Last Updated:
ಅಫ್ಘಾನಿಸ್ತಾನ ವಿರುದ್ಧ ಮುಂಬರಲಿರುವ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬೀಳುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಅವರು ತಮ್ಮ ಹ್ಯಾಮ್‌ಸ್ಟ್ರಿಂಗ್ (Hamstring) ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಹರ್ಷಿತ್ ರಾಣಾ (Harshit Rana) ಅವರ ಕುರಿತು ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ದೆಹಲಿಯ ಈ ಪ್ರತಿಭಾವಂತ ವೇಗಿ ಅಫ್ಘಾನಿಸ್ತಾನ ವಿರುದ್ಧ ಮುಂಬರಲಿರುವ ಮೂರು ಪಂದ್ಯಗಳ ಟಿ20 ಸರಣಿಯಿಂದ ಹೊರಬೀಳುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಅವರು ತಮ್ಮ ಹ್ಯಾಮ್‌ಸ್ಟ್ರಿಂಗ್ (Hamstring) ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಮತ್ತು ಅವರು ಪಂದ್ಯಕ್ಕೆ ಬೇಕಾದ ದೈಹಿಕ ಫಿಟ್ನೆಸ್ ಪಡೆಯಲು ಇನ್ನು ಕೆಲವು ದಿನಗಳ ಕಾಲಾವಕಾಶದ ಅಗತ್ಯವಿದೆ. ಹಾಗಾಗಿ ಅವರು ಅಫ್ಘಾನ್ ಸರಣಿಯಿಂದ ಹೊರಬೀಳಬಹುದು ಎಂಬ ಮಾತು ಕೇಳಿಬರುತ್ತಿದೆ.














