Last Updated:
ಮೈಸೂರಿನ ಕೀರ್ತಿರಾಜ್ ಸಿಂಗ್ 21ನೇ ರಾಷ್ಟ್ರೀಯ ಐಸ್ ಸ್ಕೆಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನ ಗೆದ್ದು, ಸತತ 5 ವರ್ಷ ರಾಷ್ಟ್ರೀಯ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದ್ದಾರೆ.
ಮೈಸೂರು: ಇವರು ಐಸ್ ಸ್ಕೆಟಿಂಗ್‍ನ (Ice skating) ಮಾಂತ್ರಿಕ ಎಂದರೂ ತಪ್ಪಾಗಲಾರದು. ಕೇವಲ ನಾಲ್ಕು ವರ್ಷದ ಬಾಲಕನಾಗಿದ್ದಾಗ ಸ್ಕೆಟಿಂಗ್ ಲೋಕಕ್ಕೆ ಹೆಜ್ಜೆ ಇಟ್ಟ ಮೈಸೂರಿನ (Mysuru) ಈ ಯುವ ಪ್ರತಿಭೆ (Talent), ಇಂದು ಇಡೀ ಭಾರತವೇ (India) ನಿಬ್ಬೆರಗಾಗುವಂತಹ ಸಾಧನೆ ಮಾಡಿದ್ದಾರೆ. ಹೌದು, ಮೈಸೂರಿನ ಕೀರ್ತಿರಾಜ್ ಸಿಂಗ್ ಸತತ ಐದು ವರ್ಷಗಳಿಂದ ರಾಷ್ಟ್ರೀಯ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಅಸಾಧ್ಯವಾದುದನ್ನು ಸುಸಾಧ್ಯವಾಗಿಸಿದ್ದಾರೆ.
ಇತ್ತೀಚೆಗೆ ಡೆಹ್ರಾಡೂನ್‍ನಲ್ಲಿ ನಡೆದ 21ನೇ ರಾಷ್ಟ್ರೀಯ ಐಸ್ ಸ್ಕೆಟಿಂಗ್ ಚಾಂಪಿಯನ್‍ಶಿಪ್-2026ರಲ್ಲಿ ಕೀರ್ತಿರಾಜ್ ಸಿಂಗ್ ಚಿನ್ನದ ಸುರಿಮಳೆಯನ್ನೇ ಗೈದಿದ್ದಾರೆ. ಕೇವಲ ಒಂದು ಚಿನ್ನವಲ್ಲ, ಮೂರು ವಿಭಾಗಗಳಲ್ಲಿ (333 ಮೀ, 500 ಮೀ, 777 ಮೀ) ಚಿನ್ನದ ಪದಕಗಳನ್ನು ಗೆಲ್ಲುವುದರ ಜೊತೆಗೆ, ಸ್ವತಃ ತಮ್ಮದೇ ಹಿಂದಿನ ರಾಷ್ಟ್ರೀಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 2022ರಿಂದ 2026ರವರೆಗೆ ನಿರಂತರವಾಗಿ ಐದು ವರ್ಷಗಳ ಕಾಲ ರಾಷ್ಟ್ರೀಯ ಚಾಂಪಿಯನ್ ಆಗಿ ಉಳಿದಿರುವುದು ಸಾಮಾನ್ಯ ಸಾಧನೆಯಲ್ಲ.
Mysore,Mysore,Karnataka












