Golden Star Ganesh: “ಗೋಲ್ಡನ್ ‘ಮೆಗಾ’ ಸ್ಟಾರ್ ಬಿರುದು ನಾನು ಇಡ್ಕೊಂಡಿದ್ದಲ್ಲ! ಗಣೇಶ್ ಹೇಳಿದ್ದೇನು? | | ACTPnews

golden star ganesh express happiness over new mega title pinaka teaser event


ನಾನು ಕೇಳಿರೋದಲ್ಲ…

ಗೋಲ್ಡನ್ ‘ಮೆಗಾ’ ಸ್ಟಾರ್ ನಾನು ಕೇಳಿರೋದು ಅಲ್ಲ. ಬೃಂದಾವಿಹಾರಿ ಚಿತ್ರದಿಂದಲೇ ಇದು ಶುರು ಆಯಿತು. ಇದನ್ನ ಆ ಸಿನಿಮಾ ತಂಡವೇ ಕೊಟ್ಟಿರೋದು.

ಇದು ಸಂಖ್ಯಾಶಾಸ್ತ್ರದ ಲಕ್ಕವೂ ಅಲ್ಲ

(ಚಿತ್ರ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಇನ್‌ಸ್ಟಾಗ್ರಾಮ್)

ಯಾರೋ ಏನೋ ಕೊಡ್ತಾರೆ ಅಂದ್ರೆ ನಾನು ಅದಕ್ಕೆ ಗೌರವ ಕೊಡ್ತೀನಿ. ಯಾರು ಏನೇ ಕೊಟ್ಟರು ತೆಗೆದುಕೊಳ್ಳುತ್ತೇನೆ. ನಮ್ಮದು ಇನ್‌ಕಮಿಂಗ್ ಜಾಸ್ತಿ. ಔಟ್‌ ಗೋಯಿಂಗ್ ಕಡಿಮೇನೆ ಬಿಡಿ.

ಕಾಮಿಡಿ ಟೈಮ್ ಗಣೇಶ

ಕಾಮಿಡಿ ಟೈಮ್‌ ಗಣೇಶ್ ಆಗಿದ್ದೆ, ಆದರೆ ಜನ ಗೋಲ್ಡನ್ ಸ್ಟಾರ್ ಗಣೇಶ್ ಮಾಡಿದರು. ಈಗ ಮೆಗಾ ಸ್ಟಾರ್ ಮಾಡಿದ್ದಾರೆ. ಆದರೆ, ಮೆಗಾ ಅನ್ನೋದನ್ನ ಸಂಖ್ಯಾಶಾಸ್ತ್ರದ ಮೇಲೆ ಇಟ್ಟಿರೋದು ಅಲ್ವೇ ಅಲ್ಲ.

ಇದನ್ನ ಬೃಂದಾವಿಹಾರಿ ಸಿನಿಮಾ ತಂಡದವರೇ ಕೊಟ್ಟಿರೋದು. ಹಾಗೆ ಇಂಡಸ್ಟ್ರಿಗೆ ಬಂದು 20 ವರ್ಷ ಆಗಿದೆ. ಈಗಲೂ ಹುಡುಗಿಯ ಹಿಂದೆ ಬೀಳುವ ಪಾತ್ರ ಮಾಡೋಕೆ ಇಷ್ಟ ಆಗೋದಿಲ್ಲ. ಮಗಳು 16-17 ವರ್ಷದವಳಾಗಿದ್ದಾಳೆ. ಮಗನೂ ದೊಡ್ಡವನಾಗುತ್ತಿದ್ದಾರೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ.

ಬಿರುದು ಕೊಟ್ಟವರಿಗೆ ಥ್ಯಾಂಕ್ಸ್

ನನಗೆ ಗೋಲ್ಡನ್ ಸ್ಟಾರ್, ಕಾಮಿಡಿ ಟೈಮ್ ಗಣೇಶ್, ಮುಂಗಾರು ಮಳೆ ಗಣೇಶ್, ಗೋಲ್ಡನ್ ಮೆಗಾ ಸ್ಟಾರ್ ಅಂತ ಕೊಟ್ಟಿದ್ದಾರೆ.

ಹೀಗೆ ಬಿರುದು ಕೊಟ್ಟವರಿಗೆ ನಾನು ಧನ್ಯವಾದ ಹೇಳುತ್ತೇನೆ. ನನಗೆ ಯಾರು ಏನು ಕೊಟ್ಟರು ಅದನ್ನ ನಾನು ಬೇಡ ಅನ್ನೋದೇ ಇಲ್ಲ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ.

ತಡವಾಗಿ ಬಂದಿರೋದು…

ಪಿನಾಕ ತರದ ಚಿತ್ರ ಈಗ ಬಂದಿದೆ. ತಡವಾಗಿ ಬರೋದು ಶಾಶ್ವತವಾಗಿಯೇ ಉಳಿಯುತ್ತದೆ. ಆ ನಂಬಿಕೆಯಲ್ಲಿಯೇ ನಾನು ಇರೋದು. ಈ ಚಿತ್ರದಲ್ಲಿ ಚಾರುಕೇಶ ಪಿನಾಕ ರಾಜನ ಪಾತ್ರ ಮಾಡುತ್ತಿದ್ದೇನೆ.

golden star ganesh express happiness over new mega title pinaka teaser event

ಬಿರುದು ಕೊಟ್ಟವರಿಗೆ ಥ್ಯಾಂಕ್ಸ್

(ಚಿತ್ರ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಇನ್‌ಸ್ಟಾಗ್ರಾಮ್)

ಚಿತ್ರದ ಕ್ಲೈಮ್ಯಾಕ್ಸ್ ಚೆನ್ನಾಗಿ ಬಂದಿದೆ. ಇದನ್ನ ಹೇಗೆ ಚಿತ್ರೀಕರಿಸುತ್ತಾರೆ ಅನ್ನುವ ಪ್ರಶ್ನೆ ಇತ್ತು. ಆದರೆ, 12 ನಿಮಿಷದ ಈ ಒಂದು ಕ್ಲೈಮ್ಯಾಕ್ಸ್ ಅನ್ನ 22 ದಿನ ಚಿತ್ರೀಕರಿಸಿದ್ದೇವೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ.

ಪಿನಾಕ ದೊಡ್ಡ ಸಿನಿಮಾ

ಪಿನಾಕ ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗುತ್ತಿದೆ. ಇದನ್ನ ಪ್ಯಾನ್ ಇಂಡಿಯಾ ರಿಲೀಸ್ ಮಾಡ್ತೀವಿ ಅಂತ ಚಿತ್ರ ನಿರ್ಮಾಣ ಸಂಸ್ಥೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಹೇಳಿದೆ.

ಇದಕ್ಕೆ ಪೂರಕವಾಗಿಯೇ ಗಣೇಶ್ ಮಾತನಾಡಿದ್ದಾರೆ. ಆದರೆ, ಕನ್ನಡದಲ್ಲಿ ಮೊದಲು ರಿಲೀಸ್ ಆಗುತ್ತದೆ. ಇಲ್ಲಿ ಚೆನ್ನಾಗಿ ಆದ್ರೆ ಬೇರೆ ಭಾಷೆಯಲ್ಲೂ ಇದು ತೆರೆಗೆ ಬರುತ್ತದೆ.

ಧನಂಜಯ್ ಡೈರೆಕ್ಷನ್

ಪಿನಾಕ ಚಿತ್ರವನ್ನ ಧನಂಜಯ್ ಡೈರೆಕ್ಷನ್ ಮಾಡಿದ್ದಾರೆ. ಡಾನ್ಸ್ ಮಾಸ್ಟರ್ ಆಗಿದ್ದ ಧನಂಜಯ್ ಈ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದಾರೆ. ಅತಿ ದೊಡ್ಡ ಕಲ್ಪನೆಯೊಂದಿಗೆ ಈ ಚಿತ್ರ ಮಾಡಿದ್ದಾರೆ.

ಈ ಚಿತ್ರಕ್ಕೆ ಗೌರ ಹರಿ ಸಂಗೀತ ಮಾಡಿದ್ದಾರೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ವಿಶೇಷವಾಗಿಯೇ ಇದೆ. ಇದರ ಬಗ್ಗೆ ಭಾರೀ ನಂಬಿಕೆನೂ ಇದೆ ಅಂತಲೇ ಸಿನಿಮಾ ತಂಡ ಹೇಳಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed