Last Updated:
ದುನಿಯಾ ವಿಜಯ್ ಒಂದು ವಿಶೇಷ ಕೆಲಸ ಮಾಡಿದ್ದಾರೆ. ಸಿಟಿ ಲೈಟ್ಸ್ ಚಿತ್ರದ ಪ್ರೀಮಿಯರ್ ಶೋಗೆ ಆ ವಿಶೇಷ ಮಹಿಳೆಯರಿಗೆ ಆಹ್ವಾನ ನೀಡಿದ್ದಾರೆ. ಅವರನ್ನ ಹೂವು ಸುರಿಯೋ ಮೂಲಕ ವೆಲ್ಕಮ್ ಮಾಡಿದ್ದಾರೆ. ಇನ್ನು ಸುಮಾರು ವಿಚಾರಗಳಿವೆ. ಅದರ ವಿವರ ಇಲ್ಲಿದೆ ಓದಿ.
ದುನಿಯಾ ವಿಜಯ್ (Duniya Vijay) ಕೇವಲ ಒಂದು ಸಿಟಿ ಲೈಟ್ಸ್ ಚಿತ್ರ (City Lights) ಮಾಡಿಲ್ಲ. ಇರೋ ಸತ್ಯ ಹೇಳಿದ್ದಾರೆ. ಅಲ್ಲಿಗೆ ಮುಗಿತು ಅಂತ ಕೈ ತೊಳೆದುಕೊಳ್ಳುವ ಕೆಲಸವನ್ನು ಮಾಡಿಲ್ಲ. ಸಮಾಜದಲ್ಲಿ ನಮ್ಮ ನಡುವೆ ಇರೋ ನೊಂದ ಆ ಹೆಣ್ಣುಮಕ್ಕಳಿಗೆ ಗೌರವ ಕೊಟ್ಟಿದ್ದಾರೆ. ತಮ್ಮ ಚಿತ್ರದ ಪ್ರೀಮಿಯರ್ ಶೋಗೆ (Premiere Show) ಅವರನ್ನ ಆಹ್ವಾನಿಸಿದ್ದಾರೆ. ಅವರಿಗೆ ಹೂವನ್ನ ಸುರಿದು ಸ್ವಾಗತಿಸಿದ್ದಾರೆ. ಸೀರೆ ಕೊಡುವ ಕೆಲಸವು ಇಲ್ಲಾಗಿದೆ. ಈ ಒಂದು ವಿಶೇಷ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಆ ವಿಶೇಷ ಹೆಣ್ಣುಮಕ್ಕಳಿಗೆ ಹೂ ಮಳೆ ಸುರಿಸಿದ ದುನಿಯಾ ವಿಜಯ್
(ಚಿತ್ರ ಕೃಪೆ: ಸಿಟಿ ಲೈಟ್ಸ್ ಸಿನಿಮಾ ಟೀಮ್)
ಇವರ ಈ ಒಂದು ಕುತೂಹಲದ ಮಾತುಗಳಿಗೆ ದುನಿಯಾ ವಿಜಯ್ ಕೂಡ ಸಾಥ್ ಕೊಟ್ಟದ್ದರು. ಗೆಸ್ ಮಾಡಿ ಅಂತಲೂ ದುನಿಯಾ ವಿಜಯ್ ಹೇಳಿದ್ದರು.
ನೊಂದ ಮಹಿಳೆಯರೇ ಈ ಶೋಗೆ ಬಂದಿದ್ದಾರೆ. ದುನಿಯಾ ವಿಜಯ್ ಅವರ ಆಹ್ವಾನಕ್ಕೆ ಗೌರವ ಕೊಟ್ಟಿದ್ದಾರೆ. ದುನಿಯಾ ವಿಜಯ್ ಈ ಹೆಣ್ಣುಮಕ್ಕಳನ್ನ ಹೂವಿನ ಮಳೆ ಸುರಿದು ಸ್ವಾಗತಿಸಿದ್ದಾರೆ.
ಚಿತ್ರದ ನಾಯಕ ನಟ ವಿನಯ್ ರಾಜ್ಕುಮಾರ್ ತಾಯಿ ಮಂಗಳ ರಾಘವೇಂದ್ರ ರಾಜ್ಕುಮಾರ್ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಅದೇನು ಗೊತ್ತಾ? ಹೌದು, ಈ ಹೆಣ್ಣುಮಕ್ಕಳಿಗೆ ಮಂಗಳ ರಾಘವೇಂದ್ರ ರಾಜ್ಕುಮಾರ್ ಅವರು ಸೀರೆಯನ್ನ ಕೊಟ್ಟು ಗೌರವಿಸಿದ್ದಾರೆ.
ನೊಂದ ಹೆಣ್ಣುಮಕ್ಕಳ ಜೀವನ ಹೇಗೆ ಇರುತ್ತದೆ? ಅವರ ಆರೋಗ್ಯ ಹೇಗೆ ಇರುತ್ತದೆ? ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆಳಿಗೆ ತಮ್ಮ ಮಾತಿನ ಮೂಲಕವೇ ಈ ಹೆಣ್ಣುಮಕ್ಕಳು ಉತ್ತರ ಕೊಡುವ ಕೆಲಸ ಮಾಡಿದ್ದಾರೆ.
ಸಿಟಿ ಲೈಟ್ಸ್ ಇನ್ನು ಓಡ್ತಿದೆ…
(ಚಿತ್ರ ಕೃಪೆ: ದುನಿಯಾ ವಿಜಯ್ ಇನ್ಸ್ಟಾಗ್ರಾಮ್)
ದಾರಿ ತಪ್ಪಿದವರ ಪಾಲಿಗೆ ಗೀತಮ್ಮನೇ ತಾಯಿ ಅನ್ನೋದನ್ನು ಇಲ್ಲಿಗೆ ಬಂದ ಹೆಣ್ಣುಮಗಳು ಹೇಳಿದ್ದಾರೆ. ಗೀತಮ್ಮ ಕೂಡ ಮಾತನಾಡಿದ್ದಾರೆ. ಹೆಣ್ಣುಮಕ್ಕಳಿಗೆ ತುಂಬಾನೆ ತೊಂದರೆ ಆಗುತ್ತಿತ್ತು. ಸಿಟಿ ಲೈಟ್ಸ್ ಅಲ್ಲಿ ತೋರಿಸಿರೋದು ನಿಜವೇ. ಆ ರೀತಿನೇ ನಡೀತಾ ಇತ್ತು ಅಂತಲೂ ಹೇಳಿದ್ದಾರೆ.
ಸಿಟಿ ಲೈಟ್ಸ್ ಚಿತ್ರ ಓಡ್ತಿದೆ. ಜನ ಈ ಚಿತ್ರ ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ಇರೋ ವಿಷಯವನ್ನು ಇಷ್ಟಪಟ್ಟಿದ್ದಾರೆ. ಈ ಚಿತ್ರ ನೋಡಿದ್ಮೇಲೆ ಡೈರೆಕ್ಟರ್ ಒಳ್ಳೆ ವಿಚಾರವನ್ನೆ ಹೇಳಿದ್ದಾರೆ ಅನ್ನುವ ಅಭಿಪ್ರಾಯವನ್ನು ಜನ ವ್ಯಕ್ತಪಡಿಸುತ್ತಿದ್ದಾರೆ.
ದುನಿಯಾ ವಿಜಯ್ ಕೂಡ ಈ ಚಿತ್ರವನ್ನ ಪ್ರಮೋಟ್ ಮಾಡ್ತಾನೇ ಇದ್ದಾರೆ. ಎಲ್ಲೆಡೆ ಥಿಯೇಟರ್ಗೆ ಹೋಗಿ ಎಲ್ಲ ಮಹಿಳೆಯರನ್ನು ಮಾತ್ ಆಡಿಸುತ್ತಿದ್ದಾರೆ.
ತಾವು ಚಿತ್ರದಲ್ಲಿ ಹೇಳಿದ ವಿಷಯ ಹೆಣ್ಣುಮಕ್ಕಳಿಗೆ ಇಷ್ಟ ಆಗ್ತಿದಿಯಾ? ಈ ಚಿತ್ರವನ್ನ ಹೆಣ್ಣುಮಕ್ಕಳು ನೋಡಬಹುದಾ ಅಂತಲೂ ಕೇಳ್ತಾ ಇದ್ದಾರೆ. ಇದು ನಿಜಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ.














