Bigg Boss 13: ಏನ್ ಟ್ವಿಸ್ಟ್ ಗುರೂ! ಬಿಗ್‌ಬಾಸ್ ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್; ಪ್ರಬಲ ಸ್ಪರ್ಧಿ ಹೊರಕ್ಕೆ? | | ACTPnews

News18


Last Updated:

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಈ ಕುರಿತು ಕಾರ್ಯಕ್ರಮದ ಪ್ರೋಮೋ ಕೂಡ ಬಿಡುಗಡೆಯಾಗಿದೆ.

News18
News18

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada Season 13) ದಿನದಿಂದ ದಿನಕ್ಕೆ ಆಟದ ತೀವ್ರತೆ ಹೆಚ್ಚಾಗುತ್ತಿದೆ. ಇಷ್ಟು ದಿನ ಗಲಾಟೆ, ಜಗಳ, ಟಾಸ್ಕ್ ಮತ್ತು ಮಾತಿನ ಚಕಮಕಿಯಿಂದ ಗಮನ ಸೆಳೆದಿದ್ದ ದೊಡ್ಮನೆ ಇದೀಗ ಭಾವುಕ ವಾತಾವರಣಕ್ಕೆ ಸಾಕ್ಷಿಯಾಗಿದೆ. ಈ ವಾರ ಮಿಡ್‌ವೀಕ್ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಾಗಿದೆ. ಇದರ ನಡುವೆ ಜಗ್ಗಿ ಮತ್ತು ತಾಂಡವ್ ರಾಮ್ ಭಾವುಕರಾಗಿ ಅತ್ತ ದೃಶ್ಯಗಳು ಹೊಸದಾಗಿ ಬಿಡುಗಡೆಯಾದ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಮನೆಯ ವಾತಾವರಣವನ್ನೇ ಬದಲಿಸಿದೆ.

ಮಿಡ್‌ವೀಕ್ ಎಲಿಮಿನೇಷನ್ ಪಕ್ಕಾ

ಬಿಗ್‌ಬಾಸ್ ಕನ್ನಡ ಸೀಸನ್ 13ರಲ್ಲಿ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಈ ಕುರಿತು ಕಾರ್ಯಕ್ರಮದ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಎಲಿಮಿನೇಷನ್ ನಡೆಯುತ್ತಿದ್ದು, ಈ ಬಾರಿ ವಾರದ ಮಧ್ಯದಲ್ಲೇ ಸ್ಪರ್ಧಿಯೊಬ್ಬರು ಮನೆಯಿಂದ ಹೊರಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಾರಾಂತ್ಯದ ಸಂಚಿಕೆಯಲ್ಲಿ ಯಾವುದೇ ಸ್ಪರ್ಧಿ ಮನೆಯಿಂದ ಹೊರಗೆ ಹೋಗಿರಲಿಲ್ಲ. ಆದರೆ ಮಿಡ್‌ವೀಕ್ ಎಲಿಮಿನೇಷನ್ ಇರುವುದಾಗಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದರು. ಇದರ ಜತೆಗೆ ಎಮರ್ಜೆನ್ಸಿ ಎಕ್ಸಿಟ್ ಪ್ರಕ್ರಿಯೆಯ ಬಗ್ಗೆಯೂ ಸೂಚನೆ ನೀಡಲಾಗಿತ್ತು. ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಒಬ್ಬ ಸ್ಪರ್ಧಿಯ ಎಲಿಮಿನೇಷನ್ ಖಚಿತವಾಗಿರುವ ಸುಳಿವು ಸಿಕ್ಕಿದೆ.

ಇದನ್ನೂ ಓದಿ: Darshan: ದರ್ಶನ್ ಅಪ್ಪಟ ಅಭಿಮಾನಿ ಸುದೀಪ್‌ ಇನ್ನಿಲ್ಲ! ಕೊನೆಗೂ ಈಡೇರಿತು ಅದೊಂದು ಆಸೆ

ಹೊಸ ಪ್ರೋಮೋದಲ್ಲಿ ಜಗ್ಗಿ ಮತ್ತು ತಾಂಡವ್ ರಾಮ್ ಭಾವುಕರಾಗಿ ಕಣ್ಣೀರು ಹಾಕುತ್ತಿರುವ ದೃಶ್ಯಗಳು ಗಮನ ಸೆಳೆದಿವೆ. ಅವರನ್ನು ಕಂಡು ಮನೆಯಲ್ಲಿರುವ ಇತರ ಸ್ಪರ್ಧಿಗಳೂ ಭಾವುಕರಾಗಿರುವುದು ಕಂಡುಬಂದಿದೆ. ಇಷ್ಟು ದಿನ ಗದ್ದಲದಿಂದ ಕೂಡಿದ್ದ ದೊಡ್ಮನೆಯಲ್ಲಿ ಏಕಾಏಕಿ ದುಃಖದ ವಾತಾವರಣ ನಿರ್ಮಾಣವಾಗಿರುವುದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ತಾಂಡವ್ ರಾಮ್ ಔಟ್ ?

ಇದರ ನಡುವೆ ತಾಂಡವ್ ರಾಮ್ ವಾರದ ಮಧ್ಯದಲ್ಲೇ ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಾಂಡವ್ ರಾಮ್ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು ಎಂಬ ಅಭಿಪ್ರಾಯವೂ ಪ್ರೇಕ್ಷಕರಲ್ಲಿದೆ. ಹೀಗಾಗಿ ಅವರೇ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆದರೆ ತಾಂಡವ್ ರಾಮ್ ಎಲಿಮಿನೇಟ್ ಆಗಿದ್ದಾರೆ ಎಂಬುದನ್ನು ಬಿಗ್‌ಬಾಸ್ ತಂಡ ಅಧಿಕೃತವಾಗಿ ಖಚಿತಪಡಿಸಿಲ್ಲ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ಕೇವಲ ಊಹಾಪೋಹವೆಂದು ಪರಿಗಣಿಸಬೇಕಾಗಿದೆ. ಅಧಿಕೃತ ಸಂಚಿಕೆ ಪ್ರಸಾರವಾದ ಬಳಿಕವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಆರಂಭಿಕ ವಾರಗಳಲ್ಲೇ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಪ್ರವೇಶ ನಡೆದಿತ್ತು. ಇದೀಗ ಸೀಸನ್ 13ರಲ್ಲೂ ಇದೇ ರೀತಿಯ ಬೆಳವಣಿಗೆ ನಡೆಯಬಹುದೇ ಎಂಬ ಕುತೂಹಲ ಮೂಡಿದೆ. ಆದರೆ ಮೂವರು ಸ್ಪರ್ಧಿಗಳು ಹೊರಗೆ ಹೋಗಲಿದ್ದಾರೆ ಮತ್ತು ಮೂವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿಗೂ ಸದ್ಯ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಮಿಡ್‌ವೀಕ್ ಎಲಿಮಿನೇಷನ್‌ನಿಂದಾಗಿ ಬಿಗ್‌ಬಾಸ್ ಮನೆಯ ಸ್ಪರ್ಧಿಗಳಲ್ಲಿ ಆತಂಕ ಹೆಚ್ಚಾಗಿದೆ. ಯಾರು ಹೊರಗೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಹೆಸರುಗಳು ಕೇಳಿಬರುತ್ತಿವೆ. ಆದರೆ ಅಧಿಕೃತ ಘೋಷಣೆ ಇಲ್ಲದಿರುವುದರಿಂದ ಸದ್ಯಕ್ಕೆ ಯಾವುದನ್ನೂ ಖಚಿತವೆಂದು ಹೇಳಲು ಸಾಧ್ಯವಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed