India World Cup 2027 Schedule: ಅಕ್ಟೋಬರ್ 7ರಂದು ಭಾರತದ ಮೊದಲ ಪಂದ್ಯ! ಏಕದಿನ ವಿಶ್ವಕಪ್​ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews

India World Cup 2027 Schedule: ಅಕ್ಟೋಬರ್ 7ರಂದು ಭಾರತದ ಮೊದಲ ಪಂದ್ಯ! ಏಕದಿನ ವಿಶ್ವಕಪ್​ನ ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ | ಕ್ರೀಡಾ ಸುದ್ದಿ


ಎ ಗುಂಪಿನಲ್ಲಿ ಭಾರತ

2027 ರ ಏಕದಿನ ವಿಶ್ವಕಪ್‌ಗಾಗಿ ಭಾರತವು ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಕ್ವಾಲಿಫೈಯರ್ ಎ ಯ ಒಂದು ತಂಡ ಸೇರಿವೆ.

ಗ್ರೂಪ್ ಬಿ ನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಕ್ವಾಲಿಫೈಯರ್ ಬಿ ನಲ್ಲಿನ ಒಂದು ತಂಡ ಇರುತ್ತದೆ.

 5 ಲೀಗ್ ಪಂದ್ಯಗಳನ್ನಾಡಲಿರುವ ಭಾರತ

ಟೂರ್ನಿಯ ಲೀಗ್ ಹಂತದಲ್ಲಿ ಭಾರತ ಒಟ್ಟು 5 ಪಂದ್ಯಗಳನ್ನು ಆಡಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ಅಕ್ಟೋಬರ್ 10 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಜರುಗಲಿದೆ. ಆ ಬಳಿಕ ಅಕ್ಟೋಬರ್ 14 ರಂದು ಅಫ್ಘಾನಿಸ್ತಾನ, ಅಕ್ಟೋಬರ್ 17 ರಂದು ಕ್ವಾಲಿಫೈಯರ್ ಎ ತಂಡದ ವಿರುದ್ಧ ಮತ್ತು ಅಕ್ಟೋಬರ್ 24 ರಂದು ಜಿಂಬಾಬ್ವೆ  ವಿರುದ್ಧ ಭಾರತ ಸೆಣಸಾಡಲಿದ್ದು, ಇಲ್ಲಿ ಅಗ್ರ ಸ್ಥಾನ ಪಡೆದರೆ ಅಕ್ಟೋಬರ್ 28 ರಿಂದ ಆರಂಭವಾಗಲಿರುವ ರೋಚಕ ‘ಸೂಪರ್ 7’ ಹಂತಕ್ಕೆ ಅರ್ಹತೆ ಪಡೆಯಲಿದೆ.

ಭಾರತ ತಂಡದ ಲೀಗ್ ಹಂತದ ವೇಳಾಪಟ್ಟಿ (Group Stage)

 ಅಕ್ಟೋಬರ್ 7: ಭಾರತ vs ಆಸ್ಟ್ರೇಲಿಯಾ (ಸ್ಥಳ: ಕೇಪ್ ಟೌನ್)

ಅಕ್ಟೋಬರ್ 10: ಭಾರತ vs ಪಾಕಿಸ್ತಾನ (ಸ್ಥಳ: ಜೋಹಾನ್ಸ್‌ಬರ್ಗ್)

ಅಕ್ಟೋಬರ್ 14: ಭಾರತ vs ಅಫ್ಘಾನಿಸ್ತಾನ (ಸ್ಥಳ: ತ್ಶ್ವಾನೆ )

ಅಕ್ಟೋಬರ್ 17: ಭಾರತ vs ಕ್ವಾಲಿಫೈಯರ್ ಎ (ಸ್ಥಳ: ಬ್ಲೂಮ್‌ಫಾಂಟೈನ್)

ಅಕ್ಟೋಬರ್ 24: ಭಾರತ vs ಜಿಂಬಾಬ್ವೆ (ಸ್ಥಳ: ವಿಕ್ಟೋರಿಯಾ ಫಾಲ್ಸ್)

ಗಮನಿಸಿ: ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಮತ್ತು ಎರಡೂ ಗುಂಪುಗಳ ಪೈಕಿ ಹೆಚ್ಚು ಪಾಯಿಂಟ್ಸ್ ಪಡೆಯುವ ಒಂದು 4ನೇ ಸ್ಥಾನದ ತಂಡ ಸೇರಿದಂತೆ ಒಟ್ಟು 7 ತಂಡಗಳು ‘ಸೂಪರ್ 7’ ಹಂತಕ್ಕೆ ಅರ್ಹತೆ ಪಡೆಯಲಿವೆ.

ಭಾರತ ತಂಡದ ಸಂಭಾವ್ಯ ಸೂಪರ್ 7 ವೇಳಾಪಟ್ಟಿ 

ಭಾರತ ತಂಡವು (A1 ಸೀಡಿಂಗ್ ಆಧಾರದ ಮೇಲೆ) ಸೂಪರ್ 7 ಹಂತಕ್ಕೆ ಅರ್ಹತೆ ಪಡೆದರೆ ಆಡಲಿರುವ ಸಂಭಾವ್ಯ ಪಂದ್ಯಗಳ ವಿವರ ಇಲ್ಲಿದೆ:

ಅಕ್ಟೋಬರ್ 28: ಭಾರತ (A1) vs ಆಸ್ಟ್ರೇಲಿಯಾ (A2) (ಸ್ಥಳ: ವಿಕ್ಟೋರಿಯಾ ಫಾಲ್ಸ್)

ನವೆಂಬರ್ 4: ಭಾರತ (A1) vs ನ್ಯೂಜಿಲೆಂಡ್ (B1) (ಸ್ಥಳ: ಪಾರ್ಲ್)

ನವೆಂಬರ್ 7: ಭಾರತ (A1) vs ಪಾಕಿಸ್ತಾನ (A3) (ಸ್ಥಳ: ಕೇಪ್ ಟೌನ್)

ನವೆಂಬರ್ 11: ಭಾರತ (A1) vs ಇಂಗ್ಲೆಂಡ್ (AB4) (ಸ್ಥಳ: ಗ್ಕೆಬರ್ಹಾ)

ನವೆಂಬರ್ 14: ಭಾರತ (A1) vs ಶ್ರೀಲಂಕಾ (B3) (ಸ್ಥಳ: ಡರ್ಬನ್)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed