Good News: ಉತ್ತರ ಕರ್ನಾಟಕಕ್ಕೆ ಶುಭ ಸುದ್ದಿ; ವಿಜಯಪುರಕ್ಕೆ ಶರವೇಗದ ರೈಲು, 10-11 ತಾಸಿಗೆ ಇಳಿಯಿತು ಬೆಂಗಳೂರಿನ ಪ್ರಯಾಣ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ವಿಶೇಷ ರೈಲು


Last Updated:

ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ಇಂದು ಮೇ 16ರಿಂದ ಜೂನ್ 28ರವರೆಗೆ 7 ವಾರಾಂತ್ಯ ಸಂಚಾರ, 704 ಕಿಮೀ ದೂರ 11 ಗಂಟೆ, ಹುಬ್ಬಳ್ಳಿ ಬಿಪಾಸ್, 9 ನಿಲ್ದಾಣ, IRCTC ಮೂಲಕ ಟಿಕೆಟ್ ಬುಕ್ಕಿಂಗ್ ಮಾಹಿತಿ ಪಡೆಯಿರಿ

ವಿಶೇಷ ರೈಲು
ವಿಶೇಷ ರೈಲು

ಬೆಂಗಳೂರು: ಉತ್ತರ ಕರ್ನಾಟಕ ಮತ್ತು ಬೆಂಗಳೂರು (Bengaluru) ನಡುವೆ ಎಷ್ಟು ರೈಲುಗಳನ್ನು ಬಿಟ್ಟರೂ ಸಾಲದ ಪರಿಸ್ಥಿತಿ ಇರುವ ಈ ಹೊತ್ತಿನಲ್ಲಿ ಒಂದು ಮಹತ್ವದ ಸಿಹಿಸುದ್ದಿ ಬಂದಿದೆ. ಉತ್ತರ ಕರ್ನಾಟಕ, ಮುಂಬೈ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಓಡಾಡುವ ಪ್ರಯಾಣಿಕರ (Passengers) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಏಪ್ರಿಲ್ ತಿಂಗಳಲ್ಲಿ ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ಅದರ ಫಲವಾಗಿ ಯಶವಂತಪುರ–ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ಕೇಂದ್ರ ರೈಲ್ವೆ ಇಲಾಖೆ ಅನುಮೋದನೆ ನೀಡಿದ್ದು, ಇಂದು ಮೇ 16, 2026 ರಿಂದ ಸಂಚಾರ ಆರಂಭವಾಗುತ್ತಿದೆ.

ಕೇವಲ 11 ಗಂಟೆಗಳಲ್ಲಿ ಪ್ರಯಾಣ

ರೈಲು ಸಂಖ್ಯೆ 06577 (ಯಶವಂತಪುರ → ವಿಜಯಪುರ) ಮತ್ತು 06578 (ವಿಜಯಪುರ → ಯಶವಂತಪುರ) ಎಂಬ ಎರಡು ರೈಲು ಸಂಖ್ಯೆಗಳಲ್ಲಿ ಈ ವಿಶೇಷ ರೈಲು ಸಂಚರಿಸಲಿದ್ದು, ಮೇ 16 ರಿಂದ ಜೂನ್ 28, 2026 ರವರೆಗೆ ಒಟ್ಟು 7 ವಾರಾಂತ್ಯಗಳ ಕಾಲ ಸೇವೆ ನೀಡಲಿದೆ. ಪ್ರತಿ ಶನಿವಾರ ಯಶವಂತಪುರ (YPR) ದಿಂದ ಸಂಜೆ 6:15 ಕ್ಕೆ ಹೊರಟು ಮರುದಿನ ಭಾನುವಾರ ಬೆಳಿಗ್ಗೆ 5:15 ಕ್ಕೆ ವಿಜಯಪುರ (BJP) ತಲುಪುತ್ತದೆ. ಭಾನುವಾರ ವಿಜಯಪುರದಿಂದ ಸಂಜೆ 5:00 ಕ್ಕೆ ಹೊರಟು ಮರುದಿನ ಬೆಳಿಗ್ಗೆ 4:00 ಕ್ಕೆ ಯಶವಂತಪುರ ತಲುಪುತ್ತದೆ. 704 ಕಿ.ಮೀ. ದೂರವನ್ನು ಕೇವಲ 11 ಗಂಟೆಗಳಲ್ಲಿ ಕ್ರಮಿಸುವ ಈ ರೈಲು ಸಾಮಾನ್ಯ ರೈಲುಗಳಿಗಿಂತ ಗಣನೀಯವಾಗಿ ವೇಗವಾಗಿದೆ.

ಎಲ್ಲರಿಗೂ ಅನುಕೂಲವಾಗುವ ರೈಲಿನ ಪ್ರಯಾಣ

ಒಂದು ಮುಖ್ಯ ವಿಷಯ ಪ್ರಯಾಣಿಕರು ಗಮನಿಸಲೇಬೇಕು. ಈ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಪ್ರವೇಶಿಸುವುದಿಲ್ಲ. ಹುಬ್ಬಳ್ಳಿ–ಗದಗ ಬೈಪಾಸ್ ಮಾರ್ಗದಲ್ಲಿ ಸಂಚರಿಸುವ ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಹಾವೇರಿ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ಸೇರಿದಂತೆ ಕೇವಲ 9 ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದೆ. ಈ ಬೈಪಾಸ್ ಮಾರ್ಗದಿಂದಾಗಿಯೇ ಸಮಯ ಉಳಿತಾಯ ಸಾಧ್ಯವಾಗಿ ವೇಗದ ಪ್ರಯಾಣ ಸಾಧ್ಯವಾಗಿದೆ. ರೈಲಿನಲ್ಲಿ ಸ್ಲೀಪರ್ (SL), 3A ಮತ್ತು 2A ಸೇರಿ ಸುಮಾರು 19 ಬೋಗಿಗಳಿರಲಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಮತ್ತು ಕುಟುಂಬಗಳ ವಾರಾಂತ್ಯ ಪ್ರಯಾಣ ಮತ್ತಷ್ಟು ಸುಗಮವಾಗಲಿದೆ.

ಇನ್ನೂ ಒಂದು ಗಂಟೆ ಪ್ರಯಾಣ ತಗ್ಗಿಸಲು ಮನವಿ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed