Last Updated:
ಭಾರತದ ಪುರುಷರ ಹಾಕಿ ತಂಡ ಪಾಕಿಸ್ತಾನ ವಿರುದ್ಧ ಕೊನೆಯ ಪೂಲ್-ಡಿ ಪಂದ್ಯವನ್ನು 5-3 ಅಂತರದಿಂದ ಗೆದ್ದು ವಿಶ್ವಕಪ್‌ನ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದೆ. ಆದರೆ, ಭಾರತ ಸೆಮಿಫೈನಲ್ ತಲುಪಲು ಈಗ ಪ್ರತಿ ಪಂದ್ಯವನ್ನೂ ಗೆಲ್ಲುವುದು ಬಹಳ ಮುಖ್ಯ.
ಬೆಲ್ಜಿಯಂ (Belgium) ಮತ್ತು ನೆದರ್‌ಲ್ಯಾಂಡ್ಸ್ (Netherlands) ಜಂಟಿಯಾಗಿ ನಡೆಸುತ್ತಿರುವ 2026 ಹಾಕಿ (Hockey) ವಿಶ್ವಕಪ್(World Cup)ನಲ್ಲಿ ಭಾರತ(India)ದ ಪುರುಷರ ತಂಡ ಪಾಕಿಸ್ತಾನ(Pakistan)ವನ್ನು 5-3ರಿಂದ ಸೋಲಿಸಿತು. ಇದರಿಂದ ಭಾರತ ತಂಡ ಮುಂದಿನ ಸುತ್ತಿಗೆ (ಪೂಲ್ ಇ) ಅರ್ಹತೆ ಪಡೆಯಿತು. ಈ ಪೂಲ್‌ನಲ್ಲಿ ಇಂಗ್ಲೆಂಡ್ (England), ಆತಿಥೇಯ ನೆದರ್‌ಲ್ಯಾಂಡ್ಸ್ (Netherlands) ಮತ್ತು ಅರ್ಜೆಂಟೀನಾ (Argentina) ಇವೆ.














