Kannada Action Master: ಕನ್ನಡದ ಫೈಟ್ ಮಾಸ್ಟರ್ ರವಿವರ್ಮಾರನ್ನು ಗುರುತಿಸಿ ಮಾತನಾಡಿಸಿದ ಸಲ್ಮಾನ್ ಖಾನ್! ವಿಡಿಯೋ ಫುಲ್ ವೈರಲ್ | | ACTPnews

ಸ್ಟಾರ್ಸ್ ಕೊಡ್ತಾರೆ ಫುಲ್ ರಿಸ್ಪೆಕ್ಟ್!


Last Updated:

ಸಾಹಸ ನಿರ್ದೇಶಕ ರವಿ ವರ್ಮ ಅವರು ಬಾಲಿವುಡ್ ಅಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಆಮೀರ್ ಖಾನ್ , ಸನ್ನಿ ಡಿಯೋಲ್ , ಸಲ್ಮಾನ್ ಖಾನ್ ಸೇರಿ ಇನ್ನು ಹಲವರು ತುಂಬಾನೆ ರಿಸ್ಪೆಕ್ಟ್ ಕೊಡುತ್ತಾರೆ. ಅದಕ್ಕೆ ಸಾಕ್ಷಿ ಅನ್ನುವ ಹಾಗೆ ಈಗೊಂದು ವಿಡಿಯೋ ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸ್ಟಾರ್ಸ್ ಕೊಡ್ತಾರೆ ಫುಲ್ ರಿಸ್ಪೆಕ್ಟ್!
ಸ್ಟಾರ್ಸ್ ಕೊಡ್ತಾರೆ ಫುಲ್ ರಿಸ್ಪೆಕ್ಟ್!

ಆಮೀರ್ ಖಾನ್ (Aamir Khan) ಅವರ ಚಿತ್ರ ನಿರ್ಮಾಣ ಸಂಸ್ಥೆ 25 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಮುಂಬೈಯಲ್ಲಿ ಒಂದು ಕಾರ್ಯಕ್ರಮ ಇತ್ತು. ಈ ಸಂಭ್ರಮದಲ್ಲಿ ಕನ್ನಡದ ಸಾಹಸ ನಿರ್ದೇಶಕ ರವಿ ವರ್ಮ ಕೂಡ (Kannada Action Master) ಇದ್ದರು. ಇವರು ಎಲ್ಲರೊಟ್ಟಿಗೆ ಅಷ್ಟೆ ಪ್ರೀತಿಯಿಂದಲೇ ಇದ್ದರು. ಇವರನ್ನು ಬಾಲಿವುಡ್‌ನ ನಟರು ಮತ್ತು ನಿರ್ದೇಶಕರು ಅಷ್ಟೆ ಗೌರವದಿಂದಲೇ ಕಾಣ್ತಾ ಇದ್ದರು. ಹಾಗೆ ಸಲ್ಮಾನ್ ಖಾನ್ (Salman Khan) ಹೊರಟ್ಟಿದ್ದರು. ಆಗ ಕನ್ನಡದ ಈ ಸಾಹಸ ನಿರ್ದೇಶಕ ರವಿ ವರ್ಮ ಅವರು ಸಲ್ಮಾನ್ ಖಾನ್ ಅವರ ಕೈಕುಲಕಿದರು. ಆಗ ಎಲ್ಲರಿಗೂ ಕೊಡುವಂತೇನೆ ಸಲ್ಮಾನ್ ಇವರಿಗೂ ಕೈ ಕೊಟ್ಟರು. ಆದರೆ, ಮುಖ ನೋಡಿದ್ಮೇಲೆ ಸಲ್ಮಾನ್ ಖಾನ್ (Salman Khan) ಕೊಟ್ಟ ಗೌರವವೇ ಬೇರೆ ಇದೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ.

ಸಲ್ಮಾನ್ ಖಾನ್ ಕೊಟ್ಟ ಗೌರವ

ಸಾಹಸ ನಿರ್ದೇಶಕ ರವಿ ವರ್ಮ ಬಾಲಿವುಡ್ ಅಲ್ಲಿ ಒಳ್ಳೆ ಹೆಸರು ಮಾಡಿಕೊಂಡಿದ್ದಾರೆ. ಆಮೀರ್ ಖಾನ್ ಸೇರಿದಂತೆ ಶಾರುಖ್ ಖಾನ್, ಸನ್ನಿ ಡಿಯೋಲ್ ಸಲ್ಮಾನ್ ಖಾನ್ ಹೀಗೆ ಎಲ್ಲರೂ ಇವರನ್ನ ಗೌರವಿಸುತ್ತಾರೆ.
Sandalwood Action Director Ravi Varma share bollywood Star Special Video

ಸಲ್ಮಾನ್ ಖಾನ್ ಕೊಟ್ಟ ಗೌರವ

(ಚಿತ್ರ ಕೃಪೆ: ರವಿ ವರ್ಮ ಇನ್‌ಸ್ಟಾಗ್ರಾಮ್)

ಆಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್ ಇದೀಗ 25 ವರ್ಷ ಪೂರೈಸಿದೆ. ಈ ಸಡಗರದಲ್ಲಿ ಸಾಹಸ ನಿರ್ದೇಶಕ ರವಿ ವರ್ಮ ಕೂಡ ಭಾಗಿ ಆಗಿದ್ದರು. ಆಮೀರ್ ಖಾನ್ ಅವರನ್ನ ಮೀಟ್ ಆದರು. ವೇದಿಕೆ ಮೇಲೆ ಹೋಗಿ ಹಗ್ ಮಾಡಿದರು. ಆ ಮೇಲೆ ಕಳೆಗೆ ಬಂದು ಖುರ್ಚಿ ಮೇಲೆ ಕುಳಿತಿದ್ದರು.

ರವಿ ವರ್ಮ ನೋಡಿ ಸಲ್ಲು ಮಾಡಿದ್ದೇನು

ಸಲ್ಮಾನ್ ಖಾನ್ ಅವರನ್ನ ನೋಡಿ ಎಲ್ಲರೂ ಕೈಕುಲುಕುತ್ತಿದ್ದರು. ಸಲ್ಮಾನ್ ಎಂದಿನಂತೆ ಎಲ್ಲರಿಗೂ ರಿಸ್ಪೆಕ್ಟ್ ಕೊಡುತ್ತಿದ್ದರು.

ಆದರೆ, ಸಲ್ಮಾನ್ ಖಾನ್ ಅವರು ಕನ್ನಡದ ಸಾಹಸ ನಿರ್ದೆಶಕ ರವಿ ವರ್ಮ ಅವರನ್ನ ನೋಡಿದ್ಮೇಲೆ ಇವರ ರಿಯಾಕ್ಷನ್ ಚೇಂಜ್ ಆಯಿತು. ಮೊದಲು ಎಲ್ಲರಂತೆ ಕೈಕೊಟ್ಟರು. ಆದರೆ, ಮುಖ ನೋಡಿದ್ಮೇಲೆ ಸಲ್ಮಾನ್ ಖಾನ್ ತುಂಬಾನೆ ಖುಷಿಪಟ್ಟರು. ಹಗ್ ಮಾಡಿ ಗ್ರೇಟ್ ಅನ್ನುವ ರೀರಿ ರಿಸ್ಪೆಕ್ಟ್ ಕೂಡ ಕೊಟ್ಟರು.

ಈ ಕ್ಷಣದ ವಿಡಿಯೋ ಹಂಚಿಕೊಂಡಿದ್ದು ಯಾರು

ಸಲ್ಮಾನ್ ಖಾನ್ ಮತ್ತು ರವಿ ವರ್ಮ ಅವರ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿದೆ. ವಿಶೇಷವಾಗಿ ಇದನ್ನ ಸ್ವತಃ ರವಿ ವರ್ಮ ಅವರೇ ಹಂಚಿಕೊಂಡಿದ್ದಾರೆ.

Sandalwood Action Director Ravi Varma share bollywood Star Special Video

ಆಮೀರ್ ಜತೆ ಇನ್ನಷ್ಟು ಕೆಲಸ ಮಾಡುವಾಸೆ

(ಚಿತ್ರ ಕೃಪೆ: ರವಿ ವರ್ಮ ಇನ್‌ಸ್ಟಾಗ್ರಾಮ್)

ಇದರ ಜೊತೆಗೆ ಈ ಬಗ್ಗೆ ಒಂದಷ್ಟು ಬರೆದುಕೊಂಡಿದ್ದಾರೆ. ಬಾಲಿವುಡ್‌ ಅಲ್ಲಿ ಸಲ್ಮಾನ್ ಖಾನ್ ತಮಗೆ ತೋರುವ ಗೌರವದ ಬಗ್ಗೇನೂ ಹೇಳಿಕೊಂಡಿದ್ದಾರೆ. ಆಮೀರ್ ಖಾನ್, ಸನ್ನಿ ಡಿಯೋಲ್ ಇವರೆಲ್ಲ ತಮ್ಮನ್ನ ಹೇಗೆ ನೋಡ್ತಾರೆ ಅನ್ನೋದನ್ನು ಹೇಳಿಕೊಂಡಿದ್ದಾರೆ.

ಸನ್ನಿ ಡಿಯೋಲ್ ಸಪೋರ್ಟ್

ಸನ್ನಿ ಡಿಯೋಲ್ ಬಗ್ಗೆ ರವಿ ವರ್ಮ ಸ್ವಲ್ಪ ಜಾಸ್ತಿನೇ ಬರೆದುಕೊಂಡಿದ್ದಾರೆ. ಇವರ ಸಪೋರ್ಟ್ ತುಂಬಾನೆ ಇದೆ. ಅದನ್ನ ನೆನೆಯಲೆಬೇಕು ಅಂತಲೂ ಇಲ್ಲಿ ಹೇಳಿದ್ದಾರೆ.

ಆಮೀರ್ ಜತೆ ಕೆಲಸ ಮಾಡುವಾಸೆ

ಆಮೀರ್ ಖಾನ್ ಅವರ ಜೊತೆಗೆ ಕೆಲಸ ಮಾಡುವ ಆಸೆಯನ್ನ ರವಿ ವರ್ಮ ವ್ಯಕ್ತಪಡಿಸಿದ್ದಾರೆ. ಇವರ ಪ್ರೊಡಕ್ಷನ್ ಹೌಸ್‌ 25 ವರ್ಷ ಪೂರೈಸಿದೆ. ಇವರಿಗೆ ಅಭಿನಂದನೆಗಳು.

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಹಾಗೂ ಆಮೀರ್ ಖಾನ್ ಅವರು ಗೌರವ ಕೊಡ್ತಾರೆ. ಪ್ರೀತಿಯನ್ನು ತೋರಿಸುತ್ತಾರೆ. ಮುಂದಿನ ದಿನಗಳಲ್ಲಿ ಆಮೀರ್ ಖಾನ್ ಅವರ ಜೊತೆಗೆ ಇನ್ನಷ್ಟು ಕೆಲಸ ಮಾಡುವ ಆಸೆ ಇದೆ ಅಂತಲೂ ಇಲ್ಲಿ ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed