IND vs PAK, CWC 2027: ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ-ಪಾಕ್ ವಿಶ್ವಕಪ್ ಮಹಾ ಸಮರ! ಹೈವೋಲ್ಟೇಜ್ ಪಂದ್ಯಕ್ಕಾಗಿ ಆ ದಿನವನ್ನ ಗುರುತು ಮಾಡಿಟ್ಟುಕೊಳ್ಳಿ | ಕ್ರೀಡಾ ಸುದ್ದಿ | ACTPnews

ಭಾರತ vs ಪಾಕಿಸ್ತಾನ


Last Updated:

ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಹಂತದ ಹೈ-ವೋಲ್ಟೇಜ್ ಪಂದ್ಯವು 2027ರ ಅಕ್ಟೋಬರ್ 10 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಜರುಗಲಿದೆ. ಟೂರ್ನಿಯ ಹೊಸ ಫಾರ್ಮ್ಯಾಟ್‌ನಿಂದಾಗಿ, ಗ್ರೂಪ್ ‘ಎ’ ನಿಂದ ಎರಡೂ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ನವೆಂಬರ್ 7 ರಂದು ಕೇಪ್ ಟೌನ್‌ನಲ್ಲಿ ನಡೆಯಲಿರುವ ‘ಸೂಪರ್ 7’ ಹಂತದಲ್ಲಿ ಭಾರತ-ಪಾಕ್ ಎರಡನೇ ಬಾರಿ ಮುಖಾಮುಖಿಯಾಗಲಿವೆ.

 ಭಾರತ vs ಪಾಕಿಸ್ತಾನ
ಭಾರತ vs ಪಾಕಿಸ್ತಾನ

ಚೆನ್ನೈ: ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಹೈ-ವೋಲ್ಟೇಜ್ ಪಂದ್ಯ ಎಂದೇ ಪರಿಣಮಿಸುವ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಮಹಾ ಮುಖಾಮುಖಿಗೆ ದಿನಾಂಕ ನಿಗದಿಯಾಗಿದೆ. ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup) ಟೂರ್ನಿಯಲ್ಲಿ ಉಭಯ ತಂಡಗಳು ಮತ್ತೊಮ್ಮೆ ಒಂದೇ ಗುಂಪಿನಲ್ಲಿ (ಗ್ರೂಪ್ ಎ) ಸ್ಥಾನ ಪಡೆದಿದ್ದು, ಅಕ್ಟೋಬರ್ 10 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಮುಖಾಮುಖಿಯಾಗಲಿವೆ. ಶುಬ್‌ಮನ್ ಗಿಲ್ ನೇತೃತ್ವದ ಭಾರತ ತಂಡವು ಅಕ್ಟೋಬರ್ 7 ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಮಹಾ ಸಮರದ ದಿನಾಂಕ ಮತ್ತು ಸ್ಥಳ

ಭಾರತ ಹಾಗೂ ಪಾಕಿಸ್ತಾನ ನಡುವಿನ ಲೀಗ್ ಹಂತದ ಹೈ-ವೋಲ್ಟೇಜ್ ಪಂದ್ಯವು 2027ರ ಅಕ್ಟೋಬರ್ 10 ರಂದು ಜೋಹಾನ್ಸ್‌ಬರ್ಗ್‌ನಲ್ಲಿ ಜರುಗಲಿದೆ. ಟೂರ್ನಿಯ ಹೊಸ ಫಾರ್ಮ್ಯಾಟ್‌ನಿಂದಾಗಿ, ಗ್ರೂಪ್ ‘ಎ’ ನಿಂದ ಎರಡೂ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ನವೆಂಬರ್ 7 ರಂದು ಕೇಪ್ ಟೌನ್‌ನಲ್ಲಿ ನಡೆಯಲಿರುವ ‘ಸೂಪರ್ 7’ ಹಂತದಲ್ಲಿ ಭಾರತ-ಪಾಕ್ ಎರಡನೇ ಬಾರಿ ಮುಖಾಮುಖಿಯಾಗಲಿವೆ.

ಭಾರತದ ಗುಂಪಿನಲ್ಲಿರುವ ಇತರ ತಂಡಗಳು

ಗ್ರೂಪ್ ‘ಎ’ ನಲ್ಲಿ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಅರ್ಹತಾ ಸುತ್ತಿನಿಂದ ಬರುವ ಒಂದು ತಂಡ (ಕ್ವಾಲಿಫೈಯರ್) ಸ್ಥಾನ ಪಡೆದಿವೆ.

ಭಾರತದ ವೇಳಾಪಟ್ಟಿ

• ಅಕ್ಟೋಬರ್ 7: ಭಾರತ vs ಆಸ್ಟ್ರೇಲಿಯಾ, ಕೇಪ್ ಟೌನ್

• ಅಕ್ಟೋಬರ್ 10: ಭಾರತ vs ಪಾಕಿಸ್ತಾನ, ಜೋಹಾನ್ಸ್‌ಬರ್ಗ್

• ಅಕ್ಟೋಬರ್ 14: ಭಾರತ vs ಅಫ್ಘಾನಿಸ್ತಾನ, ತ್ಶ್ವಾನೆ

• ಅಕ್ಟೋಬರ್ 17: ಭಾರತ vs ಕ್ವಾಲಿಫೈಯರ್ ಎ, ಬ್ಲೂಮ್‌ಫಾಂಟೈನ್

• ಅಕ್ಟೋಬರ್ 24: ಭಾರತ vs ಜಿಂಬಾಬ್ವೆ, ವಿಕ್ಟೋರಿಯಾ ಫಾಲ್ಸ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed