Last Updated:
ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ವಿಶಾಲ್ ಚತುರ್ವೇದಿ ನೀಡಿರುವ ಸಂದರ್ಶನವೊಂದು ಇದೀಗ ಹೆಚ್ಚು ಚರ್ಚೆಯಾಗುತ್ತಿದೆ. ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ಹನುಮಾನ್ ಅಂಶ್ ಬಿಡುಗಡೆಗೂ ಮುನ್ನ ಬಾಲಿವುಡ್‌ನಿಂದ ತಮ್ಮ ಸಿನಿಮಾಕ್ಕೆ ಯಾವುದೇ ರೀತಿಯ ಬೆಂಬಲ ಸಿಗಲಿಲ್ಲ ಎಂದು ಹೇಳಿದ್ದಾರೆ.
ದೊಡ್ಡ ಬಜೆಟ್‌ನ ಸ್ಟಾರ್ ನಟರ ಪ್ಯಾನ್ ಇಂಡಿಯಾ ಹಾಗೂ ಪ್ಯಾನ್ ವರ್ಲ್ಡ್ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲು ಪರದಾಡುತ್ತಿರುವ ಸಮಯದಲ್ಲೇ, ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಹನುಮಾನ್ ಅಂಶ್ (Hanuman Ansh) ಸಿನಿಮಾ ಗಮನ ಸೆಳೆಯುತ್ತಿದೆ. ಕೇವಲ 1.8ರಿಂದ 2 ಕೋಟಿ ರೂಪಾಯಿ ಅಂದಾಜು ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಈಗಾಗಲೇ 50 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದ್ದು, 100 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಮುನ್ನುಗ್ಗುತ್ತಿದೆ. ಸಿನಿಮಾದ ಯಶಸ್ಸಿನ ನಡುವೆ ನಿರ್ದೇಶಕ ವಿಶಾಲ್ ಚತುರ್ವೇದಿ (Vishal Chaturvedi) ಮಾಡಿರುವ ಕೆಲವು ಹೇಳಿಕೆಗಳು ಇದೀಗ ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿವೆ.














