GK: ಭಾರತದಲ್ಲೇ ಇರುವ ಈ ಊರಿಗೆ ಹೋಗಬೇಕು ಅಂದ್ರೆ ನಮಗೆ ಪಾಸ್‌ಪೋರ್ಟ್ ಬೇಕು! ಯಾವ ಗ್ರಾಮ ಅದು, ಕಾರಣವೇನು? | ಟ್ರೆಂಡಿಂಗ್ ಸುದ್ದಿ | ACTPnews

ತೀನ್ ಬಿಘಾ ಕಾರಿಡಾರ್ (ಸಾಂದರ್ಭಿಕ ಚಿತ್ರ)


Last Updated:

Viral News: ನಮ್ಮ ದೇಶದೊಳಗೆ ಮತ್ತೊಂದು ದೇಶದ ಗ್ರಾಮ ಇದೆ ಅಂದರೆ ನಂಬುತ್ತೀರಾ? ಹೌದು, ಭಾರತದ ಭೂಪಟದ ಒಳಗೇ ಮತ್ತೊಂದು ದೇಶಕ್ಕೆ ಸೇರಿದ ಒಂದು ಪುಟ್ಟ ಗ್ರಾಮವಿದೆ. ಇಲ್ಲಿಗೆ ಹೋಗಬೇಕಾದರೆ ನಿಮಗೆ ಪಾಸ್ಪೋರ್ಟ್ ಮತ್ತು ವೀಸಾ ಬೇಕೇ ಬೇಕು. ಹಾಗಾದ್ರೆ, ಬೇರೊಂದು ದೇಶದಲ್ಲಿರುವ ಆ ಗ್ರಾಮ ಎಲ್ಲಿದೆ? ಭಾರತಕ್ಕೆ ಹೇಗೆ ಆ ಗ್ರಾಮ ಸೇರಿತು? ಎನ್ನುವುದರ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ.

ತೀನ್ ಬಿಘಾ ಕಾರಿಡಾರ್ (ಸಾಂದರ್ಭಿಕ ಚಿತ್ರ)
ತೀನ್ ಬಿಘಾ ಕಾರಿಡಾರ್ (ಸಾಂದರ್ಭಿಕ ಚಿತ್ರ)

Viral News: ನಮ್ಮ ದೇಶದೊಳಗೆ (Nation) ಮತ್ತೊಂದು ದೇಶದ ಗ್ರಾಮ ಇದೆ ಅಂದರೆ ನಂಬುತ್ತೀರಾ? ಹೌದು, ಭಾರತದ  (India) ಭೂಪಟದ (Map) ಒಳಗೇ ಮತ್ತೊಂದು ದೇಶಕ್ಕೆ ಸೇರಿದ ಒಂದು ಪುಟ್ಟ ಗ್ರಾಮವಿದೆ. ಇಲ್ಲಿಗೆ ಹೋಗಬೇಕಾದರೆ ನಿಮಗೆ ಪಾಸ್‌ಪೋರ್ಟ್ (Passport) ಮತ್ತು ವೀಸಾ (Visa) ಬೇಕೇ ಬೇಕು. ಹಾಗಾದ್ರೆ, ಬೇರೊಂದು ದೇಶದಲ್ಲಿರುವ ಆ ಗ್ರಾಮ ಎಲ್ಲಿದೆ? ಭಾರತಕ್ಕೆ ಹೇಗೆ ಆ ಗ್ರಾಮ ಸೇರಿತು? ಎನ್ನುವುದರ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ.

ಎಲ್ಲಿದೆ ಆ ಗ್ರಾಮ?

ಭಾರತದ ಹೊರಗೆ ಯಾವುದೇ ದೇಶಕ್ಕೆ ಪ್ರಯಾಣಿಸಬೇಕಾದರೂ ಪಾಸ್‌ಪೋರ್ಟ್ ಅಥವಾ ವೀಸಾ ಅತ್ಯಗತ್ಯ. ಆದರೆ ಭಾರತದ ಭೂಪ್ರದೇಶದ ಒಳಗೇ ಇರುವ, ಪಶ್ಚಿಮ ಬಂಗಾಳದ ಕೂಚ್‌ಬಿಹಾರ್ ಜಿಲ್ಲೆಯಲ್ಲಿರುವ ದಹಲಾ ಖಗ್ರಾಬರಿ ಎಂಬ ಪ್ರದೇಶವು, ಪಕ್ಕದ ಬಾಂಗ್ಲಾದೇಶಕ್ಕೆ ಸೇರಿದ ಗ್ರಾಮವಾಗಿದೆ! ವಿಚಿತ್ರವೆನಿಸಿದರೂ ಇದು ಸತ್ಯ!

ಇದನ್ನೂ ಓದಿ: Hindu Temple: ವಿಜ್ಞಾನಕ್ಕೆ ಸವಾಲು ಎಸೆದ ಭಾರತದ 6 ನಿಗೂಢ ದೇವಾಲಯಗಳು! ಏನಿದರ ಮಿಸ್ಟರಿ?

ಇದು ಯಾವುದೇ ಕಲ್ಪಿತ ಕಥೆಯಲ್ಲ, ನೂರಕ್ಕೆ ನೂರು ಸತ್ಯ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿರುವ ತೀನ್ ಬಿಘಾ ಕಾರಿಡಾರ್ ಮತ್ತು ದಹಾಗ್ರಾಮ್-ಅಂಗರಪೋಟಾ ಪ್ರದೇಶ ಇಂದಿಗೂ ಭಾರತೀಯರಿಗೆ ಒಂದು ನಿಗೂಢ ಮತ್ತು ವಿಭಿನ್ನ ನಿಯಮಗಳ ನೆಲೆಯಾಗಿ ಉಳಿದಿದೆ. ಭಾರತದ ನಕ್ಷೆಯ ಒಳಗಿದ್ದರೂ ಈ ಪ್ರದೇಶವು ಬಾಂಗ್ಲಾದೇಶದ ಆಡಳಿತಕ್ಕೆ ಒಳಪಟ್ಟಿದೆ.

ಏನಿದು ತೀನ್ ಬಿಘಾ ಕಾರಿಡಾರ್ ಇತಿಹಾಸ?

ತೀನ್ ಬಿಘಾ ಕಾರಿಡಾರ್ ಎಂಬುದು ಕೇವಲ 178 ಮೀಟರ್ ಉದ್ದ ಮತ್ತು 85 ಮೀಟರ್ ಅಗಲವಿರುವ ಒಂದು ಸಣ್ಣ ಭೂಪ್ರದೇಶವಾಗಿದೆ. 1996 ರಲ್ಲಿ ಭಾರತ ಸರ್ಕಾರವು ಬಾಂಗ್ಲಾದೇಶದ ದಹಾಗ್ರಾಮ್-ಅಂಗರಪೋಟಾ ಎನ್‌ಕ್ಲೇವ್‌ನ ನಿವಾಸಿಗಳು ತಮ್ಮ ಮುಖ್ಯ ಭೂಭಾಗವನ್ನು ತಲುಪಲು ಅನುಕೂಲವಾಗುವಂತೆ ಈ ಕಾರಿಡಾರ್ ಅನ್ನು ಬಾಂಗ್ಲಾದೇಶಕ್ಕೆ 999 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತು.

ಇನ್ನು, ಈ ಪ್ರದೇಶವು ಭೌಗೋಳಿಕವಾಗಿ ಭಾರತದಲ್ಲಿದ್ದರೂ ಇಲ್ಲಿ ಸಾಮಾನ್ಯ ಭಾರತೀಯ ನಾಗರಿಕರಿಗೆ ಮುಕ್ತವಾಗಿ ಓಡಾಡಲು ಅವಕಾಶವಿಲ್ಲ. ಭಾರತೀಯರು ಈ ಭಾಗಕ್ಕೆ ಪ್ರವೇಶಿಸಬೇಕಾದರೆ ಇನ್ನರ್ ಲೈನ್ ಪರ್ಮಿಟ್ ಮಾದರಿಯ ವಿಶೇಷ ಪರವಾನಗಿ ಅಥವಾ ಸ್ಥಳೀಯ ಆಡಳಿತದಿಂದ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಬಾಂಗ್ಲಾದೇಶದ ನಾಗರಿಕರು ಯಾವುದೇ ರಿಸ್ಟ್ರಿಕ್ಷನ್​ ಇಲ್ಲದೆ ಈ ಕಾರಿಡಾರ್ ಮೂಲಕ ಓಪನ್​ ಆಗಿ ಓಡಾಡಬಹುದು. ಜೊತೆಗೆ ಬಿಎಸ್​ಎಫ್​ ಇಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತದೆ ಮತ್ತು ಸೂಕ್ತ ದಾಖಲೆಗಳಿಲ್ಲದ ಯಾರನ್ನೂ ಒಳಗೆ ಬಿಡುವುದಿಲ್ಲ.

ಸಂಪೂರ್ಣ ಬಾಂಗ್ಲಾದೇಶಿ ಸಂಸ್ಕೃತಿ ಮತ್ತು ಕರೆನ್ಸಿ

ಈ ವಿಶಿಷ್ಟ ಪ್ರದೇಶದೊಳಗೆ ಕಾಲಿಡುತ್ತಿದ್ದಂತೆ ಭಾರತ ಮಾಯವಾಗಿ ಬಾಂಗ್ಲಾದೇಶದ ವಾತಾವರಣ ಸೃಷ್ಟಿಯಾಗುತ್ತದೆ. ಇಲ್ಲಿ ಭಾರತೀಯ ರೂಪಾಯಿ ಚಲಾವಣೆಯಲ್ಲಿಲ್ಲ, ಬದಲಿಗೆ ಬಾಂಗ್ಲಾದೇಶದ ಟಕಾ ಕರೆನ್ಸಿಯನ್ನು ಬಳಸಲಾಗುತ್ತದೆ. ಇಲ್ಲಿನ ಮನೆಗಳ ಮೇಲೆ ಬಾಂಗ್ಲಾದೇಶದ ರಾಷ್ಟ್ರಧ್ವಜಗಳು ಹಾರಾಡುತ್ತವೆ. ಇಲ್ಲಿನ ಶಾಲೆಗಳು, ಆಸ್ಪತ್ರೆಗಳು ಮತ್ತು ಕಾನೂನು ಸುವ್ಯವಸ್ಥೆ ಎಲ್ಲವೂ ಬಾಂಗ್ಲಾದೇಶ ಸರ್ಕಾರದ ನಿಯಂತ್ರಣದಲ್ಲಿದೆ.

ಎಷ್ಟು ಬಾಂಗ್ಲಾ ಪ್ರಜೆಗಳಿದ್ದಾರೆ?

ಕೆಲ ವರದಿಗಳ ಪ್ರಕಾರ, ಈ ಪ್ರದೇಶದಲ್ಲಿ ಸುಮಾರು 20 ಸಾವಿರ ಬಾಂಗ್ಲಾದೇಶಿ ನಾಗರಿಕರು ವಾಸಿಸುತ್ತಿದ್ದು, ಅವರ ದೈನಂದಿನ ಜೀವನ, ಭಾಷೆ, ಸಂಸ್ಕೃತಿ ಮತ್ತು ಆರ್ಥಿಕತೆ ಸಂಪೂರ್ಣವಾಗಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed