರಾಮ್, ಅವಿನಾಶ್, ನಾಗ್ ಅಶ್ವಿನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

kgf fame garuda ram new look surprise at nagabandham movie press meet in bengaluru

ಕೆಜಿಎಫ್ ಗರುಡ ರಾಮ್ ಕಂಪ್ಲೀಟ್ ಚೇಂಜ್

ಈ ಚಿತ್ರವನ್ನ ಅಭಿಷೇಕ್ ನಾಮಾ ಡೈರೆಕ್ಷನ್ ಮಾಡಿದ್ದಾರೆ. ಕೇರಳದ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನಿಗೂಢ ‘ನಾಗಬಂಧಂ’ ರಹಸ್ಯ ಮತ್ತು ಹಿಮಾಲಯದ ಹಿನ್ನೆಲೆಯಲ್ಲಿ ಈ ಚಿತ್ರ ಸಾಗುತ್ತದೆ.

ಈ ಚಿತ್ರದ ನಾಯಕ ಯಾರು

ನಾಗಬಂಧಂ ಚಿತ್ರದಲ್ಲಿ ನವ ನಟ ವಿರಾಟ್ ಕರ್ಣ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಇವರು ರುದ್ರ ಅನ್ನುವ ರೋಲ್ ಮಾಡಿದ್ದಾರೆ. ಕನ್ನಡದ ನಟಿ ನಭಾ ನಟೇಶ್ ಇಲ್ಲಿ ಪಾರ್ವತಿ ಹೆಸರಿನ ರೋಲ್ ಮಾಡಿದ್ದಾರೆ.

ಸಿನಿಮಾ ಟ್ರೈಲರ್ ರಿಲೀಸ್

ನಾಗಬಂಧಂ ಚಿತ್ರದ ಟ್ರೈಲರ್ ಇತ್ತೀಚಿಗೆ ರಿಲೀಸ್ ಆಗಿದೆ. ಮೆಚ್ಚುಗೆ ಕೂಡ ಪಡೆದುಕೊಂಡಿದೆ. ಚಿತ್ರದ ಎರಡು ಹಾಡು ಕೂಡ ಗಮನ ಸೆಳೆದಿವೆ. ನಮೋ ರೇ ಹಾಗೂ ಸುರ ಸುರ ಹಾಡುಗಳು ಮಿಲಿಯಲ್ ಗಟ್ಟಲೆ ವೀವ್ಸ್ ಪಡೆದುಕೊಂಡಿವೆ.

ತೆಲುಗು ಭಾಷೆಯ ಈ ಚಿತ್ರ ಕನ್ನಡ, ಹಿಂದಿ, ತಮಿಳು ಭಾಷೆಯಲ್ಲೂ ಬರ್ತಿದೆ. ಸದ್ಯಕ್ಕೆ ಈ ಚಿತ್ರದ ಪ್ರಚಾರಕ್ಕೆ ಸಿನಿಮಾ ತಂಡ ಎಲ್ಲೆಡೆ ಓಡಾಡ್ತಿದೆ. ಬೆಂಗಳೂರಿನಲ್ಲಿ ನಡೆದ ಪ್ರೆಸ್ ಮೀಟ್ ಅಲ್ಲಿ ಗರುಡ ರಾಮ್ ಮಿಂಚಿದ್ದಾರೆ. ನಭಾ ನಟೇಶ್ ಚಿತ್ರದ ಹಾಡಿಗೆ ಇಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed