Jamun Fruit: ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು?


Last Updated:

ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್‌ ವೆದರ್‌ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ.

ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು?
ಈ ವರ್ಷ ನೇರಳೆ ಭರ್ಜರಿ ಫಸಲು; ಇದು ಬರಗಾಲ ಮುನ್ಸೂಚನೆಯಾ? ವಿಜ್ಞಾನಿಗಳು ಹೇಳೋದೇನು?

ಪ್ರಕೃತಿ ನಮಗೆ ಆಗಾಗ ಕೆಲವು ಸಿಗ್ನಲ್‌ಗಳನ್ನು (Nature Signal) ನೀಡುತ್ತಿರುತ್ತದೆ. ಸದ್ಯ ದೇಶದ ಹಲವು ಭಾಗಗಳಲ್ಲಿ ಒಂದು ವಿಚಿತ್ರ ಪ್ರಕೃತಿ ವಿದ್ಯಾಮಾನ ಬೆಳಕಿಗೆ ಬಂದಿದೆ. ಹಳ್ಳಿಗಳಲ್ಲಿ ಒಂದು ಹಳೆಯ ನಂಬಿಕೆ ಇದೆ, ಯಾವ ವರ್ಷ ಮರಗಳಿಂದ ಅತೀ ಹೆಚ್ಚು ನೇರಳೆ ಹಣ್ಣು (Jamun Fruit) ಹಾಗೂ ಹಲಸು (Jackfruit) ಕೆಳಗೆ ಬಿದ್ದು ಕೊಳೆಯುತ್ತವೋ, ಆ ವರ್ಷ ಭೀಕರ ಬರಗಾಲ ಬರುತ್ತದೆ ಎಂಬುದು ಹಳ್ಳಿಯ ಜನ ನಂಬಿಕೆಯಾಗಿದೆ (Village People Believe). ಸದ್ಯ ಈ ದೃಶ್ಯಗಳು ಹಲವು ಕಡೆ ಕಂಡು ಬರುತ್ತಿದ್ದು, ಹಾಗಾದರೆ ಇದು ನಿಜವೇ? ಭವಿಷ್ಯದ ಬಗ್ಗೆ ಪ್ರಕೃತಿ ನೀಡುತ್ತಿರುವ ಮುನ್ಸೂಚನೆಯೇ? ಇದರ ಹಿಂದಿರುವ ಅಸಲಿ ಸತ್ಯವೇನು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ (Social Media Post) ಜೋರಾಗಿದೆ. ಈ ಹಿನ್ನೆಲೆಯಲ್ಲಿ ABP ನ್ಯೂಸ್​ ವರದಿಯನ್ನು ಪ್ರಕಟಿಸಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬೇಸಿಗೆ ಕಾಲದಲ್ಲಿ ರಸ್ತೆ ಬದಿಯಲ್ಲಿ, ಹೊಲ ಗದ್ದೆಗಳಲ್ಲಿ ಹಿಂದೆಂದೂ ಕಾಣದಷ್ಟು ನೇರಳೆ ಹಣ್ಣಿನ ಫಸಲು ಕಂಡು ಬಂದಿದ್ದು, ಇದರಿಂದ ಹಲವು ಪ್ರದೇಶಗಳಲ್ಲಿ ನೇರಳೆ ಹಣ್ಣಾಗಿ ನೆಲಕ್ಕೆ ಬಿದ್ದು ಕೊಳೆಯುತ್ತಿವೆ. ಕಳೆದ ವರ್ಷ ಕಡಿಮೆ ಹಣ್ಣು ಬಿಟ್ಟಿದ್ದ ಮರದ ಕೊಂಬೆಗಳು ಕೂಡ ಈ ವರ್ಷ ಅತೀ ಹೆಚ್ಚು ಹಣ್ಣು ಬಿಟ್ಟು ಹಣ್ಣಿನ ಭಾರಕ್ಕೆ ಕೆಳಗೆ ಬಾಗಿವೆ. ಆದರೆ, ಈ ಹಣ್ಣುಗಳು ಕೆಳಗೆ ಬಿದ್ದು ಕೊಳೆಯುತ್ತಿರುವುದನ್ನು ನೋಡಿ ಸ್ಥಳೀಯ ರೈತರು ಮತ್ತು ಹಳ್ಳಿಯ ಹಿರಿಯರು ಆತಂಕ ಪಡುತ್ತಿದ್ದಾರೆ. ʻನೇರಳೆ ಹಣ್ಣುಗಳು ಕೊಳೆದರೆ ಬರಗಾಲ ಗ್ಯಾರಂಟಿʼ ಎಂಬ ಮೂಢನಂಬಿಕೆಯೇ ಇದಕ್ಕೆ ಕಾರಣವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಬರೆದುಕೊಂಡಿದ್ದು, ಲಕ್ಷ್ಮೀ ಲಕ್ಕಿ ಎಂಬುವವರು ಕೂಡ ನಮ್ಮ ಅಜ್ಜಿ ಹೀಗೆ ಹೇಳುತ್ತಿದ್ದರು ಎಂದು ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಜ್ಞಾನಿಗಳು ಮತ್ತು ಬಾಟನಿ ಎಕ್ಸ್‌ಪರ್ಟ್ಸ್ ಇದರ ಬಗ್ಗೆ ಹೇಳುವುದೇನು?

ಕೃಷಿ ಮತ್ತು ಸಸ್ಯಶಾಸ್ತ್ರ ತಜ್ಞರ ಪ್ರಕಾರ, ಈ ರೀತಿ ನೇರಳೆ ಹಣ್ಣು ಬಿಡುವುದು ಈ ಹಿಂದೆ ಯಾವುದೇ ಬರಗಾಲದ ವೈಜ್ಞಾನಿಕ ಆಧಾರವಿಲ್ಲ. ಮರಗಳು ತಮ್ಮ ಸುತ್ತಮುತ್ತ ಆಗುವ ಸಣ್ಣಪುಟ್ಟ ಪ್ರಕೃತಿ ಬದಲಾವಣೆಗಳಿಗೂ ಸ್ಪಂದಿಸುತ್ತವೆ. ತಾಪಮಾನ ಏರಿಕೆ, ಮಣ್ಣಿನಲ್ಲಿ ತೇವಾಂಶ ಕೊರತೆ ಮತ್ತು ಅಂತರ್ಜಲ ಮಟ್ಟ ಕುಸಿತದಂತಹ ಕಠಿಣ ಪರಿಸ್ಥಿತಿಯಲ್ಲಿ ಮರಗಳು ತಮ್ಮನ್ನು ತಾವು ಉಳಿಸಿಕೊಳ್ಳಲು ʻಸರ್ವೈವಲ್‌ ಮೆಕಾನಿಸಂʼ ಆಕ್ಟಿವೇಟ್‌ ಮಾಡಿಕೊಳ್ಳುತ್ತವೆ. ಈ ಸಮಯದಲ್ಲಿ ಮರಗಳು ಹೊಸ ಎಲೆಗಳು ಅಥವಾ ಕೊಂಬೆಗಳನ್ನು ಬೆಳೆಸುವ ಬದಲು ತನ್ನ ಸಂತತಿಯನ್ನು ಉಳಿಸಿಕೊಳ್ಳಲು ಹೆಚ್ಚಿನ ಶಕ್ತಿಯನ್ನು ಹಣ್ಣು ಅಥವಾ ಬೀಜಗಳನ್ನು ಉತ್ಪಾದಿಸಲು ಬಳಸಿಕೊಳ್ಳುತ್ತವೆ. ಇದನ್ನು ವಿಜ್ಞಾನಿಗಳು ʻರಿಪ್ರೊಡಕ್ಟೀವ್‌ ರೆಸ್ಪಾನ್ಸ್‌ʼ ಎಂದು ಕರೆಯುತ್ತಾರೆ. ನೇರಳೆ ಹಾಗೂ ಹಲಸಿನ ಮರದ ಬೇರುಗಳು ಆಳವಾಗಿ ಭೂಮಿಯಲ್ಲಿ ಹರಡಿರುವ ಕಾರಣ ಅವು ಅಂತರ್ಜಲದ ಬದಲಾವಣೆಗಳನ್ನು ಬೇಗ ಗಮನಿಸುತ್ತವೆ ಎಂದು ಎಬಿಪಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಸಾಮಾಜಿಕ ಜಾಲತಾಣದ ಪೋಸ್ಟ್
ಮಾರ್ಕೆಟ್‌ನಲ್ಲಿ ನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್

ಒಂದೆಡೆ ಬರಗಾಲದ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕ್ಲಿಯರ್‌ ವೆದರ್‌ ಮತ್ತು ಉತ್ತಮ ಬಿಸಿಲಿನಿಂದಾಗಿ ಹಣ್ಣುಗಳ ಕ್ವಾಲಿಟಿ ಅದ್ಭುತವಾಗಿವೆ. ನಗರಗಳ ಮಾರುಕಟ್ಟೆಗೆ ಭಾರೀ ಪ್ರಮಾಣದಲ್ಲಿ ನೇರಳೆ ಹಣ್ಣುಗಳು ಸರಬರಾಜು ಆಗುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಾಲಿಟಿ ಆಧಾರಿಸಿ ಪ್ರತಿ ಕೆಜಿಗೆ 200 ರಿಂದ 300 ರೂಪಾಯಿ ದರದಲ್ಲಿ ಹಣ್ಣುಗಳು ಮಾರಾಟವಾಗುತ್ತಿವೆ. ರೈತರು ಮತ್ತು ವ್ಯಾಪಾರಿಗಳಿಗೆ ಉತ್ತಮ ಆದಾಯ ತಂದುಕೊಡುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports