Honeymoon Story: ಹನಿಮೂನ್​​ಗೆ ಹೋದ ಹೆಂಡತಿಗೆ ಬಿಗ್ ಶಾಕ್; ಮನೆಗೆ ಬರುತ್ತಿದ್ದಂತೆ ಡಿವೋರ್ಸ್ ಕೇಳಿ ಕೋರ್ಟ್​ಗೆ ಅರ್ಜಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂದರ್ಭಿಕ ಚಿತ್ರ


Last Updated:

ಲವ್ ಯುವರ್ ಫ್ಯಾಮಿಲಿ ಅನ್ನೋದು ಓಕೆ, ಆದರೆ ಹನಿಮೂನ್‌ನಲ್ಲಿ ಗಂಡನ ನಡವಳಿಕೆಯಿಂದ ಬೇಸತ್ತ ಹೆಂಡತಿ ಈಗ ಯಾವುದೇ ಕಾರಣಕ್ಕೂ ಒಂದಾಗಲ್ಲ ಅಂತ ಪಟ್ಟು ಹಿಡಿದಿದ್ದಾಳೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮದುವೆ ಆದಮೇಲೆ ಹೊಸ ಜೋಡಿಗಳು (Newly Married Couple) ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು, ಮದುವೆಯ (Marriage) ಕಾರ್ಯಕ್ರಮಗಳ ಒತ್ತಡದಿಂದ ಹೊರಗೆ ಬಂದು ರಿಲ್ಯಾಕ್ಸ್‌ ಆಗಲು ಹನಿಮೂನ್‌ ಪ್ಲಾನ್‌ ಮಾಡ್ತಾರೆ. ಆದರೆ ಇಲ್ಲೊಬ್ಬ ಮಹಾಶಯ ತನ್ನ ಹನಿಮೂನ್‌ಗೆ ಹೆಂಡತಿ (Wife) ಜೊತೆ ಇಡೀ ಕುಟುಂಬವನ್ನೇ ಕರೆದುಕೊಂಡು ಹೋಗಿದ್ದಾನೆ. ಇದರಿಂದ ಶುರುವಾದ ಗಲಾಟೆ ಈಗ ಕೋರ್ಟ್‌, ಪೊಲೀಸ್‌ ಸ್ಟೇಷನ್‌ (Court, Police) ಮೆಟ್ಟಿಲೇರಿ ದಂಪತಿ ವಿಚ್ಛೇದನ ಪಡೆದುಕೊಳ್ಳುವ ಹಂತಕ್ಕೆ ಬಂದು ತಲುಪಿದೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಈ ಘಟನೆ ಈಗ ಭಾರೀ ವೈರಲ್‌ ಆಗ್ತಿದೆ.

ಮ್ಯಾಟ್ರಿಮೋನಿಯಲ್ಲಿ ಫಿಕ್ಸ್‌ ಆಗಿದ್ದ ಮದುವೆ

ಉತ್ತರ ಪ್ರದೇಶದ ಮೀರತ್‌ ಯುವತಿ ಹಾಗೂ ದೆಹಲಿಯ ಪಟೇಲ್‌ ನಗರದ ಯುವಕನಿಗೆ ಕಳೆದ ವರ್ಷ ಮ್ಯಾಟ್ರಿಮೋನಿ ವೆಬ್‌ಸೈಟ್‌ನಿಂದ ಮದುವೆ ಫಿಕ್ಸ್‌ ಆಗಿತ್ತು. ಅದ್ದೂರಿಯಾಗಿ ಮದುವೆ ಮುಗಿದ ಬಳಿಕ ಇಬ್ಬರು ಸೇರಿ ಉತ್ತರಖಾಂಡದ ಫೇಮಸ್‌ ಪ್ಲೇಸ್‌ ನೈನಿತಾಲ್‌ಗೆ ಹನಿಮೂನ್‌ ಟ್ರಿಪ್‌ ಪ್ಲಾನ್‌ ಮಾಡಿದ್ದರು. ಹೆಂಡತಿ ತನಗಾಗಿ ಕಾಯ್ತಿದ್ದರೆ, ಗಂಡ ಅಲ್ಲಿ ಬೇರೆನೆ ಪ್ಲಾನ್‌ ಮಾಡಿದ್ದ.

ತಮ್ಮ ಪ್ರೈವೇಟ್ ಟೈಮ್ ಎಂಜಾಯ್ ಮಾಡಬಹುದು ಅಂದುಕೊಂಡಿದ್ದ ಹೆಂಡತಿಗೆ ದೊಡ್ಡ ಶಾಕ್ ಕಾದಿತ್ತು. ಯಾಕೆಂದರೆ, ಗಂಡ ತನ್ನ ಜೊತೆ ತನ್ನ ತಂದೆ-ತಾಯಿ (ಅತ್ತೆ-ಮಾವ) ಮತ್ತು ಅಣ್ಣ-ತಂಗಿಯರನ್ನೂ ಹನಿಮೂನ್‌ಗೆ ಕರೆದುಕೊಂಡು ಬಂದಿದ್ದ.

‘ನನಗೆ ಪ್ರೈವೇಸಿ ಸಿಗಲಿಲ್ಲ’ ಎಂದು ಹೆಂಡತಿ ಅಳಲು ತೋಡಿಕೊಂಡರೆ, ಸಿಂಗಾಪುರದಲ್ಲಿ ಹಾಸ್ಪಿಟಾಲಿಟಿ ಮ್ಯಾನೆಜ್ಮೆಂಟ್‌ ಓದಿರುವ ಬುದ್ಧಿವಂತ ಗಂಡ ಮಾತ್ರ, ‘ನನ್ನ ಫ್ಯಾಮಿಲಿ ಎಲ್ಲೂ ಹೋಗಿರಲಿಲ್ಲ, ಎಲ್ಲರೂ ಒಟ್ಟಿಗೆ ಖುಷಿಯಾಗಿ ಇರಲಿ ಅಂತ ಕರೆದುಕೊಂಡು ಬಂದೆ. ಇದರಲ್ಲೇನು ತಪ್ಪು?’ ಅಂತ ವಾದ ಮಾಡಿದ್ದಾನೆ. ನೈನಿತಾಲ್‌ನಿಂದ ವಾಪಸ್ ಬಂದ ಮೇಲೂ ಇಬ್ಬರ ನಡುವೆ ಇದೇ ವಿಚಾರಕ್ಕೆ ದಿನಾ ಜಗಳ ಆಗ್ತಿತ್ತು.

ದುಬೈ ಟ್ರಿಪ್‌ನಲ್ಲೂ ರಿಪೀಟ್ ಆಯ್ತು ಅದೇ ಕಥೆ

ನೈನಿತಾಲ್ ಜಗಳ ಮುಗಿಯುವ ಮುನ್ನವೇ, ಇಬ್ಬರೂ ಸೇರಿ ದುಬೈ ಟ್ರಿಪ್ ಪ್ಲಾನ್ ಮಾಡಿದ್ದರು. ಆದರೆ, ಈ ಸಲವೂ ಗಂಡ ‘ನನ್ನ ಫ್ಯಾಮಿಲಿನೂ ದುಬೈಗೆ ಬರ್ತಾರೆ’ ಅಂದಾಗ ಹೆಂಡತಿಯ ತಾಳ್ಮೆ ಮೀರಿದೆ. ದಂಪತಿಗಳ ನಡುವಿನ ಜಗಳ ತಾರಕಕ್ಕೇರಿ ಕೊನೆಗೆ ಮೀರತ್‌ನ ಸ್ಥಳೀಯ ಪೊಲೀಸ್ ಸ್ಟೇಷನ್ ತಲುಪಿದೆ. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಲು ಪ್ರಯತ್ನಿಸಿದರೂ ಪ್ರಯೋಜನವಾಗದಿದ್ದಾಗ, ಕೇಸನ್ನು ಫ್ಯಾಮಿಲಿ ಕೌನ್ಸೆಲಿಂಗ್ ಸೆಂಟರ್‌ಗೆ ರೆಫರ್ ಮಾಡಲಾಯಿತು.

ಕೌನ್ಸೆಲರ್‌ಗಳು ಗಂಡ ಮತ್ತು ಹೆಂಡತಿ ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿ ಮೂರು ಬಾರಿ ಸಂಧಾನ ಮಾಡಲು ಟ್ರೈ ಮಾಡಿದ್ದಾರೆ. ಕೌನ್ಸೆಲಿಂಗ್ ವೇಳೆ ಇಬ್ಬರೂ ಒಬ್ಬರ ಮೇಲೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಹೆಂಡತಿ ‘ನನಗೆ ಇಂಥ ಗಂಡ ಬೇಡವೇ ಬೇಡ’ ಅಂದಿದ್ದರೆ, ಗಂಡ ಮಾತ್ರ ತನ್ನ ನಿಲುವನ್ನು ಬದಲಿಸಿಕೊಳ್ಳಲು ರೆಡಿಯಿರಲಿಲ್ಲ.

ಇದನ್ನೂ ಓದಿ: Snake Species: ಹಾವುಗಳಿಗೂ ಇದೇ ವೀಕ್‌ನೆಸ್, ಈ ವಾಸನೆ ಕಂಡರೆ ಸಾಕು ಅಲ್ಲಿಂದ ಓಡುತ್ತವೆ!

ಲವ್ ಯುವರ್ ಫ್ಯಾಮಿಲಿ ಅನ್ನೋದು ಓಕೆ, ಆದರೆ ಹನಿಮೂನ್‌ನಲ್ಲೂ ಫ್ಯಾಮಿಲಿ ಪ್ರೀತಿ ತೋರಿಸಿದ ಗಂಡನ ನಡವಳಿಕೆಯಿಂದ ಬೇಸತ್ತ ಹೆಂಡತಿ ಈಗ ಯಾವುದೇ ಕಾರಣಕ್ಕೂ ಒಂದಾಗಲ್ಲ ಅಂತ ಪಟ್ಟು ಹಿಡಿದಿದ್ದಾಳೆ. ಕೌನ್ಸೆಲಿಂಗ್ ಸಂಪೂರ್ಣ ಫೇಲ್ ಆಗಿದ್ದು, ಸದ್ಯ ಈ ಜೋಡಿ ಡಿವೋರ್ಸ್‌ ಪಡೆದು ಅಧಿಕೃತವಾಗಿ ದೂರಾಗಲು ನಿರ್ಧರಿಸಿದೆ ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed