Ice skating: ಮೈಸೂರಿನ ಕೀರ್ತಿರಾಜ್ ಸಿಂಗ್ ಐಸ್ ಸ್ಕೆಟಿಂಗ್ ಲೋಕದ ‘ವಂಡರ್ ಕಿಡ್’! | ಮೈಸೂರು ನ್ಯೂಸ್ (Mysuru News) | ACTPnews

ಇಲ್ಲಿ


Last Updated:

ಮೈಸೂರಿನ ಕೀರ್ತಿರಾಜ್ ಸಿಂಗ್ 21ನೇ ರಾಷ್ಟ್ರೀಯ ಐಸ್ ಸ್ಕೆಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ ಗೆದ್ದು, ಸತತ 5 ವರ್ಷ ರಾಷ್ಟ್ರೀಯ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದಾರೆ.

+

ಇಲ್ಲಿ ವಿಡಿಯೋ ನೋಡಿ

ಮೈಸೂರು: ಇವರು ಐಸ್ ಸ್ಕೆಟಿಂಗ್‍ನ (Ice skating) ಮಾಂತ್ರಿಕ ಎಂದರೂ ತಪ್ಪಾಗಲಾರದು. ಕೇವಲ ನಾಲ್ಕು ವರ್ಷದ ಬಾಲಕನಾಗಿದ್ದಾಗ ಸ್ಕೆಟಿಂಗ್ ಲೋಕಕ್ಕೆ ಹೆಜ್ಜೆ ಇಟ್ಟ ಮೈಸೂರಿನ (Mysuru) ಈ ಯುವ ಪ್ರತಿಭೆ (Talent), ಇಂದು ಇಡೀ ಭಾರತವೇ (India) ನಿಬ್ಬೆರಗಾಗುವಂತಹ ಸಾಧನೆ ಮಾಡಿದ್ದಾರೆ. ಹೌದು, ಮೈಸೂರಿನ ಕೀರ್ತಿರಾಜ್ ಸಿಂಗ್ ಸತತ ಐದು ವರ್ಷಗಳಿಂದ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಅಸಾಧ್ಯವಾದುದನ್ನು ಸುಸಾಧ್ಯವಾಗಿಸಿದ್ದಾರೆ.

ಐದು ವರ್ಷ, ಐದು ಬಾರಿಯೂ ಚಾಂಪಿಯನ್

ಇತ್ತೀಚೆಗೆ ಡೆಹ್ರಾಡೂನ್‍ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೆಟಿಂಗ್ ಚಾಂಪಿಯನ್‍ಶಿಪ್-2026ರಲ್ಲಿ ಕೀರ್ತಿರಾಜ್ ಸಿಂಗ್ ಚಿನ್ನದ ಸುರಿಮಳೆಯನ್ನೇ ಗೈದಿದ್ದಾರೆ. ಕೇವಲ ಒಂದು ಚಿನ್ನವಲ್ಲ, ಮೂರು ವಿಭಾಗಗಳಲ್ಲಿ (333 ಮೀ, 500 ಮೀ, 777 ಮೀ) ಚಿನ್ನದ ಪದಕಗಳನ್ನು ಗೆಲ್ಲುವುದರ ಜೊತೆಗೆ, ಸ್ವತಃ ತಮ್ಮದೇ ಹಿಂದಿನ ರಾಷ್ಟ್ರೀಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2022ರಿಂದ 2026ರವರೆಗೆ ನಿರಂತರವಾಗಿ ಐದು ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿ ಉಳಿದಿರುವುದು ಸಾಮಾನ್ಯ ಸಾಧನೆಯಲ್ಲ.

ಶಿಸ್ತು ಮತ್ತು ಪರಿಶ್ರಮದ ಸಂಕೇತ

ಮಹಾಜನ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಕೀರ್ತಿರಾಜ್, ತಮ್ಮ ತರಬೇತುದಾರ ಶ್ರೀಕಾಂತ್ ರಾವ್ ಅವರ ಮಾರ್ಗದರ್ಶನದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಅಕ್ಷರಶಃ ಬೆವರು ಹರಿಸಿದ್ದಾರೆ. “ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದರೆ ಏನು ಬೇಕಾದರೂ ಸಾಧಿಸಬಹುದು” ಎಂಬುದಕ್ಕೆ ಈ ಬಾಲಕನೇ ಜೀವಂತ ಸಾಕ್ಷಿ. ತಂದೆ ರಾಜ್ ಸಿಂಗ್ ಮತ್ತು ತಾಯಿ ರೀತುದೇವಿ ಅವರ ಬೆಂಬಲ ಮತ್ತು ಕೀರ್ತಿರಾಜ್ ಅವರ ದೃಢ ನಿರ್ಧಾರವೇ ಇಂದಿನ ಈ ಭವ್ಯ ಯಶಸ್ಸಿಗೆ ಕಾರಣ. ತಂದೆ ಇಂಟೀರಿಯರ್ ಡಿಸೈನಾರ್ ಆಗಿ ವರ್ಕ್ ಮಾಡ್ತಾ ಇದ್ದಾರೆ.
ಮುಂದಿನ ಗುರಿ ಅಂತರಾಷ್ಟ್ರೀಯ ವೇದಿಕೆ

ರಾಷ್ಟ್ರಮಟ್ಟದಲ್ಲಿ ದಾಖಲೆಗಳನ್ನು ಸೃಷ್ಟಿಸಿರುವ ಕೀರ್ತಿರಾಜ್, ಈಗ ತಮ್ಮ ದೃಷ್ಟಿಯನ್ನು ಅಂತರಾಷ್ಟ್ರೀಯ ವೇದಿಕೆಗಳತ್ತ ನೆಟ್ಟಿದ್ದಾರೆ. ಭಾರತಕ್ಕೆ ಒಲಂಪಿಕ್ ಅಥವಾ ವಿಶ್ವಮಟ್ಟದ ಸ್ಕೆಟಿಂಗ್ ಸ್ಪರ್ಧೆಗಳಲ್ಲಿ ಪದಕ ತಂದುಕೊಡುವ ಸಾಮಥ್ರ್ಯ ಈ ಯುವಕನಿಗಿದೆ ಎಂದರೆ ಅತಿಶಯೋಕ್ತಿಯಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed