ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 8 ವಿಕೆಟ್ ಕಲೆದುಕೊಂಡು 564 ರನ್ಗಳ ಭಾರೀ ಮೊತ್ತ ದಾಖಲಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಕನ್ನಡಿಗ ಕೆಎಲ್ ರಾಹುಲ್ 100, ನಾಯಕ ಶುಭ್ಮನ್ ಗಿಲ್ 126, ಸಾಯಿ ಸುದರ್ಶನ್ 81, ರಿಷಭ್ ಪಂತ್ 81, ವಾಷಿಂಗ್ಟನ್ ಸುಂದರ್ ಅಜೇಯ 52 ರನ್ಗಳಿಸಿದ್ದರು. ಅಫ್ಘಾನಿಸ್ತಾನದ ಪರ ಮೊಹಮ್ಮದ್ ಸಲೀಮ್ ಸಫಿ 140ಕ್ಕೆ6, ಜಿಯಾವುರ್ ರೆಹಮಾನ್ ಶರೀಫ್ ಹಾಗೂ ಹಸ್ಮತ್ವುಲ್ಲಾ ಶಾಹಿದಿ ತಲಾ 1 ವಿಕೆಟ್ ಪಡೆದಿದ್ದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ಥಾನ ತಂಡವು 2ನೇ ದಿನದಾಟದ ಅಂತ್ಯಕ್ಕೆ 113/5 ರನ್ಗಳಿಸಿತ್ತು. 3ನೇ ದಿನ ಅಫ್ಘಾನಿಸ್ತಾನ ತಂಡ ಮೊದಲ ಇನ್ನಿಂಗ್ಸ್ನಲ್ಲಿ 152 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನ್ನಿಂಗ್ಸ್ನಲ್ಲಿ ಪದಾರ್ಪಣೆ ಬೌಲರ್ ಮಾನವ್ ಸುತಾರ್ 6 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ 3 ಹಾಗೂ ಸುಂದರ್ 1 ವಿಕೆಟ್ ಪಡೆದರು.
ಫಾಲೋ ಆನ್ಗೆ ಗುರಿಯಾದ ಅಫ್ಘಾನ್ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 112 ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಪಂದ್ಯವು ಮೂರನೇ ದಿನವೇ ಮುಗಿಯಿತು. 2ನೇ ಇನ್ನಿಂಗ್ಸ್ನಲ್ಲಿ ಸೆದಿಕುಲ್ಲಾ ಅಟಲ್ 42, ರಹ್ಮಾನುಲ್ಹಾ ಗುರ್ಬಾಜ್ 24 ಹಾಗೂ ರೆಹ್ಮತ್ ಶಾ ಮಾತ್ರ ಎರಡಂಕಿ ಮೊತ್ತ ದಾಟಿದರು.
ಮಾನವ್ ಸುತಾರ್ ಪ್ರಥಮ ಇನ್ನಿಂಗ್ಸ್ನಲ್ಲಿ 6 ವಿಕೆಟ್ ಪಡೆದು ಮಿಂಚದರೆ. ಎರಡನೇ ಇನ್ನಿಂಗ್ಸ್ನಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಒಟ್ಟು 7 ವಿಕೆಟ್ ಕಬಳಿಸಿ ಭಾರತದ ಬೃಹತ್ ಜಯಕ್ಕೆ ಕಾರಣರಾದರು. ಕುಲದೀಪ್ 30ಕ್ಕೆ3, ಸುಂದರ್ 36ಕ್ಕೆ4, ಮಾನವ್ ಸುತಾರ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
* ಇನ್ನಿಂಗ್ಸ್ ಮತ್ತು 300 ರನ್ vs ಅಫ್ಘಾನಿಸ್ತಾನ, ಮುಲ್ಲನ್ಪುರ, 2026
* ಇನ್ನಿಂಗ್ಸ್ ಮತ್ತು 272 ರನ್ vs ವೆಸ್ಟ್ ಇಂಡೀಸ್, ರಾಜ್ಕೋಟ್, 2018
* ಇನ್ನಿಂಗ್ಸ್ ಮತ್ತು 262 ರನ್ vs ಅಫ್ಘಾನಿಸ್ತಾನ, ಬೆಂಗಳೂರು, 2018
* ಇನ್ನಿಂಗ್ಸ್ ಮತ್ತು 239 ರನ್ vs ಬಾಂಗ್ಲಾದೇಶ, ಮಿರ್ಪುರ್, 2007
* ಇನ್ನಿಂಗ್ಸ್ ಮತ್ತು 239 ರನ್ vs ಶ್ರೀಲಂಕಾ, ನಾಗ್ಪುರ, 2017
ಇವು ಭಾರತದ ಗೆಲುವುಗಳಾದರೆ, ಭಾರತದ ನೆಲದಲ್ಲಿ ಇದಕ್ಕಿಂತ ದೊಡ್ಡದಾದ ಇನ್ನಿಂಗ್ಸ್ ಗೆಲುವು ದಾಖಲಿಸಿರುವುದು ವೆಸ್ಟ್ ಇಂಡೀಸ್ ತಂಡ ಮಾತ್ರ. 1958 ರಲ್ಲಿ ಈಡನ್ ಗಾರ್ಡನ್ಸ್ನಲ್ಲಿ ಭಾರತದ ವಿರುದ್ಧವೇ ಇನ್ನಿಂಗ್ಸ್ ಮತ್ತು 336 ರನ್ಗಳ ಜಯ ಸಾಧಿಸಿತ್ತು. ಇಂದಿಗೂ ಇದು ದಾಖಲೆಯಾಗಿ ಉಳಿದಿದೆ.
ಯಾವುದೇ ಏಷ್ಯನ್ ತಂಡ ಸಾಧಿಸಿದ ಇನ್ನಿಂಗ್ಸ್ ಗೆಲುವುಗಳಲ್ಲಿ ಇದಕ್ಕಿಂತ ದೊಡ್ಡದಾದ ಮತ್ತೊಂದು ಗೆಲುವು ಎಂದರೆ, 2002 ರಲ್ಲಿ ಲಾಹೋರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಸಾಧಿಸಿದ ಇನ್ನಿಂಗ್ಸ್ ಮತ್ತು 324 ರನ್ಗಳ ಜಯವಾಗಿದೆ.
* ಇನ್ನಿಂಗ್ಸ್ ಮತ್ತು 300 ರನ್ vs ಭಾರತ, ಮುಲ್ಲನ್ಪುರ, 2026*
* ಇನ್ನಿಂಗ್ಸ್ ಮತ್ತು 262 ರನ್ vs ಭಾರತ, ಬೆಂಗಳೂರು, 2018
* ಇನ್ನಿಂಗ್ಸ್ ಮತ್ತು 73 ರನ್ vs ಜಿಂಬಾಬ್ವೆ, ಹರಾರೆ, 2025
* 103 ರನ್ vs ಭಾರತ, ಬೆಂಗಳೂರು, 2018
* 109 ರನ್ vs ಭಾರತ, ಬೆಂಗಳೂರು, 2018
* 112 ರನ್ vs ಭಾರತ, ಮುಲ್ಲನ್ಪುರ, 2026*
* 115 ರನ್ vs ಬಾಂಗ್ಲಾದೇಶ, ಮಿರ್ಪುರ್, 2023
* 120 ರನ್ vs ವೆಸ್ಟ್ ಇಂಡೀಸ್, ಲಕ್ನೋ, 2019












