Last Updated:
ದರ್ಶನ್ ಪತ್ನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲ ಕಮೆಂಟ್ ಮಾಡಿದ್ದು, ಪೋಸ್ಟ್ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ವಿಜಯಲಕ್ಷ್ಮಿ ಹಾಗೂ ಧನ್ವೀರ್ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು ಬ್ಯಾಡ್ ಪೋಸ್ಟ್ ಶೇರ್ ಮಾಡ್ತಿದ್ದಾರೆ.
ಬೆಂಗಳೂರು (ಜೂ.10): ಕೊಲೆ ಆರೋಪಿಯಾಗಿ ದರ್ಶನ್ (Darshan) ಜೈಲು ಸೇರಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಅವರನ್ನ ಟಾರ್ಗೆಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಕುರಿತು ಅವಹೇಳನಕಾರಿ ಪೋಸ್ಟ್ಗಳನ್ನ ಶೇರ್ ಮಾಡ್ತಿದ್ದು, ಇದ್ರಿಂದ ಬೇಸತ್ತ ದರ್ಶನ್ ಪತ್ನಿ ಈ ಹಿಂದೆ ಪೊಲೀಸರಿಗೆ ದೂರು ಸಹ ನೀಡಿದ್ರು. ಇದೀಗ ಮತ್ತೆ ಕಿಡಿಗೇಡಿಗಳು ವಿಜಯಲಕ್ಷ್ಮಿ ಹಿಂದೆ ಬಿದ್ದು ಸೋಶಿಯಲ್ ಮೀಡಿಯಾದಲ್ಲಿ (Social Media) ಬಿಟ್ಟು ಬಿಡದೆ ಕಾಡ್ತಿದ್ದಾರೆ. ಪುಂಡರಿಗೆ ತಕ್ಕ ಪಾಠ ಕಲಿಸೋಕೆ ದರ್ಶನ್ ಪತ್ನಿ ಮುಂದಾಗಿದ್ದಾರೆ.
ದರ್ಶನ್ ಪತ್ನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅಶ್ಲೀಲ ಕಮೆಂಟ್ ಮಾಡಿದ್ದು, ಪೋಸ್ಟ್ಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಈ ಬಾರಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು, ನಕಲಿ ಅಕೌಂಟ್ ತೆರೆದು ಅಶ್ಲೀಲ ಪದಗಳಿಂದ ವಿಜಯಲಕ್ಷ್ಮಿ ಅವರನ್ನ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಲಗಾರ ಯುನಿವರ್ಸಿಟಿ ಎಂಬ ಹೆಸರಿನ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿದ್ದು, ಧನ್ವೀರ್ ಜೊತೆ ಸಿನಿಮಾ ಪ್ರಮೋಷನ್ಗೆಂದು ಹೋದ ವಿಜಯಲಕ್ಷ್ಮಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಜೊತೆಗೆ ಕೆಟ್ಟ, ಕೆಟ್ಟದಾಗಿ ಕಮೆಂಟ್ ಹಾಕಿ ಟ್ರೋಲ್ ಮಾಡಿದ್ದಾರೆ.
ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ ಎಂದು ಬರೆದಿರೋ ಕಿಡಿಗೇಡಿಗಳು, ವಿಜಯಲಕ್ಷ್ಮಿಯ ವೈಯಕ್ತಿಕ ಬದುಕನ್ನು ಗುರಿಯಾಗಿಸಿ ಟ್ರೋಲ್ ಮಾಡಿದ್ದಾರೆ. ಗಂಡ ಜೈಲಿನಲ್ಲಿ ಇದ್ದಾನೆ, ಇತ್ತ ವಿಜಯಲಕ್ಷ್ಮಿ ರ್ಯಾಪಿಡ್ ಡ್ರೈವರ್ ಕಾರಿನಲ್ಲಿ ಓಡಾಟ ಎಂದೆಲ್ಲಾ ಅಶ್ಲೀಲ ಪದ ಬಳಸಿ ನಿಂದನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನಿರಂತರ ಟ್ರೋಲಿಂಗ್ಗೆ ಬೇಸತ್ತ ವಿಜಯಲಕ್ಷ್ಮಿ, ಸೋಷಿಯಲ್ ಮೀಡಿಯಾ ಕಿಡಿಗೇಡಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ವೈರಲ್ ಆಗ್ತಿರೋ ಕಮೆಂಟ್ ಹಾಗೂ ಪೋಸ್ಟ್ ಬಗ್ಗೆ ಪೊಲೀಸರ ಗಮನಕ್ಕೂ ತಂದಿದ್ದಾರೆ.
ನಕಲಿ ಅಕೌಂಟ್ ತೆರೆದು ಅಶ್ಲೀಲ ಪದಗಳಿಂದ ನಿಂದನೆ ಮಾಡ್ತಿರುವವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಸೈಬರ್ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಪೊಲೀಸರ ಬಳಿ ವಿಜಯಲಕ್ಷ್ಮಿ ಮನವಿ ಮಾಡಿದ್ದು, ನಕಲಿ ಖಾತೆಗಳನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.
(ವರದಿ: ಗಂಗಾಧರ್, ನ್ಯೂಸ್18 ಕನ್ನಡ, ಬೆಂಗಳೂರು)














