ಜೀವನ ಒಂದು ಪಯಣ..
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್)
ಈ ಒಂದು ಆಡಿಷನ್ ಪೋಸ್ಟರ್ ಅಲ್ಲಿ ಸುಮಾರು ವಿಷಯಗಳಿವೆ. ಜೀವನ ಒಂದು ಪಯಣ ಅನ್ನುವ ಮ್ಯಾಟರ್ ಇದೆ. ನೆನಪಿರಲಿ, ಸಂತೋಷ ಅನ್ನೋದು ಪಯಣಿಸುವ ಮಾರ್ಗವೇ ಆಗಿದೆ. ಆದರೆ, ಇದು ತಲುಪುವ ಕೊನೆಯ ತಾಣವಲ್ಲ ಅನ್ನುವ ವಿಷಯ ಕೂಡ ಇದರಲ್ಲಿದೆ.
ನಮ್ಮ ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗೆ ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದೇವೆ. ಎಲ್ಲಾ ಆಸಕ್ತ ನಟ ಮತ್ತು ನಟಿಯರಿಗೆ ಆಹ್ವಾನಿಸುತ್ತೇವೆ.
ಮಹಿಳೆಯರು: 20 ರಿಂದ 60
ಈ ಒಂದು ಆಡಿಷನ್ ಬರೋರು ಈ ಪೋಸ್ಟ್ ಓದಿದರೆ ಚೆನ್ನಾಗಿರುತ್ತದೆ. ಈ ಆಡಿಷನ್ ಅಲ್ಲಿ ಮೊದಲ ಆದ್ಯತೆಯನ್ನ ಸ್ಪಷ್ಟವಾಗಿ ಕನ್ನಡ ಮಾತನಾಡೋಕೆ ಬರೋರಿಗೆ ಕೊಡ್ತಿದ್ದಾರೆ.
ಉತ್ತರ ಕರ್ನಾಟಕದ ಭಾಷಾಶೈಲಿ ತಿಳಿದವರಿಗೆ ಇಲ್ಲಿ ಆದ್ಯತೆ ಇದೆ. ಬೆಂಗಳೂರಿನ ಜಯನಗರದ 4 ನೇ ಬ್ಲಾಕ್ನ ವಿಜಯಾ ಕಾಲೇಜಿನಲ್ಲಿ ಈ ಒಂದು ಆಡಿಷನ್ ನಡೆಯುತ್ತಿದೆ.
ಈ ಒಂದು ಆಡಿಷನ್ ಮುಂದಿನ ತಿಂಗಳು ನಡೀತಾ ಇದೆ. ಅಕ್ಟೋಬರ್-2 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆ ವರೆಗೂ ಆಡಿಷನ್ ಇರುತ್ತದೆ.
ಯಾರಿಗೆ ಮೊದಲ ಆದ್ಯತೆ
(ಚಿತ್ರ ಕೃಪೆ: ರಿಷಬ್ ಶೆಟ್ಟಿ ಇನ್ಸ್ಟಾಗ್ರಾಮ್)
ಈ ಒಂದು ವಿಷಯವನ್ನ ರಿಷಬ್ ಶೆಟ್ರು ಅಧಿಕೃತವಾಗಿಯೇ ಹೇಳಿದ್ದಾರೆ. ಇದೇ ಪೋಸ್ಟ್ ಅಲ್ಲಿಯೇ ಈ ಎರಡು ಲೈನ್ ಕೂಡ ಬರೆದಿದ್ದಾರೆ. ಅದು ಹೀಗಿದೆ ಓದಿ;
ರಿಷಬ್ ಶೆಟ್ರ ಈ ಪೋಸ್ಟ್ಗೆ ಕಾಂಪ್ಲಿಮೆಂಟ್ಸ್ ಬಂದಿವೆ. ರೆಡ್ ಹಾರ್ಟ್ ಇಮೋಜಿ ಕೂಡ ಇವೆ. ಒಳ್ಳೆ ಹೆಜ್ಜೆ ರಿಷಬ್ ಶೆಟ್ಟಿ ಸರ್ ಅಂತಲೂ ಅದ್ಯಾರೋ ಹೇಳಿದ್ದಾರೆ. ಇದರ ನಡುವೆ ಸಲಹೆ ಕೂಡ ಬಂದಿದೆ.
“ಉತ್ತರ ಕರ್ನಾಟಕದಲ್ಲಿ ಹಲವಾರು ಪ್ರತಿಭೆಗಳು ಇದ್ದಾರೆ sir…ಕಲೆಯನ್ನ ಗುರುತಿಸಿ ಒಂದು ಅವಕಾಶ ಕೊಡಿ ಅವರಿಗೆ” ಅಂತಲೂ ಇಲ್ಲಿ ಹೇಳಿದ್ದಾರೆ ಅಂತ ಹೇಳಬಹುದು.













