IND vs WI: ಕುಸಿದ ವಿಂಡೀಸ್​ಗೆ ಹೋಪ್​, ರುದರ್ಫೋರ್ಡ್ ಅರ್ಧಶತಕ ಆಸರೆ! ಲಖನೌ ಮೈದಾನದಲ್ಲಿ 2ನೇ ಗರಿಷ್ಠ ಮೊತ್ತ ದಾಖಲಿಸಿದ ಕೆರಿಬಿಯನ್ಸ್ | ಕ್ರೀಡಾ ಸುದ್ದಿ | ACTPnews

ಹೋಪ್-ರುದರ್ಫೋರ್ಡ್


Last Updated:

ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಪಲ್ಯದ ನಡುವೆಯೂ 171 ರನ್​ಗಳ ಸವಾಲಿನ ಮೊತ್ತ ದಾಖಲಿಸಿದೆ.

ಹೋಪ್-ರುದರ್ಫೋರ್ಡ್
ಹೋಪ್-ರುದರ್ಫೋರ್ಡ್

ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೈಫಲ್ಯದ ನಡುವೆಯೂ 171 ರನ್​ಗಳ ಸವಾಲಿನ ಮೊತ್ತ ದಾಖಲಿಸಿದೆ. ಅದ್ಭುತ ಫಾರ್ಮ್​ನಲ್ಲಿರುವ ನಾಯಕ ಶಾಯ್ ಹೋಪ್ 52 ರನ್ ಗಳಿಸಿದರೆ, ಶೆರ್ಫಾನ್ ರುದರ್ಫೋರ್ಡ್ 56 ರನ್ ಗಳಿಸಿ ಭಾರತಕ್ಕೆ 172 ರನ್​ಗಳ ಗುರಿ ನೀಡಲು ನೆರವಾದರು. ಇಡೀ ಪಂದ್ಯದಲ್ಲಿ ಇವರಿಬ್ಬರನ್ನು ಬಿಟ್ಟರೆ ತಂಡದ ಯಾವೊಬ್ಬ ಬ್ಯಾಟರ್ ಕೂಡ 20ರ ಗಡಿ ದಾಟಲು ಸಾಧ್ಯವಾಗಲಿಲ್ಲ. 

ಆರಂಭಿಕನಾಗಿ ಕಣಕ್ಕಿಳಿದಿದ್ದ ನಾಯಕ ಶಾಯ್ ಹೋಪ್ (37 ಎಸೆತಗಳಲ್ಲಿ 6 ಬೌಂ ಡರಿ ಮತ್ತು 2 ಸಿಕ್ಸರ್) 52 ರನ್ ಮತ್ತು ಶೆರ್ಫೇನ್ ರುದರ್ಫೋರ್ಡ್ (34 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್) 56 ರನ್ ಗಳಿಸಿ ಅರ್ಧಶತಕ ಬಾರಿಸಿದರು.  ಉಳಿದ ಬ್ಯಾಟ್ಸ್ ಮನ್ ಗಳು ದಯನೀಯವಾಗಿ ವಿಫಲರಾದರು.  ಇವರಿಬ್ಬರನ್ನ ಹೊರೆತುಪಡಿಸಿದರೆ, 10ನೇ ಬ್ಯಾಟರ್ ಅಕೀಲ್ ಹೊಸೇನ್ 15,  ಓಪನರ್ ಕಮಿಲ್ ಪೂರನ್ 12 ರನ್​ಗಳಿಸಿ ಎರಂಕಿ ಮೊತ್ತ ದಾಖಲಿಸಿದ ಬ್ಯಾಟರ್ಸ್ ಎನಿಸಿಕೊಂಡರು. ಉಳಿದವರೆಲ್ಲರೂ ಭಾರತೀಯ ಸ್ಪಿನ್ನರ್​ಗಳ ಕೌಶಲ್ಯದ ಮುಂದೆ ನಿಲ್ಲಲಾರದಾದರು.

ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಚೊಚ್ಚಲ ಪಂದ್ಯದ ಆಟಗಾರ ನಮನ್ ಧೀರ್ 3 ವಿಕೆಟ್ ಪಡೆದು ಮಿಂಚಿದರೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಉರುಳಿಸಿದರು. ಇದರೊಂದಿಗೆ ಭಾರತ ಪಂದ್ಯವನ್ನು ಗೆಲ್ಲಲು 172 ರನ್‌ಗಳ ಸಾಧಾರಣ ಗುರಿಯನ್ನು ಪಡೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed