Gowrishankara Serial: ಗೌರಿಶಂಕರ ಹೀರೋಯಿನ್ 3ನೇ ಬಾರಿ ಚೇಂಜ್, 900 ಸಂಚಿಕೆ ಬಳಿಕ ರಮೋಲಾ ಎಂಟ್ರಿ! | | ACTPnews

ಸ್ಟಾರ್ ಸುವರ್ಣ ಗೌರಿಶಂಕರ್ ಹೀರೋಯಿನ್ 3ನೇ ಬಾರಿ ಚೇಂಜ್!


Last Updated:

ಸ್ಟಾರ್ ಸುವರ್ಣ ವಾಹಿನಿಯ ಗೌರಿಶಂಕರ ಸೀರಿಯಲ್ ನಾಯಕಿ ಮತ್ತೆ ಚೇಂಜ್ ಆಗಿದ್ದಾರೆ. ನಟಿ ರಮೋಲಾ ಈ ಒಂದು ಜಾಗಕ್ಕೆ ಬಂದಿದ್ದಾರೆ. ಹಾಗೆ ಈ ಸೀರಿಯಲ್ ಇದೀಗ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸ್ಟಾರ್ ಸುವರ್ಣ ಗೌರಿಶಂಕರ್ ಹೀರೋಯಿನ್ 3ನೇ ಬಾರಿ ಚೇಂಜ್!
ಸ್ಟಾರ್ ಸುವರ್ಣ ಗೌರಿಶಂಕರ್ ಹೀರೋಯಿನ್ 3ನೇ ಬಾರಿ ಚೇಂಜ್!

ಸ್ಟಾರ್ ಸುವರ್ಣ ವಾಹಿನಿಯ (Star Suvarna Channel) ಗೌರಿಶಂಕರ್ (Gowrishankara) ಸೀರಿಯಲ್ 900 ಸಂಚಿಕೆ ಪೂರೈಸಿದೆ. ಆದರೆ,ಇಷ್ಟು ಸಂಚಿಕೆಯಲ್ಲಿ ಗೌರಿ (Gowri) ಪಾತ್ರಕ್ಕೆ ನಾಯಕಿಯರು ಬದಲಾಗುತ್ತಲೇ ಇದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಮೂವರು ನಾಯಕಿಯರು ಈ ಪಾತ್ರ ಮಾಡಿದ್ದಾರೆ. ಆ ಮೂವರು ಯಾರು? ಸದ್ಯ ಇರೋರು ಯಾರು? ಈ ಸೀರಿಯಲ್ (Serial) ಜನರನ್ನ ಹೇಗೆ ಸೆಳೆಯುತ್ತಿದೆ. ಈ ಎಲ್ಲ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.

ಗೌರಿಶಂಕರ್ 900 ಸಂಚಿಕೆ ಕಂಪ್ಲೀಟ್

ಗೌರಿಶಂಕರ್ ಸೀರಿಯಲ್ 900 ಸಂಚಿಕೆ ಕಂಪ್ಲೀಟ್ ಮಾಡಿದೆ. ಸೀರಿಯಲ್ ಕಲಾವಿದರೇ ಈ ಒಂದು ವಿಷಯನ್ನ ತುಂಬಾನೆ ಚೆನ್ನಾಗಿ ಹೇಳಿದ್ದಾರೆ. ನಾಯಕ ಶಂಕರ ಮತ್ತು ಗೌರಿ ಅವರೇ ಬಂದು ಹೂವಿನಲ್ಲಿಯೇ 900 ಸಂಚಿಕೆ ಆಯಿತು ಅಂತ ಅಲಂಕಾರ ಮಾಡುತ್ತಾರೆ.
star suvarna channel gowrishankara serial completed 900-episode latest updates

900 ಸಂಚಿಕೆ ಬಳಿಕ ರಮೋಲಾ ಎಂಟ್ರಿ

(ಚಿತ್ರ ಕೃಪೆ: ಸ್ಟಾರ್ ಸುವರ್ಣ ಚಾನೆಲ್ ಇನ್‌ಸ್ಟಾಗ್ರಾಮ್)

ಸೀರಿಯಲ್‌ನ ಮಕ್ಕಳು ಈ ಕೆಲಸದಲ್ಲಿ ಕೈ ಜೋಡಿಸುತ್ತಾರೆ. ಸೀರಿಯಲ್‌ನ ಇತರ ಪಾತ್ರಗಳು ಕೊನೆಗೆ ಬರುತ್ತವೆ. ಲಾಂಗ್ ಶಾಟ್ ಅಲ್ಲಿ ಇಡೀ ಹೂವಿನ ಅಲಂಕಾರ ತೋರಿಸಿದ್ದಾಗ, ಇವರು ಇಲ್ಲಿವರೆಗೂ ಹೂವಿನಿಂದ ಏನ್ ಮಾಡ್ತಾ ಇದ್ದರು ಅನ್ನೊದು ತಿಳಿಯುತ್ತದೆ.

ಮೂರನೇ ನಾಯಕಿ ಎಂಟ್ರಿ

ಈ ಸೀರಿಯಲ್ ಪ್ರತಿ ದಿನ ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತದೆ. ಕಳೆದ 10-12 ವಾರಗಳಿಂದಲೂ ಈ ಸೀರಿಯಲ್ ಟಾಪ್ ಅಲ್ಲಿಯೇ ರನ್ ಆಗುತ್ತಿದೆ.

6 ಗಂಟೆ ಸ್ಲಾಟ್‌ ಅಲ್ಲಿ ಇದು ಟಾಪ್ ಅಲ್ಲಿಯೇ ಹೋಗುತ್ತಿದೆ ಅನ್ನೋ ಮಾಹಿತಿನೂ ಚಾನೆಲ್ ಕೊಟ್ಟಿದೆ. ಮೊನ್ನೆ ಸೋಮವಾರದಿಂದ ಈ ಸೀರಿಯಲ್‌ನ ಗೌರಿ ಪಾತ್ರಕ್ಕೆ ನಟಿ ರಮೋಲಾ ಎಂಟ್ರಿ ಆಗಿದ್ದಾರೆ. ಅದಕ್ಕೂ ಮೊದಲು ದಿವ್ಯಾ ವಾಗೂಕರ್ ಈ ರೋಲ್ ಮಾಡ್ತಾ ಇದ್ದರು.

star suvarna channel gowrishankara serial completed 900-episode latest updates

ಮೂರನೇ ನಾಯಕಿ ಎಂಟ್ರಿ

(ಚಿತ್ರ ಕೃಪೆ: ಸ್ಟಾರ್ ಸುವರ್ಣ ಚಾನೆಲ್ ಇನ್‌ಸ್ಟಾಗ್ರಾಮ್)

ಕೌಸ್ತುಭ ಮಣಿ ಫಸ್ಟ್ ನಾಯಕಿ

ಈ ಸೀರಿಯಲ್‌ ಶುರು ಆದಾಗ ನಟಿ ಕೌಸ್ತುಭ ಮಣಿ ಇಲ್ಲಿ ಗೌರಿ ಪಾತ್ರ ಮಾಡುತ್ತಿದ್ದರು. 70 ಸಂಚಿಕೆ ಆದ್ಮೇಲೆ ಕಾರಣಾಂತರಗಳಿಂದ ಕೌಸ್ತುಭ ಮಣಿ ಈ ಸೀರಿಯಲ್‌ ಮಾಡ್ಲಿಲ್ಲ.

ಬೆಂಕಿ ಜೊತೆಗೆ ಬಿರುಗಾಳಿ ಪ್ರೀತಿಯ ಕತೆ

ಗೌರಿಶಂಕರ್ ಸೀರಿಯಲ್‌ಗೆ ಒಂದು ಟ್ಯಾಗ್ ಲೈನ್ ಕೂಡ ಇದೆ. ಬೆಂಕಿ ಜೊತೆಗೆ ಬಿರುಗಾಳಿಯ ಪ್ರೀತಿ ಕತೆ ಅನ್ನೋದೆ ಈ ಸೀರಿಯಲ್‌ನ ಟ್ಯಾಗ್ ಲೈನ್ ಆಗಿದೆ.

ಸಂಜೆ 6 ಗಂಟೆ ಸ್ಲಾಟ್ ಅಲ್ಲಿ ನಂಬರ್ 1 ಸೀರಿಯಲ್ ಆಗಿಯೇ ಇದು ಜನರ ಮನವನ್ನ ಗೆದ್ದಿದೆ. ಈಗ 900 ಸಂಚಿಕೆ ಕಂಪ್ಲೀಟ್ ಮಾಡಿ ಮುನ್ನುಗ್ಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed