Last Updated:
ಲವ್ ಯುವರ್ ಫ್ಯಾಮಿಲಿ ಅನ್ನೋದು ಓಕೆ, ಆದರೆ ಹನಿಮೂನ್‌ನಲ್ಲಿ ಗಂಡನ ನಡವಳಿಕೆಯಿಂದ ಬೇಸತ್ತ ಹೆಂಡತಿ ಈಗ ಯಾವುದೇ ಕಾರಣಕ್ಕೂ ಒಂದಾಗಲ್ಲ ಅಂತ ಪಟ್ಟು ಹಿಡಿದಿದ್ದಾಳೆ.
ಮದುವೆ ಆದಮೇಲೆ ಹೊಸ ಜೋಡಿಗಳು (Newly Married Couple) ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು, ಮದುವೆಯ (Marriage) ಕಾರ್ಯಕ್ರಮಗಳ ಒತ್ತಡದಿಂದ ಹೊರಗೆ ಬಂದು ರಿಲ್ಯಾಕ್ಸ್ ಆಗಲು ಹನಿಮೂನ್ ಪ್ಲಾನ್ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಹನಿಮೂನ್‌ಗೆ ಹೆಂಡತಿ (Wife) ಜೊತೆ ಇಡೀ ಕುಟುಂಬವನ್ನೇ ಕರೆದುಕೊಂಡು ಹೋಗಿದ್ದಾನೆ. ಇದರಿಂದ ಶುರುವಾದ ಗಲಾಟೆ ಈಗ ಕೋರ್ಟ್, ಪೊಲೀಸ್ ಸ್ಟೇಷನ್ (Court, Police) ಮೆಟ್ಟಿಲೇರಿ ದಂಪತಿ ವಿಚ್ಛೇದನ ಪಡೆದುಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಈಗ ಭಾರೀ ವೈರಲ್ ಆಗ್ತಿದೆ.
ತಮ್ಮ ಪ್ರೈವೇಟ್ ಟೈಮ್ ಎಂಜಾಯ್ ಮಾಡಬಹುದು ಅಂದುಕೊಂಡಿದ್ದ ಹೆಂಡತಿಗೆ ದೊಡ್ಡ ಶಾಕ್ ಕಾದಿತ್ತು. ಯಾಕೆಂದರೆ, ಗಂಡ ತನ್ನ ಜೊತೆ ತನ್ನ ತಂದೆ-ತಾಯಿ (ಅತ್ತೆ-ಮಾವ) ಮತ್ತು ಅಣ್ಣ-ತಂಗಿಯರನ್ನೂ ಹನಿಮೂನ್‌ಗೆ ಕರೆದುಕೊಂಡು ಬಂದಿದ್ದ.
‘ನನಗೆ ಪ್ರೈವೇಸಿ ಸಿಗಲಿಲ್ಲ’ ಎಂದು ಹೆಂಡತಿ ಅಳಲು ತೋಡಿಕೊಂಡರೆ, ಸಿಂಗಾಪುರದಲ್ಲಿ ಹಾಸ್ಪಿಟಾಲಿಟಿ ಮ್ಯಾನೆಜ್ಮೆಂಟ್ ಓದಿರುವ ಬುದ್ಧಿವಂತ ಗಂಡ ಮಾತ್ರ, ‘ನನ್ನ ಫ್ಯಾಮಿಲಿ ಎಲ್ಲೂ ಹೋಗಿರಲಿಲ್ಲ, ಎಲ್ಲರೂ ಒಟ್ಟಿಗೆ ಖುಷಿಯಾಗಿ ಇರಲಿ ಅಂತ ಕರೆದುಕೊಂಡು ಬಂದೆ. ಇದರಲ್ಲೇನು ತಪ್ಪು?’ ಅಂತ ವಾದ ಮಾಡಿದ್ದಾನೆ. ನೈನಿತಾಲ್‌ನಿಂದ ವಾಪಸ್ ಬಂದ ಮೇಲೂ ಇಬ್ಬರ ನಡುವೆ ಇದೇ ವಿಚಾರಕ್ಕೆ ದಿನಾ ಜಗಳ ಆಗ್ತಿತ್ತು.
ನೈನಿತಾಲ್ ಜಗಳ ಮುಗಿಯುವ ಮುನ್ನವೇ, ಇಬ್ಬರೂ ಸೇರಿ ದುಬೈ ಟ್ರಿಪ್ ಪ್ಲಾನ್ ಮಾಡಿದ್ದರು. ಆದರೆ, ಈ ಸಲವೂ ಗಂಡ ‘ನನ್ನ ಫ್ಯಾಮಿಲಿನೂ ದುಬೈಗೆ ಬರ್ತಾರೆ’ ಅಂದಾಗ ಹೆಂಡತಿಯ ತಾಳ್ಮೆ ಮೀರಿದೆ. ದಂಪತಿಗಳ ನಡುವಿನ ಜಗಳ ತಾರಕಕ್ಕೇರಿ ಕೊನೆಗೆ ಮೀರತ್‌ನ ಸ್ಥಳೀಯ ಪೊಲೀಸ್ ಸ್ಟೇಷನ್ ತಲುಪಿದೆ. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಲು ಪ್ರಯತ್ನಿಸಿದರೂ ಪ್ರಯೋಜನವಾಗದಿದ್ದಾಗ, ಕೇಸನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ಗೆ ರೆಫರ್ ಮಾಡಲಾಯಿತು.
ಕೌನ್ಸೆಲರ್‌ಗಳು ಗಂಡ ಮತ್ತು ಹೆಂಡತಿ ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿ ಮೂರು ಬಾರಿ ಸಂಧಾನ ಮಾಡಲು ಟ್ರೈ ಮಾಡಿದ್ದಾರೆ. ಕೌನ್ಸೆಲಿಂಗ್ ವೇಳೆ ಇಬ್ಬರೂ ಒಬ್ಬರ ಮೇಲೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೆಂಡತಿ ‘ನನಗೆ ಇಂಥ ಗಂಡ ಬೇಡವೇ ಬೇಡ’ ಅಂದಿದ್ದರೆ, ಗಂಡ ಮಾತ್ರ ತನ್ನ ನಿಲುವನ್ನು ಬದಲಿಸಿಕೊಳ್ಳಲು ರೆಡಿಯಿರಲಿಲ್ಲ.
ಲವ್ ಯುವರ್ ಫ್ಯಾಮಿಲಿ ಅನ್ನೋದು ಓಕೆ, ಆದರೆ ಹನಿಮೂನ್‌ನಲ್ಲೂ ಫ್ಯಾಮಿಲಿ ಪ್ರೀತಿ ತೋರಿಸಿದ ಗಂಡನ ನಡವಳಿಕೆಯಿಂದ ಬೇಸತ್ತ ಹೆಂಡತಿ ಈಗ ಯಾವುದೇ ಕಾರಣಕ್ಕೂ ಒಂದಾಗಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಕೌನ್ಸೆಲಿಂಗ್ ಸಂಪೂರ್ಣ ಫೇಲ್ ಆಗಿದ್ದು, ಸದ್ಯ ಈ ಜೋಡಿ ಡಿವೋರ್ಸ್ ಪಡೆದು ಅಧಿಕೃತವಾಗಿ ದೂರಾಗಲು ನಿರ್ಧರಿಸಿದೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ.













