Annamalai: ಅಣ್ಣಾಮಲೈ ಹೊಸ ಪಕ್ಷಕ್ಕೆ ರಜನಿಕಾಂತ್‌ ಅಳಿಯನ ಎಂಟ್ರಿ? ಯಾರು ಈ ವಿಶಾಖನ್‌? | | ACTPnews

ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್?


Last Updated:

ತಮಿಳುನಾಡಿನಲ್ಲಿ ಕೆ. ಅಣ್ಣಾಮಲೈ ಅವರ ವೀ ದ ಲೀಡರ್ಸ್ ಮೂವ್‌ಮೆಂಟ್‌ಗೆ ರಜನಿಕಾಂತ್ ಅಳಿಯ ವಿಶಾಖನ್ ಸೇರಲಿದ್ದಾರೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಅಣ್ಣಾಮಲೈ ಅವರ ಹೊಸ ಪೊಲಿಟಿಕಲ್ ಮ್ಯೂಮೆಂಟ್ ಆರಂಭಿಸಿದ 24 ಗಂಟೆಯಲ್ಲಿ 13.8 ಲಕ್ಷ ಮೆಂಬರ್‌ಶಿಪ್ ಆಗಿ ದಾಖಲೆ ನಿರ್ಮಿಸಲಾಗಿದೆ.

ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್?
ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್?

ಚೆನ್ನೈ: ನೆರೆರಾಜ್ಯ ತಮಿಳುನಾಡಿನ ರಾಜಕೀಯದಲ್ಲಿ (Tamil Nadu Politics) ಈಗ ಭಾರೀ ದೊಡ್ಡ ಬೆಳವಣಿಗೆ ನಡೆಸಿದ್ದು, ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ (Super Star Rajinikanth) ಅವರ ಅಳಿಯ ವಿಶಾಖನ್ ಅವರು ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ (K Annamalai) ಅವರ ಹೊಸ ರಾಜಕೀಯ ಮೂವ್‌ಮೆಂಟ್‌ಗೆ ಜಾಯಿನ್ ಆಗಲಿದ್ದಾರೆ ಎಂಬ ಸುದ್ದಿಗಳು ಈಗ ಕಾಲಿವುಡ್ ಹಾಗೂ ಪಾಲಿಟಿಕ್ಸ್ ವಲಯದಲ್ಲಿ (Kollywood) ಭಾರೀ ಸಂಚಲನ ಸೃಷ್ಟಿಸಿವೆ.

ಅಣ್ಣಾಮಲೈ ಜೊತೆ ಕೈಜೋಡಿಸಲಿದ್ದಾರಾ ವಿಶಾಖನ್?

ವಿಶಾಖನ್ ಅವರು ಕೇವಲ ನಟ ಅಷ್ಟೇ ಅಲ್ಲದೆ, ಒಂದು ಪ್ರಮುಖ ಫಾರ್ಮಾಸ್ಯುಟಿಕಲ್ (ಔಷಧ ತಯಾರಿಕಾ) ಕಂಪನಿಯ ಡೈರೆಕ್ಟರ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಇವರು ರಜನಿಕಾಂತ್ ಅವರ ಕಿರಿಯ ಪುತ್ರಿ ಸೌಂದರ್ಯ ಅವರ ಪತಿ. ಈಗ ಕೇಳಿಬರುತ್ತಿರುವ ವರದಿಗಳ ಪ್ರಕಾರ, ವಿಶಾಖನ್ ಅವರು ಸಕ್ರಿಯ ರಾಜಕೀಯಕ್ಕೆ ಧುಮುಕಲು ನಿರ್ಧರಿಸಿದ್ದು, ಅಣ್ಣಾಮಲೈ ಅವರ ಹೊಸ ಪಕ್ಷದ ಮುಂಚೂಣಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಬೆಳವಣಿಗೆಯ ಹಿಂದೆ ತಲೈವಾ ರಜನಿಕಾಂತ್ ಅವರ ಪರೋಕ್ಷ ಬೆಂಬಲ ಕೂಡ ಅಣ್ಣಾಮಲೈ ಅವರಿಗೆ ಇದೆ ಎಂಬ ಚರ್ಚೆಗಳು ತಮಿಳುನಾಡಿನ ರಾಜಕೀಯ ವರ್ತುಲದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಅಣ್ಣಾಮಲೈ ಹೊಸ ಪಕ್ಷ ಸ್ಥಾಪನೆಗೆ ಸಿದ್ಧತೆ!

ಕಳೆದ ಕೆಲವು ವರ್ಷಗಳಿಂದ ತಮಿಳುನಾಡು ಬಿಜೆಪಿಯ ಫೈರ್‌ಬ್ರಾಂಡ್ ಲೀಡರ್ ಆಗಿದ್ದ ಕೆ. ಅಣ್ಣಾಮಲೈ ಅವರು ಇತ್ತೀಚೆಗಷ್ಟೇ (ಜೂನ್ 5 ರಂದು) ತಮ್ಮ ಪಕ್ಷದ ರಾಜೀನಾಮೆ ನೀಡಿದ್ದರು. ಆ ಬೆನ್ನಲ್ಲೇ ಅವರು ‘ವೀ ದ ಲೀಡರ್ಸ್’ ಎಂಬ ಹೊಸ ರಾಜಕೀಯ ಚಳವಳಿ ಅಥವಾ ಸಾರ್ವಜನಿಕ ವೇದಿಕೆಯನ್ನು ಅಧಿಕೃತವಾಗಿ ಲಾಂಚ್ ಮಾಡಿದ್ದರು.

ಅಣ್ಣಾಮಲೈ ಅವರ ಈ ಹೊಸ ಇನಿಶಿಯೇಟಿವ್‌ಗೆ ತಮಿಳುನಾಡಿನ ಜನರಿಂದ, ಅದರಲ್ಲೂ ಮುಖ್ಯವಾಗಿ ಯುವಕರಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಪಕ್ಷ ಆರಂಭಿಸಿದ ಕೇವಲ 24 ಗಂಟೆಗಳ ಒಳಗಾಗಿ ಬರೋಬ್ಬರಿ 13.8 ಲಕ್ಷಕ್ಕೂ ಹೆಚ್ಚು ಜನರು ವೆಬ್‌ಸೈಟ್ ಮೂಲಕ ಇದರ ಮೆಂಬರ್‌ಶಿಪ್ ಪಡೆದುಕೊಂಡಿರುವುದು ತಮಿಳುನಾಡಿನ ಪ್ರಮುಖ ದ್ರಾವಿಡ ಪಕ್ಷಗಳಿಗೆ ಶಾಕ್ ನೀಡಿತ್ತು.

ಅಣ್ಣಾಮಲೈ/ ರಜನಿಕಾಂತ್ (ಸಂಗ್ರಹ ಚಿತ್ರ)
ಲೋಕಸಭೆ ಎಲೆಕ್ಷನ್‌ ಟಾರ್ಗೆಟ್!

ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದಾಗ ‘ಸಿಂಗಂ’ ಎಂದೇ ಖ್ಯಾತಿ ಗಳಿಸಿದ್ದ ಅಣ್ಣಾಮಲೈ, 2020ರಲ್ಲಿ ರಾಜಕೀಯಕ್ಕೆ ಬಂದು ತಮಿಳುನಾಡು ಬಿಜೆಪಿಯ ಅತ್ಯಂತ ಕಿರಿಯ ಸ್ಟೇಟ್ ಪ್ರೆಸಿಡೆಂಟ್ ಆಗಿ ಮಿಂಚಿದವರು. ಈಗ ತಮ್ಮ ರಾಜಕೀಯ ಜೀವನದ ಮುಂದಿನ ಹಂತಕ್ಕೆ ಕಾಲಿಟ್ಟಿರುವ ಅವರು, ಶಿಕ್ಷಣ, ಆರೋಗ್ಯ ಮತ್ತು ಪರಿಸರ ಕ್ಷೇತ್ರದಲ್ಲಿ ಬದಲಾವಣೆ ತರಲು ಪಣ ತೊಟ್ಟಿದ್ದಾರೆ.

ಈಗ ರಜನಿಕಾಂತ್ ಅಳಿಯ ವಿಶಾಖನ್ ಅವರ ಎಂಟ್ರಿ ಸುದ್ದಿ ನಿಜವೇ ಆದಲ್ಲಿ, ಇದು ಅಣ್ಣಾಮಲೈ ಅವರ ಹೊಸ ಪಕ್ಷಕ್ಕೆ ದೊಡ್ಡ ಆನೆಬಲ ತಂದಂತಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂಬರುವ ದಿನಗಳಲ್ಲಿ ತಮಿಳುನಾಡು ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports