Guru Randhawa: ಜಿಮ್ ಹೊರಗೆ ಗುಂಡಿನ ದಾಳಿ, ಸಲ್ಮಾನ್ ಜೊತೆ ಕ್ಲೋಸ್ ಆಗಿದ್ದು ಆ ಖ್ಯಾತ ಗಾಯಕನಿಗೆ ತೊಂದರೆ ಆಯ್ತಾ? | Firing outside gym | | ACTPnews

ಗುರು ರಾಂಧವ


Last Updated:

Guru Randhawa: ದೆಹಲಿಯ ಜಿಮ್ ಹೊರಗೆ ಗುಂಡಿನ ದಾಳಿಯಾಗಿದ್ದು ಇದು ಖ್ಯಾತ ಗಾಯಕ ಗುರು ರಾಂಧವ ಅವರಿಗೆ ಸೇರಿದ್ದಾಗಿದೆ ಎನ್ನಲಾಗಿದೆ.

ಗುರು ರಾಂಧವ
ಗುರು ರಾಂಧವ
ಬಾಲಿವುಡ್​ನ (Bollywood) ಖ್ಯಾತ ಗಾಯಕ, ನಟ ಗುರು ರಾಂಧವ ಅವರ ಒಡೆತನದ ಜಿಮ್ (Gym) ಮುಂದೆ ಗುಂಡಿನ ದಾಳಿ ನಡೆದಿದೆ. ದೆಹಲಿಯ (Delhi) ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ’24 HRS ಫಿಟ್‌ನೆಸ್’ ಜಿಮ್‌ನಲ್ಲಿ ಗುರುವಾರ ಮುಂಜಾನೆ ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ ಘಟನೆ ನಡೆದಿದೆ.

ಒಂದು ಗುಂಡು ಗಾಜಿನ ಕಿಟಕಿಗೆ ತಗುಲಿತು. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ತಮಗೆ ಕರೆ ಬಂದಿದ್ದು, ಸ್ಥಳಕ್ಕೆ ತಂಡಗಳನ್ನು ಕಳುಹಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ತನಿಖೆಯನ್ನು ಪ್ರಾರಂಭಿಸಲಾಗಿದೆ, ಅಧಿಕಾರಿಗಳು ಪ್ರದೇಶದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಗುಂಡಿನ ದಾಳಿಯ ಹಿಂದಿನ ಉದ್ದೇಶವನ್ನು ಖಚಿತಪಡಿಸಿಕೊಳ್ಳಲು ಸಾಕ್ಷಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

ಪೊಲೀಸರ ಪ್ರಕಾರ, ಜಿಮ್‌ನ ಸಿಸಿಟಿವಿ ಕ್ಯಾಮೆರಾಗಳ ಮುಂದಿರುವ ಪ್ರದೇಶದಲ್ಲಿಯೇ ಗುಂಡು ಹಾರಿಸಲಾಗಿದೆ. ತನಿಖೆಯ ಭಾಗವಾಗಿ ಸುತ್ತಮುತ್ತಲಿನ ಪ್ರದೇಶಗಳಿಂದ ದೃಶ್ಯಗಳನ್ನು ಈಗ ಸ್ಕ್ಯಾನ್ ಮಾಡಲಾಗುತ್ತಿದೆ ಎನ್ನಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಅಮೆರಿಕ ಮೂಲದ ಸಹಚರ ಅನಿಲ್ ಪಂಡಿತ್ ಆಡಿಯೋ ನೋಟ್ ಮತ್ತು ಫೇಸ್‌ಬುಕ್ ಪೋಸ್ಟ್ ಮೂಲಕ ದಾಳಿ ಮಾಡಿದ್ದು ತಾವೇ ಎಂದಿದ್ದಾರೆ. ಜಿಮ್ ಗುರು ರಾಂಧವಾ ಅವರಿಗೆ ಸೇರಿದ್ದು ಮತ್ತು ಗಾಯಕ ನಟ ಸಲ್ಮಾನ್ ಖಾನ್‌ಗೆ ಹತ್ತಿರವಾಗಿದ್ದರಿಂದ ಅವರನ್ನು ಗುರಿಯಾಗಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಜಿಮ್‌ನ ಮಾಲೀಕತ್ವಕ್ಕೆ ಸಂಬಂಧಿಸಿದ ವಿವರಗಳನ್ನು ಹುಡುಕಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ ಔಟರ್ ದೆಹಲಿ ಪೊಲೀಸರು ಫಿಟ್ನೆಸ್ ಸೆಂಟರ್ ಮತ್ತು ಗಾಯಕ ಗುರು ರಾಂಧವ ನಡುವೆ ಯಾವುದೇ ನೇರ ಸಂಬಂಧವನ್ನು ಕಂಡುಕೊಂಡಿಲ್ಲ. ಜಿಮ್ ಟ್ಯಾಗೋರ್ ಗಾರ್ಡನ್ ನಿವಾಸಿಯೊಬ್ಬರ ಒಡೆತನದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports