[ad_1]
ಆನಂದ ನಿಲಯ ಸೀರಿಯಲ್ ಅಲ್ಲಿ ಅರ್ಜುನ ಅನ್ನುವ ಪಾತ್ರ ಮಾಡ್ತಾ ಇದ್ದೇನೆ. ಈ ಪಾತ್ರಕ್ಕೆ ಮಹತ್ವ ಇದೆ. ಇಲ್ಲಿ ಕತೇನೆ ಹೀರೋ ಆಗಿದೆ. ಅಣ್ಣ-ಅತ್ತಿಗೆ, ತಮ್ಮ ಹೀಗೆ ಎಲ್ಲ ಪಾತ್ರಗಳು ಇದರಲ್ಲಿವೆ.
ನಾನು ಹಳ್ಳಿ ಪ್ರತಿಭೆ
(ಚಿತ್ರ ಕೃಪೆ: ನಟ ಹರ್ಷ)
ಯಜಮಾನ ಆದ್ಮೇಲೆ ಒಂದು ಫ್ಯಾಮಿಲಿ ಡ್ರಾಮಾ ಇರೋ ಸೀರಿಯಲ್ ಮಾಡ್ಬೇಕು ಅಂತ ಆಸೆ ಇತ್ತು. ಆನಂದ ನಿಲಯದಲ್ಲಿ ಅದೆಲ್ಲವು ಇದೆ. ಅದಕ್ಕೇನೆ ಈ ಸೀರಿಯಲ್ ಒಪ್ಪಿಕೊಂಡೆ.
ಯಜಮಾನ ಸೀರಿಯಲ್ ಅಲ್ಲಿ ಲೀಡ್ ರೋಲ್ ಮಾಡಿದ್ದೇನೆ. ಇದರಲ್ಲಿ ನಾನೇ ಹೀರೋ ಆಗಿದ್ದೇನೆ. ಆದರೆ, ಈ ಸೀರಿಯಲ್ ಮುಗಿದು ಎರಡು ತಿಂಗಳಲ್ಲಿ ಆನಂದ ನಿಲಯ ಸೀರಿಯಲ್ ಅವಕಾಶ ಬಂತು. ಮನೆಯಲ್ಲೂ ಈ ರೋಲ್ ಯಾಕೆ ಅಂದರು.
ಆದರೆ, ಇದನ್ನ ಒಪ್ಪಿಕೊಳ್ಳಲು ಕಾರಣ ಇವೆ. ಈ ಸೀರಿಯಲ್ ಅಲ್ಲಿ ಫ್ಯಾಮಿಲಿ ಕತೆ ಇದೆ. ಪ್ರತಿಯೊಂದು ಪಾತ್ರಕ್ಕೂ ಮಹತ್ವ ಇದೆ. ಇಲ್ಲಿ ಹೀರೋ-ಹೀರೋಯಿನ್ ಅಂತ ಏನೂ ಇಲ್ಲ. ಎಲ್ಲರಿಗೂ ಮಹತ್ವ ಇದೆ. ಅದಕ್ಕೇನೆ ಈ ರೋಲ್ ಒಪ್ಪಿದ್ದೇನೆ, ಸೀರಿಯಲ್ ಚೆನ್ನಾಗಿಯೂ ಬರ್ತಿದೆ.
ಆನಂದ ನಿಲಯ
(ಚಿತ್ರ ಕೃಪೆ: ನಟ ಹರ್ಷ)
ಹೀಗೆ ಈ ಎಲ್ಲ ವಿಚಾರಗಳು ಈ ಸೀರಿಯಲ್ ಅಲ್ಲಿ ಬರುತ್ತವೆ. ಆದರೆ, ನಿಜ ಜೀವನದಲ್ಲಿ ನಾನು ಪ್ರೀತಿ-ಪ್ರೇಮ ಅಂತ ಏನೂ ಹೋಗಿಲ್ಲ. ಇನ್ನು ಸಿಂಗಲ್ ಆಗಿಯೇ ಇದ್ದೇನೆ.
ನಾನು ಹಳ್ಳಿ ಪ್ರತಿಭೆ. ಬಾಣಾವರ ನಮ್ಮೂರು. ಪ್ರತಿಭೆಯಿಂದಲೇ ಇಲ್ಲಿವರೆಗೂ ಬರೋಕೆ ಸಾಧ್ಯವಾಗಿದೆ. ರಂಗಭೂಮಿ ನಂಟು ಇದೆ. ಅಪ್ಪ ಮೊದಲೆಲ್ಲ ನಾಟಕಗಳನ್ನ ಮಾಡ್ತಾಇದ್ದರು. ಈಶ್ವರನ ಪಾತ್ರವನ್ನು ಮಾಡಿದ್ದಾರೆ.
ನಾನು ಹಳ್ಳಿ ಪ್ರತಿಭೆ
(ಚಿತ್ರ ಕೃಪೆ: ನಟ ಹರ್ಷ)
ಒಮ್ಮೆ ತುಮಕೂರಿನ ಗುಬ್ಬಿ ವೀರಣ್ಣ ಕಲಾಕ್ಷೇತ್ರಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಅಲ್ಲಿ ನಾಟಕದ ತಾಲೀಮು ನಡೀತಾ ಇತ್ತು. ಸ್ಕ್ರಿಪ್ಟ್ ಓದು ಅಂತಲೂ ಅಲ್ಲಿರೋರು ಹೇಳಿದರು.
ಹಾಗೆ ಒಮ್ಮೆ ಓದಿದೆ. ಮತ್ತೊಮ್ಮೆ ಸಿಕ್ಕ ಅವಕಾಶವನ್ನು ಬಳಸಿದೆ. ಆಗಲೆ ನಾಟಕದ ಬಗ್ಗೆ ಆಸಕ್ತಿ ಬೆಳೆಯಿತು. ಮುಂದೆ ತುಮಕೂರಿನ ಗ್ರಾಮೀಣ ಕ್ರೀಡಾರಂಗ ಹಾಗೂ ರಂಗಾಂತರಂಗ ತಂಡಗಳಲ್ಲಿ ಸಾಕಷ್ಟು ನಾಟಕಗಳನ್ನ ಮಾಡಿದ್ದೇನೆ. ಸಾಮಾಜಿಕ, ಪೌರಾಣಿ ನಾಟಕವನ್ನು ಮಾಡಿದ್ದೇನೆ. ಕುರುಕ್ಷೇತ್ರ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರವನ್ನು ಮಾಡಿದ್ದೇನೆ.
ಸಿನಿಮಾದಲ್ಲಿ ನಟನೆ ಮಾಡ್ಬೇಕು ಅಂತ ಸಿನಿಮಾರಂಗಕ್ಕೆ ಕಾಲಿಟ್ಟಿದ್ದೇನೆ. ಆದರೆ, ಎಂಟೊಂಬತ್ತು ವರ್ಷ ಇಲ್ಲಿ ಪ್ರಯತ್ನವನ್ನು ಮಾಡ್ತಾನೇ ಇದ್ದೆ.
ಆದರೆ, ಜೀವನಕ್ಕೆ ಸೀರಿಯಲ್ ಕಡೆಗೆ ಮುಖ ಮಾಡಿದೆ. ಆಡಿಷನ್ ಅಲ್ಲಿ ಸೆಲೆಕ್ಟ್ ಆದ್ಮೇಲೆ ಯಜಮಾನ ಸೀರಿಯಲ್ ಸಿಕ್ತು. ಈ ಸೀರಿಯಲ್ ಅಲ್ಲಿ ನಾನು ಹೀರೋ ಆಗಿದ್ದೆ. ಹೀಗೆ ಸೀರಿಯಲ್ ಲೋಕಕ್ಕೆ ಕಾಲಿಟ್ಟೆ. ಈ ಸೀರಿಯಲ್ ಆದ್ಮೆಲೆ ಎರಡನೇ ತಿಂಗಳಲ್ಲಿಯೇ ಆನಂದ ನಿಲಯ ಸೀರಿಯಲ್ ಸಿಕ್ತು. ಇದರಲ್ಲಿ ಸಹೋದರನ ಪಾತ್ರ ಇದೆ.
ಸಿನಿಮಾ ನಂಟು….
(ಚಿತ್ರ ಕೃಪೆ: ನಟ ಹರ್ಷ)
ಬೇಸರ ಏನು ಇಲ್ಲ. ನನ್ನ ಪಾತ್ರಕ್ಕೆ ಮಹತ್ವ ಇದೆ. ಅಷ್ಟೆ ಖುಷಿನೂ ಇದೆ ಅಂತಲೇ ನಟ ಹರ್ಷ ಹೇಳಿದ್ದಾರೆ. ಆನಂದ ನಿಲಯ ಸೀರಿಯಲ್ ಅಲ್ಲಿ ಅರ್ಜುನ ಅನ್ನುವ ಪಾತ್ರವನ್ನೆ ಮಾಡ್ತಾ ಇದ್ದೇನೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 7 ಗಂಟೆಗೆ ಆನಂದ ನಿಲಯ ಸೀರಿಯಲ್ ಪ್ರಸಾರ ಆಗುತ್ತಿದೆ. ಅಷ್ಟೆ ಜನಪ್ರಿಯತೆಯನ್ನು ಇದು ಪಡೆಯುತ್ತಿದೆ.
ಎಲ್ಲರೂ ಈ ಸೀರಿಯಲ್ ಅಲ್ಲಿ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ. ಎಲ್ಲರೂ ಖುಷಿಯಲ್ಲಿಯೇ ಈ ಸೀರಿಯಲ್ ಮಾಡ್ತಾ ಇದ್ದೇವೆ. ಹಾಗೆ ಸಿನಿಮಾ ಮಾಡುವ ಕನಸು ಇದೆ. ಒಳ್ಳೆ ಬ್ಯಾನರ್ ಅಲ್ಲಿಯೇ ಚಿತ್ರ ಮಾಡ್ಬೇಕು ಅನ್ನುವ ಆಸೆನೂ ಇದೆ ಅಂತಲೆ ಹರ್ಷಾ ಹೇಳಿಕೊಂಡಿದ್ದಾರೆ.
[ad_2]
Source link













