Last Updated:
ಇಂಗ್ಲೆಂಡ್ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ 387 ರನ್‌ಗಳ ಬೃಹತ್ ಮೊತ್ತ ದಾಖಲಿಸಿದೆ. ಇದು ಈ ಮೈದಾನದ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಈ ಸುದ್ದಿಯಲ್ಲಿ ಲಾರ್ಡ್ಸ್ ಮೈದಾನದ ಗರಿಷ್ಠ ಚೇಸ್ಗಳ ಬಗ್ಗೆ ತಿಳಿಯೋಣ.
ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಭಾರತ-ಇಂಗ್ಲೆಂಡ್ ನಡುವಿನ 3ನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ಇಂಗ್ಲೆಂಡ್ ತಂಡ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದೆ. ಬೆನ್ ಡಕೆಟ್ 141, ಜೇಕಬ್ ಬೆಥೆಲ್ 91, ಜೋ ರೂಟ್ ಅಜೇಯ 73 ಹಾಗೂ ಜೋಸ್ ಬಟ್ಲರ್ ಅಜೇಯ 41 ರನ್‌ಗಳಿಸಿ ಈ ಬೃಹತ್ ಮೊತ್ತಕ್ಕೆ ನೆರವಾದರು. ಇದು ಈ ಮೈದಾನದಲ್ಲಿ ದಾಖಲಾಗಿರುವ ಅತ್ಯಂತ ಗರಿಷ್ಠ ಮೊತ್ತವಾಗಿದೆ. ಇಲ್ಲಿಯವರೆಗೂ ಲಾರ್ಡ್ಸ್ ಮೈದಾನದಲ್ಲಿ ದಾಖಲಾದ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡ 1975ರಲ್ಲಿ 334 ರನ್‌ಗಳಿಸಿದ್ದು, ಗರಿಷ್ಠ ಸ್ಕೋರ್ ಆಗಿತ್ತು. ಇನ್ನೂ ಈ ಮೈದಾನದಲ್ಲಿ ಗರಿಷ್ಠ ಚೇಸಿಂಗ್ ದಾಖಲೆಯ ಬಗ್ಗೆ ಈ ಸುದ್ದಿಯಲ್ಲಿ ತಿಳಿಯೋಣ.
ರ್ಡ್ಸ್ ಮೈದಾನದಲ್ಲಿ ಅತಿ ಹೆಚ್ಚು ಚೇಸ್ ಮಾಡಿದ ದಾಖಲೆ ಭಾರತದ ಹೆಸರಿನಲ್ಲಿದೆ. 2002ರ ನ್ಯಾಟ್‌ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್, ಮಾರ್ಕಸ್ ಟ್ರೆಸ್ಕೋಥಿಕ್ ಮತ್ತು ನಾಸರ್ ಹುಸೇನ್ ಅವರ ಶತಕಗಳ ನೆರವಿನಿಂದ 325 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 146 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಯುವ ಆಟಗಾರರಾದ ಯುವರಾಜ್ ಸಿಂಗ್ (69 ರನ್) ಮತ್ತು ಮೊಹಮ್ಮದ್ ಕೈಫ್ (ಅಜೇಯ 87 ರನ್) ಅವರ ಅದ್ಭುತ ಜತೆಯಾಟದಿಂದ ಭಾರತ 2 ವಿಕೆಟ್‌ಗಳ ರೋಮಾಂಚಕ ಜಯ ಸಾಧಿಸಿತು.
ಈ ಮೈದಾನದಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ 2ನೇ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿದೆ. 2004ರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆ್ಯಂಡ್ರ್ಯೂ ಸ್ಟ್ರಾಸ್ (100), ಆ್ಯಂಡ್ರ್ಯೂ ಫ್ಲಿಂಟಾಫ್ (123) ಶತಕಗಳ ನೆರವಿನಿಂದ 285/7 ರನ್‌ಗಳಿಸಿತ್ತು. ವೆಸ್ಟ್ ಇಂಡೀಸ್ 49.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 286 ರನ್‌ಗಳಿಸಿ 7 ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಗೇಲ್ ಅಜೇಯ 132 ರನ್‌ಗಳಿಸಿದರೆ, ರಾಮನರೇಶ್ ಸರವಣ್ 89 ರನ್‌ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
3ನೇ ಗರಿಷ್ಠ ಚೇಸ್ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಇಂಗ್ಲೆಂಡ್ ತಂಡ ಗ್ರಹಂ ಗೂಚ್ (136) ಶತಕದ ನೆರವಿನಿಂದ 278/7 ರನ್‌ಗಳಿಸಿತ್ತು. ಈ ಗುರಿಯನ್ನ ಆಸ್ಟ್ರೇಲಿಯಾ ತಂಡ 54.3 ಓವರ್‌ಗಳಲ್ಲಿ (60 ಓವರ್ ಪಂದ್ಯ) 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಜೆಫ್ ಮಾರ್ಷ್ 111 ರನ್‌ಗಳಿಸಿ ಗೆಲುವಿನ ರೂವಾರಿಯಾಗಿದ್ದರು.
4ನೇ ಗರಿಷ್ಠ ಚೇಸ್ ವೆಸ್ಟ್ ಇಂಡೀಸ್ ಹೆಸರಿನಲ್ಲಿದೆ. 1983ರಲ್ಲಿ 60 ಓವರ್‌ಗಳ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 273/6 ರನ್‌ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ವೆಸ್ಟ್ ಇಂಡೀಸ್ ಲೆಜೆಂಡರಿ ಬ್ಯಾಟರ್ ವಿವಿಯನ್ ರಿಚರ್ಡ್ಸ್ ಅವರ ಅಜೇಯ 95 ರನ್‌ಗಳ ನೆರವಿನಿಂದ 57.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.














