ಭಾರತ ತಂಡದ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್ ಅವರು ಮೊದಲು ಬೌಲಿಂಗ್ ಮಾಡುವ ನಿರ್ಧಾರವು ಹವಾಮಾನ ಪರಿಸ್ಥಿತಿಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದರು. “ನಾವು ಮೊದಲು ಬೌಲಿಂಗ್ ಮಾಡುತ್ತೇವೆ. ಮೋಡ ಕವಿದ ವಾತಾವರಣ ಇರುವುದರಿಂದ ಬೌಲರ್‌ಗಳಿಗೆ ಸ್ವಲ್ಪ ಸಹಾಯ ಸಿಗಬಹುದು. ಪಿಚ್ ಚೆನ್ನಾಗಿ ಕಾಣುತ್ತದೆ ಮತ್ತು ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ ಎಂದು ತೋರುತ್ತದೆ, ಜೊತೆಗೆ ವೇಗಿಗಳಿಗೆ ಆರಂಭದಲ್ಲಿ ಸ್ವಲ್ಪ ಸ್ವಿಂಗ್ ಆಗುವ ಅವಕಾಶವಿದೆ. ಜೊತೆಗೆ ಮತ್ತೆ ಮಳೆ ಬರುವ ಸಾಧ್ಯತೆ ಇರುವುದರಿಂದ ಚೇಸಿಂಗ್ ಮಾಡುವಾಗ ನಮಗೆ ಟಾರ್ಗೆಟ್ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ತಿಳಿಸಿದ್ದಾರೆ.
ಮುಂಬರುವ ವಿಶ್ವಕಪ್‌ಗೆ ಮೊದಲು ನಾವು ಸುಮಾರು 15–20 ಏಕದಿನ ಪಂದ್ಯಗಳನ್ನು ಆಡಲಿದ್ದೇವೆ. ನಮಗೆ ಯಾವುದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ನಾವು ವಿಭಿನ್ನ ಸಂಯೋಜನೆಗಳನ್ನು ಪ್ರಯತ್ನಿಸುತ್ತಿದ್ದೇವೆ. ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಪದಾರ್ಪಣೆ ಮಾಡುತ್ತಿದ್ದಾರೆ. ಗುರ್ನೂರ್ ಬ್ರಾರ್ ಮತ್ತು ಹರ್ಷ್ ದುಬೆ ತಮ್ಮ ವೃತ್ತಿಜೀವನದ ಮೊದಲ ಪಂದ್ಯವನ್ನು ಆಡುತ್ತಿದ್ದಾರೆ. ತಂಡದ ಸಂಯೋಜನೆಯ ಭಾಗವಾಗಿ, ಯಶಸ್ವಿ ಜೈಸ್ವಾಲ್, ಪ್ರಿನ್ಸ್ ಯಾದವ್ ಮತ್ತು ಕುಲ್ದೀಪ್ ಯಾದವ್ ಅವರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಲಿಲ್ಲ ಎಂದು ಗಿಲ್ ವಿವರಿಸಿದರು.
ಕೊಹ್ಲಿ ಗಾಯದ ಕಾರಣ ಕೊಹ್ಲಿ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗಾಗಿ ಅವರ ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆಂಬ ಗೊಂದಲವಿತ್ತು. ಇದೀಗ ಕನ್ನಡಿಗ ರಾಹುಲ್ ಆಡುವುದು ಖಚಿತವಾಗಿದೆ. ರಾಹುಲ್ 3ರಲ್ಲಿ ಆಡಿದರೆ, ವಿಕೆಟ್ ಕೀಪರ್ ಇಶಾನ್ ಕಿಶನ್ 5ರಲ್ಲಿ ಫಿನಿಶರ್ ಆಗಿ ಆಡಲಿದ್ದಾರೆ. ಆರಂಭಿಕರಾಗಿ ರೋಹಿತ್-ಗಿಲ್ ಆಡುವುದು ಖಚಿತವಾಗಿದೆ. ಇನ್ನು 4ರಲ್ಲಿ ಶ್ರೇಯಸ್ ಅಯ್ಯರ್, 6 ಮತ್ತು 7ರಲ್ಲಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ. ನಂತರ ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್ ಹಾಗೂ ಪ್ರಸಿದ್ಧ್ ಕೃಷ್ಣ ಕಣಕ್ಕಿಳಿಯಲಿದ್ದಾರೆ.
ಟಾಸ್ ಗೆದ್ದಿದ್ದರೆ ತಾವೂ ಕೂಡ ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದರು ಎಂದು ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ ಹೇಳಿದ್ದಾರೆ. “ನಾವು ಟಾಸ್ ಗೆದ್ದರೆ ಮೊದಲು ಬೌಲಿಂಗ್ ಮಾಡಲು ಬಯಸಿದ್ದೆವು. ಆದರೆ ಟಾಸ್ ನಮ್ಮ ಕೈಯಲ್ಲಿಲ್ಲ, ಅಲ್ಲವೇ? ಪಂದ್ಯದ ಆರಂಭದಿಂದಲೇ ನಾವು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ನಾವು ಇತ್ತೀಚೆಗೆ ಉತ್ತಮವಾಗಿ ಆಡುತ್ತಿದ್ದೇವೆ.
ಆದರೆ, ಭಾರತವನ್ನು ಅವರ ತವರು ನೆಲದಲ್ಲಿ ಎದುರಿಸುತ್ತಿರುವುದು ಇದೇ ಮೊದಲು. ಆದ್ದರಿಂದ, ಇದು ತೀವ್ರ ಪೈಪೋಟಿಯ ಪಂದ್ಯವಾಗಲಿದೆ ಎಂದು ಭರವಸೆ ನೀಡುತ್ತದೆ. ನಾವು ಈ ಸವಾಲಿಗೆ ಸಿದ್ಧರಿದ್ದೇವೆ ಮತ್ತು ತುಂಬಾ ಉತ್ಸುಕರಾಗಿದ್ದೇವೆ. ಇಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ನಾವು ಮೂವರು ಸೀಮರ್‌ಗಳು ಮತ್ತು ಮೂವರು ಸ್ಪಿನ್ನರ್‌ಗಳ ಸಂಯೋಜನೆಯನ್ನು ಫೀಲ್ಡಿಂಗ್ ಇಳಿಯುತ್ತೇವೆ” ಎಂದು ಹಶ್ಮತುಲ್ಲಾ ಶಾಹಿದಿ ಹೇಳಿದ್ದಾರೆ.
ಅಫ್ಘಾನಿಸ್ತಾನ: ಇಬ್ರಾಹಿಂ ಝದ್ರಾನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸೆಡಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಒಮರ್‌ಜೈ, ಮೊಹಮ್ಮದ್ ನಬಿ, ರಶೀದ್ ಖಾನ್, ಮೊಹಮ್ಮದ್ ಸಲೀಮ್ ಸಫಿ, ಎಎಂ ಗಜನ್‌ಫರ್, ಜಿಯಾ-ಉರ್-ರೆಹಮಾನ್ ಶರೀಫಿ.
ಭಾರತ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.












