Ajaneesh Lokanth: ಸೈಲೆಂಟ್ ಅಜ್ಜು, ಸಖತ್ ಡ್ಯಾನ್ಸ್! ಮೈಚಳಿ ಬಿಟ್ಟು ಕುಣಿದ ಅಜನೀಶ್ ವಿಡಿಯೋ ವೈರಲ್ | | ACTPnews

Music Director Ajaneesh Lokanath Live in Concert Dance Video Viral


ಸೈಲೆಂಟ್ ಅಜ್ಜು, ವೈರಲ್ ಡ್ಯಾನ್ಸ್

ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡ್ತಾರೆ ಅನ್ನೋದೇ ಆಶ್ಚರ್ಯ. ಕಾಲೇಜು ದಿನಗಳಲ್ಲಿ ಮಾಡಿರಬಹುದು. ಆದರೆ, ಇಂಡಸ್ಟ್ರಿಗೆ ಮ್ಯೂಸಿಕ್ ಡೈರೆಕ್ಟರ್ ಆಗಿ ಬಂದ್ಮೇಲೆ ಈ ಸಾಧ್ಯತೆಗಳು ತೀರಾ ಕಡಿಮೇನೆ ಬಿಡಿ.

ಮ್ಯೂಸಿಕ್ ಡೈರೆಕ್ಟರ್ ಮಸ್ತ್ ವಿಡಿಯೋ ವೈರಲ್.!

ಆದರೆ, ಅಜನೀಶ್ ಲೋಕನಾಥ್ ತಾವೇ ಸೃಷ್ಟಿ ಮಾಡಿರೊ ಅವಕಾಶವನ್ನ, ಚೆನ್ನಾಗಿ ಬಳಕೆ ಮಾಡಿದ್ದಾರೆ. ತಮ್ಮ ಲೈವ್ ಇನ್ ಕಾನ್ಸರ್ಟ್ ಅಲ್ಲಿ ಹಾಡುಗಳನ್ನು ಹಾಡಿದ್ದಾರೆ. ಮಸ್ತ್ ಅನಿಸೋ ಡ್ಯಾನ್ಸ್ ಕೂಡ ಮಾಡಿದ್ದಾರೆ. ಬಹುಶಃ ಈ ಡ್ಯಾನ್ಸ್ ಅನ್ನ ಯಾರು ನಿರೀಕ್ಷೆ ಮಾಡಿರಲಿಲ್ಲ ಅನಿಸುತ್ತದೆ.

ಫಸ್ಟ್ ಟೈಮ್ ಡ್ಯಾನ್ಸ್

ಅಜನೀಶ್ ಲೋಕನಾಥ್ ಫಸ್ಟ್ ಡ್ಯಾನ್ಸ್ ಮಾಡಿದ್ದಾರೆ. ತಮ್ಮ ಈ ಶೋದಲ್ಲಿ ಸಖತ್ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇವರ ಡ್ಯಾನ್ಸ್ ನೋಡಿದ್ರೆ ಎಲ್ಲೂ ಇದು ಫಸ್ಟ್ ಟೈಮ್ ಅನಿಸೋದಿಲ್ಲ.

ಯಾಕೆಂದ್ರೆ ಅಜನೀಶ್ ಲೋಕನಾಥ್ ಅಷ್ಟು ಪರ್ಫೆಕ್ಟ್ ಡ್ಯಾನ್ಸ್ ಮಾಡಿದ್ದಾರೆ. ಎಲ್ಲೂ ಅವರು ಫಸ್ಟ್ ಟೈಮ್ ಡ್ಯಾನ್ಸ್ ಮಾಡ್ತಿದ್ದಾರೆ ಅನಿಸೋದಿಲ್ಲ. ಅಷ್ಟು ಪಕ್ಕಾ ಆಗಿಯೇ ಹಜ್ಜೆ ಹಾಕಿದ್ದಾರೆ.

Music Director Ajaneesh Lokanath Live in Concert Dance Video Viral

ಸೈಲೆಂಟ್ ಅಜ್ಜು, ಸಖತ್ ಡ್ಯಾನ್ಸ್;
ಮೂನ್ ವಾಕ್ ಡ್ಯಾನ್ಸ್

ಅಜನೀಶ್ ಲೋಕನಾಥ್ ಮೂನ್ ವಾಕ್ ಕೂಡ ಮಾಡಿದ್ದಾರೆ. ವಿಜಯ್ ಪ್ರಕಾಶ್ ಅವರು ಕಿರಿಕ್ ಪಾರ್ಟಿ ಚಿತ್ರದ “ಬೆಳಗೆದ್ದು” ಹಾಡಿದ್ರೆ, ಈ ಹಾಡಿನ ಮ್ಯೂಸಿಕ್‌ಗೆ ಅಜನೀಶ್ ಲೋಕನಾಥ್ ತುಂಬಾನೆ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ.

ವಿಡಿಯೋ ವೈರಲ್

ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ. ಇಡೀ ಶೋದಲ್ಲಿ ಇದೇ ಹೈಲೈಟ್ ಅಂದವರೂ ಇದ್ದಾರೆ. ಅಷ್ಟು ಆಸಕ್ತಿಯಿಂದಲೇ ಅಜನೀಸ್ ಲೋಕನಾಥ್ ಇಲ್ಲಿ ಡ್ಯಾನ್ಸ್ ಮಾಡಿದ್ದಾರೆ.

ಇವರು ಇಂಡಸ್ಟ್ರಿಗೆ ಶಿಶಿರ ಚಿತ್ರದ ಮೂಲಕವೇ ಬಂದರು. ಈ ಚಿತ್ರ 2009 ರಂದು ರಿಲೀಸ್ ಆಗಿತ್ತು. ಈ ಲೆಕ್ಕದಂತೆ ಇವರು ಇಂಡಸ್ಟ್ರಿಗೆ ಬಂದು 17 ವರ್ಷದ ಮೇಲೆ ಆಗಿದೆ. ಆದರೆ, ಒಂದೇ ಒಂದು ಲೈವ್ ಕೂಡ ಮಾಡಿರಲಿಲ್ಲ.

Music Director Ajaneesh Lokanath Live in Concert Dance Video Viral

ಫಸ್ಟ್ ಕಾನ್ಸರ್ಟ್ ಬೊಂಬಾಟ
ಫಸ್ಟ್ ಕಾನ್ಸರ್ಟ್ ಬೊಂಬಾಟ

ಆದರೆ, ಫಸ್ಟ್ ಟೈಮ್ ಮಾಡಿರೋ ಲೈವ್ ಕಾನ್ಸರ್ಟ್ ಬೊಂಬಾಟ್ ಆಗಿದೆ. ಸುದೀಪ್, ಶಿವಣ್ಣ, ಉಪೇಂದ್ರ ಕೂಡ ಗೆಸ್ಟ್ ಆಗಿ ಬಂದು ವೀಕ್ಷಿಸಿದ್ದಾರೆ. ಮೆಚ್ಚುಗೆನೂ ವ್ಯಕ್ತಪಡಿಸಿದ್ದಾರೆ.

ಈ ಲೈವ್ ಇನ್ ಕಾನ್ಸರ್ಟ್ ಅಲ್ಲಿ ಅಜನೀಶ್ ಲೋಕನಾಥ್ ಸಂಗೀತದ ಹಾಡುಗಳನ್ನ ಹಾಡಲಾಗಿದೆ. ಸಾನ್ವಿ ಸುದೀಪ್, ವಿಜಯ್ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಹಾಡಿದ್ದಾರೆ. ಇವರ ನಡುವೆ ಅಜನೀಶ್ ಡ್ಯಾನ್ಸ್ ಸಖತ್ ವೈರಲ್ ಆಗಿದೆ.

ವಿಡಿಯೋ ವೈರಲ್

ಅಜನೀಶ್ ಲೋಕನಾಥ್ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಇದನ್ನ ಎಲ್ಲರೂ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿ ಅಜನೀಶ್ ಲೋಕನಾಥ್ ವಿಡಿಯೋಗಳು ವೈರಲ್ ಆಗಿರೋದ ಕಡಿಮೇನೆ.

ಆದರೆ, ಫಸ್ಟ್ ಟೈಮ್ ಡ್ಯಾನ್ಸ್ ಮಾಡಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಅಷ್ಟೆ ಕ್ರೇಜಿ ಆಗಿಯೇ ಇದೆ. ಪತ್ರಕರ್ತೆ ಮಧು ದೈತೋಟ್ ಈ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ ಅಲ್ಲೂ ಹಂಚಿಕೊಂಡಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *