IND vs SL: ಆತನೊಬ್ಬನ ಅಜಾಗರೂಕತೆಯಿಂದ ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಸೋತ ಭಾರತ! | ಕ್ರೀಡಾ ಸುದ್ದಿ | ACTPnews

ವಿಪ್ರಜ್ ನಿಗಮ್


Last Updated:

ಈ ಪಂದ್ಯದಲ್ಲಿ ವಿಪ್ರಜ್ ನಿಗಮ್ ಅಜಾಗರೂಕತೆ ಮತ್ತು ಅರ್ಷದ್ ಖಾನ್ ಅವರ ದುಬಾರಿ ತಪ್ಪು ಭಾರತದ ಗೆಲುವಿನ ಅವಕಾಶವನ್ನ ಹಾಳು ಮಾಡಿತು. ಈ ಸೋಲು ಭಾರತ-ಎ ತಂಡದ ಫೈನಲ್ ತಲುಪುವ ಸಾಧ್ಯತೆಯನ್ನು ಕಡಿಮೆ ಮಾಡಿದೆ.

ವಿಪ್ರಜ್ ನಿಗಮ್
ವಿಪ್ರಜ್ ನಿಗಮ್

ಶ್ರೀಲಂಕಾ ಪ್ರವಾಸದ ಸಂದರ್ಭದಲ್ಲಿ ಭಾರತ-ಎ ತಂಡವು ಮತ್ತೊಂದು ಸೋಲನ್ನು ಅನುಭವಿಸಿತು. ತ್ರಿಕೋನ ಏಕದಿನ ಸರಣಿಯ ಭಾಗವಾಗಿ ಸೋಮವಾರ ದಂಬುಲ್ಲಾದಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ, ಶ್ರೀಲಂಕಾ-ಎ ತಂಡವು ಸೂಪರ್ ಓವರ್‌ನಲ್ಲಿ ಭಾರತ-ಎ ತಂಡವನ್ನು 6 ರನ್‌ಗಳಿಂದ ಸೋಲಿಸಿತು. ಈ ಮೂಲಕ ತ್ರಿಕೋನ ಸರಣಿಯ ಅಂಕಪಟ್ಟಿಯಲ್ಲಿ 2 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 265 ರನ್‌ಗಳಿಸಿದರೆ, ಶ್ರೀಲಂಕಾ ಕೂಡ 265 ರನ್‌ಗಳಿಸಲಷ್ಟೇ ಶಕ್ತವಾಗಿ ಟೈ ಮಾಡಿಕೊಂಡಿತ್ತು. ಆದರೆ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್‌ಗಳಿಸಿದರೆ, ಭಾರತ ಕೇವಲ 9 ರನ್‌ಗಳಿಸಿ ಸೋಲು ಕಂಡಿತು.

ಈ ಪಂದ್ಯದಲ್ಲಿ ವಿಪ್ರಜ್ ನಿಗಮ್ ಅಜಾಗರೂಕತೆ ಮತ್ತು ಅರ್ಷದ್ ಖಾನ್ ಅವರ ದುಬಾರಿ ತಪ್ಪು ಭಾರತದ ಗೆಲುವಿನ ಅವಕಾಶವನ್ನ ಹಾಳು ಮಾಡಿತು. ಈ ಸೋಲು ಭಾರತ-ಎ ತಂಡದ ಫೈನಲ್ ತಲುಪುವ ಸಾಧ್ಯತೆಯನ್ನು ಕಡಿಮೆ ಮಾಡಿದೆ. ಅಫ್ಘಾನಿಸ್ತಾನ ವಿರುದ್ಧದ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಸಾಧಿಸಿದರೂ ಫೈನಲ್‌ಗೆ ಸ್ಥಾನ ಕಷ್ಟವಾಗಿದೆ. ಭಾರತ ಇಲ್ಲಿಯವರೆಗೆ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಅಫ್ಘಾನಿಸ್ತಾನ ತನ್ನ ಮುಂದಿನ 2 ಪಂದ್ಯಗಳಲ್ಲೂ ಸೋತರೆ ಮಾತ್ರ ಭಾರತಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ಸಿಗಲಿದೆ.

ದುಬಾರಿಯಾದ ನೋ-ಬಾಲ್

ನಿಗದಿತ ಓವರ್‌ಗಳಲ್ಲಿ ಎರಡೂ ತಂಡಗಳ ಸ್ಕೋರ್‌ಗಳು ಸಮಬಲಗೊಂಡಿದ್ದರಿಂದ, ಅಂಪೈರ್‌ಗಳು ಸೂಪರ್ ಓವರ್ ಮೂಲಕ ಫಲಿತಾಂಶ ಪಡೆಯಲು ನಿರ್ಧರಿಸಿದರು. ಅರ್ಷದ್ ಖಾನ್ ಬೌಲಿಂಗ್ ಮಾಡಿದ ಸೂಪರ್ ಓವರ್‌ನಲ್ಲಿ ಶ್ರೀಲಂಕಾ 16 ರನ್ ಗಳಿಸಿತು, ಅವಿಷ್ಕಾ ಫರ್ನಾಂಡೊ ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಅರ್ಷದ್ ಖಾನ್ ಎಸೆದ ನೋ-ಬಾಲ್ ಭಾರತಕ್ಕೆ ದುಬಾರಿಯಾಯಿತು.

ನಂತರ ಭಾರತ-ಎ ತಂಡ ಸೂಪರ್ ಓವರ್‌ನಲ್ಲಿ ಕೇವಲ 9 ರನ್ ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು ಸೋತಿತು. ಸೂರ್ಯಾಂಶ್ ಶೆಡ್ಗೆ ಬೌಂಡರಿ ಬಾರಿಸುವಲ್ಲಿ ವಿಫಲವಾದರೆ, ವೈಭವ್ ಸೂರ್ಯವಂಶಿ ಅವರು ಎದುರಿಸಿದ ಮೂರು ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಗಳಿಸಿದರು. ವಿಪ್ರಜ್ ನಿಗಮ್ ಅವರ ಅಪರೂಪದ ಪೆನಾಲ್ಟಿ ಮತ್ತು ಅರ್ಷದ್ ಖಾನ್ ಅವರ ಸೂಪರ್ ಓವರ್ ಡ್ರಾಮಾ ಶ್ರೀಲಂಕಾ ಎ ವಿರುದ್ಧ ಭಾರತ ಎ ತಂಡದ ರೋಮಾಂಚಕ ಸೋಲಿಗೆ ಕಾರಣವಾಯಿತು.

ವಿಪ್ರಜ್ ನಿಗಮ್ ಅಜಾಗರೂಕತೆ

ಇದಕ್ಕೂ ಮುನ್ನ ಭಾರತ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಭಾರತೀಯ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಸಂರಕ್ಷಿತ ಪ್ರದೇಶದಲ್ಲಿ ಪದೇ ಪದೇ ರನ್ನಿಂಗ್ ಮಾಡಿದ ಕಾರಣ ಅಂಪೈರ್‌ಗಳು ಭಾರತಕ್ಕೆ 10 ರನ್‌ಗಳ ಪೆನಾಲ್ಟಿ ವಿಧಿಸಿದರು. ಅನುಕುಲ್ ರಾಯಲ್ ಒಮ್ಮೆ ಈ ಸಂರಕ್ಷಿತ ಪ್ರದೇಶದಲ್ಲಿ ಓಡಿದರು. ಇದರಿಂದ ಅಂಪೈರ್ ವಾರ್ನಿಂಗ್ ಕೊಟ್ಟರು. ನಂತರ ವಿಪ್ರಜ್ ನಿಗಮ್ ಕೂಡ ವಾರ್ನಿಂಗ್ ನೀಡಿದ ನಂತರವೂ ಅದೇ ತಪ್ಪನ್ನ ಮಾಡಿದ್ದರಿಂದ ಶ್ರೀಲಂಕಾ ತಂಡಕ್ಕೆ 10 ರನ್‌ಗಳು ದೊರೆತವು. ಒಂದು ಈ 10 ಸುಲಭ ರನ್ ಶ್ರೀಲಂಕಾ ತಂಡಕ್ಕೆ ಸಿಗದಿದ್ದರೆ ಭಾರತ ತಂಡವೇ ಈ ಪಂದ್ಯವನ್ನ ಗೆಲ್ಲುತ್ತಿತ್ತು.

ಸೂಪರ್ ಓವರ್‌ನಲ್ಲಿ ಹೈ ಡ್ರಾಮಾ

ಪಂದ್ಯ ಟೈ ಆದ ನಂತರ ಮೈದಾನದಲ್ಲಿ ಹೈ ಡ್ರಾಮಾ ನಡೆಯಿತು. ಕಳಪೆ ಬೆಳಕಿನ ಕಾರಣ ನೀಡಿ ಅಂಪೈರ್‌ಗಳು ಸೂಪರ್ ಓವರ್ ನಡೆಸಲು ಹಿಂಜರಿದರು, ಇದು ಭಾರತ-ಎ ನಾಯಕ ತಿಲಕ್ ವರ್ಮಾ ಅವರ ಹತಾಶೆಯನ್ನು ವ್ಯಕ್ತಪಡಿಸಲು ಕಾರಣವಾಯಿತು. ಸೂಪರ್ ಓವರ್ ನಡೆಯಲೇಬೇಕೆಂದು ಅವರು ಒತ್ತಾಯಿಸಿದರು. ಅಂತಿಮವಾಗಿ, ಅಂಪೈರ್‌ಗಳು ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ನಿರ್ಧರಿಸಿದರು. ದುರದೃಷ್ಟವಶಾತ್ ಭಾರತ ತಂಡ ಸೂಪರ್ ಓವರ್‌ನಲ್ಲಿ ಸೋಲು ಕಂಡಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed