Last Updated:
ಗಿಲ್ಲಿ ನಟ ಅಭಿನಯದ ಪಳಾರ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಈ ಮಾಹಿತಿಯ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಗಿಲ್ಲಿ ನಟ (Gilli Nata) ಅಭಿನಯದ ಪಳಾರ್ ಸಿನಿಮಾದ (Palar Movie) ಮುಹೂರ್ತ ಮೊನ್ನೆ ಆಗಿದೆ. ಆದರೆ, ಈ ಚಿತ್ರದ ಶೂಟಿಂಗ್ (Movie Shooting) ಆ ದಿನದಿಂದಲೇ ಶುರು ಆಗಿರಲಿಲ್ಲ. ಇದೀಗ ಹೊಸ ಸುದ್ದಿ ಏನಂದ್ರೆ, ಈ ಚಿತ್ರದ ಶೂಟಿಂಗ್ ಆರಂಭಗೊಂಡಿದೆ. ಚಿತ್ರೀಕರಣದ ಒಂದು ಫೋಟೋ ಅಧಿಕೃತವಾಗಿಯೇ ರಿಲೀಸ್ ಆಗಿದೆ. ಗಿಲ್ಲಿ ನಟ (Gilli Nata) ಶೂಟಿಂಗ್ ಆದ್ಮೇಲೆ ಮಾನೇಟರ್ ನೋಡ್ತಿರೋ ಫೋಟೋ ಇದಾಗಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪಳಾರ್ ಶೂಟಿಂಗ್ ಶುರು
ಈ ಚಿತ್ರವನ್ನ ಹರೀಶ್ ಹಾಗೂ ನವೀನ್ ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. ಗಿಲ್ಲಿ ನಟನ ಪ್ರಮುಖ ಕ್ವಾಲಿಟಿ ಅದೇ ಅಲ್ವೇ? ಅದೇ ಬಲವನ್ನ ಇಟ್ಟುಕೊಂಡೇ ಡೈರೆಕ್ಟರ್ ಚಂದ್ರ ಮೋಹನ್ ಕತೆ ಮಾಡಿಕೊಂಡಿದ್ದಾರೆ.
ಪಳಾರ್ ಗಿಲ್ಲಿ ಚಿತ್ರದ ನಾಯಕಿ ಯಾರು ಅನ್ನುವ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಶ್ರೀಲೀಲಾ ಅನ್ನುವ ಮಾತು ಇತ್ತು. ಅದು ಸುಳ್ಳು ಅಂತ ಈ ಸುದ್ದಿಗೆ ಡೈರೆಕ್ಟರ್ ಚಂದ್ರಮೋಹನ್ ಅವರೇ ತೆರೆ ಎಳೆದರು.
ಗಿಲ್ಲಿ ಜೊತೆಗೆ ಕಾವ್ಯ ಶೈವ ಸರಿ ಹೋಗುತ್ತಾರೆ. ಬಿಗ್ ಬಾಸ್ ಸೀಸನ್ 12 ರಲ್ಲಿ ಇವರು ಸಖತ್ ಜೋಡಿ ಆಗಿಯೇ ಕಾಣಿಸಿದ್ದಾರೆ. ಗಿಲ್ಲಿ ನಟ ಮತ್ತು ಕಾವ್ಯ ಶೈವ ಅವರ ಸ್ನೇಹ ಮತ್ತು ಆತ್ಮೀಯತೆ ಎಲ್ಲರಿಗೂ ಇಷ್ಟ ಆಗಿದೆ. ಇವರು ಒಟ್ಟಿಗೆ ಸಿನಿಮಾ ಮಾಡಿದರೆ ಸೂಪರ್ ಅನ್ನುವ ಅಭಿಪ್ರಾಯಗಳೂ ಇವೆ.
ಪಳಾರ್ ಗಿಲ್ಲಿ ಚಿತ್ರದ ನಾಯಕಿ ಕಾವ್ಯ ಅನ್ನುವ ಮಾತು ಹೆಚ್ಚಾಗಿ ಕೇಳಿ ಬರ್ತಿದೆ. ಇವರೇ ಪಕ್ಕಾ ಅನ್ನೋರು ಇದ್ದಾರೆ. ಆದರೆ, ಅಧಿಕೃತವಾಗಿ ಯಾವುದೆ ಮಾಹಿತಿ ಇನ್ನು ಯಾವುದು ಬಂದಿಲ್ಲ.
ಜನ್ಮ ದಿನಕ್ಕೇನೆ ಪೋಸ್ಟರ್ ರಿಲೀಸ್
ಇದರ ಮಧ್ಯೆ ಒಂದು ವಿಷಯ ಹೆಚ್ಚು ಗಮನ ಸೆಳೆಯುತ್ತಿದೆ. ಗಿಲ್ಲಿ ನಟನ ಅಭಿಮಾನಿಗಳು ಒಂದು ಕೆಲಸ ಮಾಡಿದ್ದಾರೆ. ಗಿಲ್ಲಿ ನಟನ ಚಿತ್ರದ ನಾಯಕಿ ಯಾರು ಅನ್ನುವ ಪ್ರಶ್ನೆ ಕೇಳುತ್ತಿದ್ದಾರೆ. ಯಾರಾಗ್ಬೇಕು ಅನ್ನೋದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ ಅಂತಲೇ ಹೇಳುತ್ತಿದ್ದಾರೆ. ಈ ಮೂಲಕವೂ ಗಿಲ್ಲಿ ನಟನ ನಾಯಕಿಯ ಆಯ್ಕೆ ನಡೆಯುತ್ತದೆಯೋ ಏನೋ?
ಪಳಾರ್ ಗಿಲ್ಲಿ ಚಿತ್ರ ವಿಶೇಷ ದಿನವೇ ಲಾಂಚ್ ಆಗಿದೆ. ಗಿಲ್ಲಿ ನಟನ ಜನ್ಮ ದಿನದಂದೇ ಈ ಚಿತ್ರ ಸೆಟ್ಟೇರಿದೆ. ಗಿಲ್ಲಿ ಹೆಚ್ಚು ಇಷ್ಟಪಡುವ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿಯೇ ಈ ಚಿತ್ರ ಲಾಂಚ್ ಆಗಿದೆ.
ಗಿಲ್ಲಿ ನಟ ಈ ಚಿತ್ರಕ್ಕೆ ಒಂದು ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಅನ್ನುವ ಸುದ್ದಿನೂ ಇದೆ. ಆದರೆ, ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಗಿಲ್ಲಿ ನಟ ರಿಯಾಕ್ಟ್ ಮಾಡಿದ್ದಾರೆ.
ಈ ಚಿತ್ರದ ಸಂಭಾವನೆಯ ವಿಚಾರವನ್ನ ನಾವ್ ನಾವೇ ಮಾತನಾಡಿಕೊಳ್ಳುತ್ತೇವೆ. ಟವಲ್ ಹಾಕಿಕೊಂಡು ನಾವೇ ಫೈನಲ್ ಮಾಡುತ್ತೇವೆ ಅಂತಲೂ ಹೇಳಿಕೊಂಡಿದ್ದಾರೆ. ನಿರ್ಮಾಪಕ ನವೀನ್ ಕೂಡ ಇದನ್ನೆ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













