Ganavi Gowda: ವೈಲ್ಡ್ ಕಾರ್ಡ್ ಗಾನವಿಯನ್ನು ಜೈಲಿಗಟ್ಟಿದ ಮನೆ ಮಂದಿ! | | ACTPnews

Wild Card Entry Ganavi Gowda Kalape Goes to jail


ಗಾನವಿ ಕಳಪೆ

ಗಾನವಿ ಗೌಡ ಹೆಚ್ಚು ಗಮನ ಸೆಳೆದಿದ್ದಾರೆ. ಇವರ ಎಂಟ್ರಿನೇ ಚೆನ್ನಾಗಿತ್ತು. ಬಂದ ಕೂಡಲೇ ಇಬ್ಬರನ್ನ ಗಾನವಿ ಮನೆಯಿಂದ ಹೊರಗೆ ಹಾಕಿದ್ದರು.
ಗಾನವಿ ಕಳಪೆ (ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಕಿರಣ್ ಶಾಸ್ತ್ರಿ ಹಾಗೂ ಯಶಸ್ ಅನ್ನ ಮನೆಯಿಂದ ಫ್ಲೈಟ್‌ಗೆ ಕಳಿಸಿದರು. ಕ್ಯಾಪ್ಟನ್ಸಿ ಟಾಸ್ಕ್ ಅಲ್ಲೂ ಇವರು ಆಡಿದರು. ಆದರೆ, ಇಲ್ಲಿ ಆಡಿದ ಟಾಸ್ಕ್‌ನಿಂದಲೇ ಈಗ ಕಳಪೆ ಪಟ್ಟ ಪಡೆದಿದ್ದಾರೆ ಅಂತಲೂ ಹೇಳಬಹುದು.

ಜೈಲಿಗಟ್ಟಿದ ಮಂದಿ

ಮನೆಮಂದಿನೇ ಗಾನವಿಯನ್ನ ಕಳಪೆ ಅಂತ ಹೇಳಿದ್ದಾರೆ. ಕಳಪೆ ಪಟ್ಟ ಪಡೆದ್ಮೇಲೆ ಎಂದಿನಂತೆ ಗಾನವಿ ಗೌಡ ಜೈಲಿಗೆ ಹೋಗಿದ್ದಾರೆ. ಈ ಮೂಲಕ ಗಾನವಿ ಗೌಡ ಬಂದೊಡನೆ ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ.

ದೊಡ್ಮನೆಯಲ್ಲಿ…

ಆದರೆ, ದೊಡ್ಮನೆಯ ಆಟ ಬೇರೆ ಇದೆ. ಇಲ್ಲಿ ಇವರ ಆಟ ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆಟದ ಬರದಲ್ಲಿ ಏನೇನೋ ಆಗಿದೆ. ಅದಕ್ಕೇನೆ ಗಾನವಿ ಗೌಡ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ.

Wild Card Entry Ganavi Gowda Kalape Goes to jail

ಜೈಲಿಗಟ್ಟಿದ ಮಂದಿ

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಆದರೆ, ಕಳಪೆ ಪಟ್ಟ ಪಡೆದುಕೊಳ್ಳುವ ಸಮಯದಲ್ಲಿ ಆವಾಜ್ ಹಾಕಿರೋದು ಇದೆ. ಗಗನ್ ಮಾತಿಗೆ ತಿರುಗೇಟು ಕೊಟ್ಟಿದ್ದಾರೆ. ಜಗ್ಗ ಮಮ್ಮಿ ಮಾತಿಗೂ ಕೌಂಟರ್ ಕೊಟ್ಟಿದ್ದಾರೆ. ಆದರೆ ಕೊನೆಗೆ ಜೈಲಿಗೂ ಸೇರಿದ್ದಾರೆ. ದಿನದ ಪ್ರೋಮೋದಲ್ಲಿ ಇದೇ ಹೈಲೈಟ್ ಆಗಿದೆ ನೋಡಿ.

ಕಳೆದ ವಾರ ಕಿರಣ್ ಶಾಸ್ತ್ರಿ

ಕಳೆದ ವಾರ ಕಿರಣ್ ಶಾಸ್ತ್ರಿ ಜೈಲು ಸೇರಿದ್ದರು. ಕಿರಣ್ ಶಾಸ್ತ್ರಿ ಅಬ್ಬರಿಸಿದ್ದರು. ಮನಸ್ಸಿಗೆ ಬಂದಂತೆ ಬೈದಿದ್ದರು. ಆಟದಲ್ಲೂ ಅಷ್ಟಕಷ್ಟೇನೆ ಬಿಡಿ.

ವೈಲ್ಡ್ ಕಾರ್ಡ್ ಎಂಟ್ರಿ

ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಗಿಚ್ಚ ಗಿಲಿಗಿಲಿ ಪ್ರಶಾಂತ್ ಕಾಮಿಡಿ ಮಾಡ್ತೀನಿ ಅಂತ ಮನೆಗೆ ಕಾಲಿಟ್ಟಿದ್ದಾರೆ. ನಟಿ ಸೋನಿಕಾ ಗೌಡ ಮನೆ ಒಳಗೆ ಹೋಗಿದ್ದಾರೆ.

ಇವರಲ್ಲಿ ಗಾನವಿ ಗೌಡ ಕೂಡ ಇದ್ದಾರೆ. ಈ ಮೂವರಲ್ಲಿ ಪ್ರಶಾಂತ್ ಒಂದು ಹಂತಕ್ಕೆ ಗಮನ ಸೆಳೆಯುತ್ತಿದ್ದಾರೆ. ಆದರೆ, ಸೋನಿಕಾ ಗೌಡ ಪ್ರಯತ್ನ ಮಾಡುತ್ತಿದ್ದಾರೆ.

ಗಾನವಿ ಗೌಡ ಅಬ್ಬರಿಸಿದ್ದಾರೆ. ಇದರ ಏಟೋ ಏನೋ? ಕಳಪೆ ಪಟ್ಟ ಪಡೆದುಕೊಂಡು ಜೈಲು ಸೇರಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed