Cinema: ಸಿನಿಮಾ ಶೂಟಿಂಗ್‌ಗೆ 500 ಎಕರೆ ಜೋಳ ಬೆಳದಿದ್ದ ಡೈರೆಕ್ಟರ್! ಯಾವುದು ಆ ಸಿನಿಮಾ? ನಿರ್ದೇಶಕ ಯಾರು ಗೊತ್ತಾ? | | ACTPnews

ಸಾಂಕೇತಿಕ ಚಿತ್ರ


Last Updated:

ಡೈರೆಕ್ಟರ್ ಕ್ರಿಸ್ಟೋಫರ್ ನೊಲನ್ ಅವರು ತಮ್ಮ ‘ಇಂಟರ್‌ಸ್ಟೆಲ್ಲಾರ್’ ಚಲನಚಿತ್ರಕ್ಕಾಗಿ 500 ಎಕರೆ ಪ್ರದೇಶದಲ್ಲಿ ಮಕ್ಕೆಜೋಳ ಬೆಳೆದಿದ್ದರು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಡೈರೆಕ್ಟರ್​ ಕ್ರಿಸ್ಟೋಫರ್ ನೋಲನ್ (Christopher Nolan), ಹಾಲಿವುಡ್ (Hollywood)​ ಸಿನಿಮಾಗಳ ಡೈರೆಕ್ಟರ್​. ಇಂಟರ್​ಸ್ಟೆಲ್ಲರ್​, ದಿ ಡಾರ್ಕ್​ ನೈಟ್​, ಓಪನ್‌ಹೈಮರ್, ಡಂರ್ಕಿಕ್​ ಸೇರಿ ಹಲವು ಸಿನಿಮಾಗಳನ್ನು ಸಿನಿ ಜಗತ್ತಿಗೆ ನೀಡಿ ಸೈ ಎನಿಸಿಕೊಂಡವರು. ಇದುವರೆಗೂ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕ್ರಿಸ್ಟೋಫರ್ ನೊಲನ್​, ತಮ್ಮ ವಿಭಿನ್ನ ಶೈಲಿಯ ಫಿಲ್ಮ್​ ಮೇಕಿಂಗ್​ನಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

, ಹಾಲಿವುಡ್ (Hollywood)​ ಸಿನಿಮಾಗಳ ಡೈರೆಕ್ಟರ್​. ಇಂಟರ್​ಸ್ಟೆಲ್ಲರ್​, ದಿ ಡಾರ್ಕ್​ ನೈಟ್​, ಓಪನ್‌ಹೈಮರ್, ಡಂರ್ಕಿಕ್​ ಸೇರಿ ಹಲವು ಸಿನಿಮಾಗಳನ್ನು ಸಿನಿ ಜಗತ್ತಿಗೆ ನೀಡಿ ಸೈ ಎನಿಸಿಕೊಂಡವರು. ಇದುವರೆಗೂ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕ್ರಿಸ್ಟೋಫರ್ ನೊಲನ್​, ತಮ್ಮ ವಿಭಿನ್ನ ಶೈಲಿಯ ಫಿಲ್ಮ್​ ಮೇಕಿಂಗ್​ನಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಕ್ರಿಸ್ಟೋಫರ್​ ನೋಲಾನ್ ತಮ್ಮ ಚಿತ್ರಗಳಲ್ಲಿ ಗ್ರಾಫಿಕ್ಸ್​​​, ಸಿಜಿಐ ಬಳಸದೆ ಸಿನಿಮಾಗಳನ್ನು ಚಿತ್ರಿಸಿ ಸೈ ಎನಿಸಿಕೊಂಡಿದ್ದಾರೆ. ಇಡೀ ಚಿತ್ರರಂಗವೇ ಡಿಜಿಟಲ್​ ಕ್ಯಾಮರಾ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಬಳಸುತ್ತಿದ್ದರೆ, ನೋಲನ್​ ಐಮ್ಯಾಕ್ಸ್ (IMAX) ರೀಲ್​​ ಕ್ಯಾಮೆರಾದಲ್ಲಿ ತಮ್ಮ ಚಿತ್ರವನ್ನು ಚಿತ್ರೀಕರಿಸುತ್ತಾರೆ.

ಸಿನಿಮಾಕ್ಕಾಗಿ 500 ಎಕರೆ ಮೆಕ್ಕೆಜೋಳ ಬೆಳೆದಿದ್ದ ನಿರ್ದೇಶಕ

ಡೈರೆಕ್ಟರ್​ ಕ್ರಿಸ್ಟೋಫರ್ ನೊಲನ್ ಅವರು ತಮ್ಮ ‘ಇಂಟರ್‌ಸ್ಟೆಲ್ಲಾರ್’ ಚಲನಚಿತ್ರಕ್ಕಾಗಿ 500 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದರು. CGI (ಕಂಪ್ಯೂಟರ್ ಗ್ರಾಫಿಕ್ಸ್) ಬಳಸುವ ಬದಲು, ನೈಜವಾದ ಪರಿಸರವನ್ನು ಸೃಷ್ಟಿಸಲು ಕ್ರಿಸ್ಟೋಪರ್​ ನೊಲನ್​ ಈ ರೀತಿ ಮಾಡಿ, ನಂತರ ಆ ಜೋಳವನ್ನು ಮಾರಿ ಹಣ ಗಳಿಸಿದ್ದರು. ಈ ಮೂಲಕ ಸಿನಿಮಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದರು.
ಗ್ರಾಫಿಕ್ಸ್ ಬೇಡವೇ ಬೇಡ ಅಂದಿದ್ದ ನೊಲನ್

ಸೈನ್ಸ್​​ ಫಿಕ್ಷನ್​ ಕಥೆ ಆಧಾರಿತ ಇಂಟರ್​ಸ್ಟೆಲ್ಲಾರ್​​ ಸಿನಿಮಾ ಸ್ಟೋರಿಯ ಪ್ರಕಾರ, ಭೂಮಿಯ ವಿನಾಶದ ಸಮಯದಲ್ಲಿ ಕೇವಲ ಜೋಳ ಮಾತ್ರ ಬದುಕಿ ಉಳಿಯುವ ಏಕೈಕ ಬೆಳೆಯಾಗಿರುತ್ತದೆ. ಈ ದೃಶ್ಯಗಳಿಗಾಗಿ ಗ್ರಾಫಿಕ್ಸ್ ಬಳಸಲು ನೊಲನ್ ಸಂಪೂರ್ಣವಾಗಿ ನಿರಾಕರಿಸಿದ್ದರು. ತಮಗೆ ಬೇಕಾದ ನೈಜ ವಾತಾವರಣವನ್ನು ಸೃಷ್ಟಿಸಲು ಕೆನಡಾದ ಆಲ್ಬರ್ಟಾ ಎಂಬ ಪ್ರದೇಶದಲ್ಲಿ ಬರೋಬ್ಬರಿ 500 ಎಕರೆ ಕೃಷಿ ಭೂಮಿಯನ್ನು ಪಡೆದು, ಮೆಕ್ಕೆಜೋಳದ ಬೆಳೆ ನಿರ್ಮಿಸಿದರು.

‘ಮ್ಯಾನ್ ಆಫ್ ಸ್ಟೀಲ್’ ಚಿತ್ರದಿಂದ ಸ್ಫೂರ್ತಿ

ಕ್ರಿಸ್ಟೊಫರ್​ ನೊಲಾನ್​ ಈ ಹಿಂದೆ ತಾವು ನಿರ್ದೇಶನ ಮಾಡಿದ್ದ  ‘ಮ್ಯಾನ್ ಆಫ್ ಸ್ಟೀಲ್’ ಚಿತ್ರದ ಚಿತ್ರೀಕರಣದ ವೇಳೆ ಸಣ್ಣ ಪ್ರಮಾಣದಲ್ಲಿ  ಜೋಳವನ್ನು ಬೆಳೆದಿದ್ದರು. ಇದು ಯಶಸ್ವಿಯಾಗಿದ್ದರಿಂದ, ನೊಲನ್ ಅವರು ‘ಇಂಟರ್‌ಸ್ಟೆಲ್ಲಾರ್’ ಚಿತ್ರಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಜೋಳ ಬೆಳೆಯಲು ಧೈರ್ಯ ಮಾಡಿದರು. ಅವರ ಈ ಪ್ಲಾನ್ ಸಖತ್​ ವರ್ಕ್ ಔಟ್ ಆಯಿತು. ಶೂಟಿಂಗ್ ಮುಗಿದ ನಂತರ ತೋಟದಲ್ಲಿದ್ದ ಇಡೀ ಜೋಳದ ಬೆಳೆಯನ್ನು ಚಿತ್ರತಂಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿತು. ಸಿನಿಮಾ ಸೂಪರ್ ಹಿಟ್ ಆಗುವ ಮುನ್ನವೇ, ಈ ಮೆಕ್ಕೆಜೋಳದಿಂದ ಭರ್ಜರಿ ಲಾಭವನ್ನು ಗಳಿಸಿತು.

ಇದೇ ತಿಂಗಳು 17ರಂದು ಕ್ರಿಸ್ಟೋಫರ್ ನೊಲನ್ ನಿರ್ದೇಶನದ ‘ದಿ ಒಡಿಸ್ಸಿ’ ರಿಲೀಸ್​ ಆಗಲಿದೆ.  ಗ್ರೀಕ್ ಮಹಾಕಾವ್ಯ ಹೋಮರ್‌ನ ‘ಒಡಿಸ್ಸಿ’ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ತಯಾರಿಸಲಾಗಿದ್ದು, ಈ ಐತಿಹಾಸಿಕ ಚಿತ್ರವನ್ನು ಐಮ್ಯಾಕ್ಸ್​ 70mm (IMAX) ಕ್ಯಾಮೆರಾಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶೇಷ ಏನಂದ್ರೆ, ಐಮ್ಯಾಕ್ಸ್​​ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಹುನಿರೀಕ್ಷಿತ ಒಡಿಸ್ಸಿ ಚಿತ್ರದಲ್ಲಿ ಮ್ಯಾಟ್ ಡ್ಯಾಮನ್ ಒಡಿಸ್ಸಿಯಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪೆನೆಲೋಪ್ ಆಗಿ ಆನ್ನೆ ಹ್ಯಾಥ್ವೇ ಮತ್ತು ಟೆಲಿಮಾಕಸ್ ಆಗಿ ಟಾಮ್ ಹಾಲೆಂಡ್ ನಟನೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed