Flydubai Incident: ಸ್ಮಿತ್‌ ಮಚ್ಚರ್ ಮೇಲೆ ಹಲ್ಲೆ ಮಾಡಿದವನಿಗೆ ‘ಉಗ್ರ’ ನಂಟು? ಇಸ್ಲಾಮಿಕ್ ಭಯೋತ್ಪಾದನೆ ಬಗ್ಗೆ ನೇತನ್ಯಾಹು ಸ್ಫೋಟಕ ಹೇಳಿಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

Flydubai Incident: ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Captain Smit Machchar) ಮೇಲೆ ದಾಳಿ ಮಾಡಿದ ಒಮಾನಿ ಸಹ ಪೈಲಟ್ ಹೇಗೆ ಭಯೋತ್ಪಾದಕ ನಂಟಿರಬಹುದು ಎಂದು ಶಂಕಿಸಲಾಗಿದೆ. ಒಮನ್ ಸಹ-ಪೈಲಟ್ (Omani co-pilot) ಹೇಗೆ ಭಯೋತ್ಪಾದಕನಾದನೆಂದು (terrorist) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಟಿವಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇಸ್ರೇಲ್: ದುಬೈನಿಂದ (Dubai) ಟೆಲ್ ಅವೀವ್‌ಗೆ (Tel Aviv) ಹಾರುತ್ತಿದ್ದ ಫ್ಲೈದುಬೈ (Flydubai) ವಿಮಾನದ ಕಾಕ್‌ಪಿಟ್ ದಾಳಿಯ (cockpit attack) ಮೊದಲ ತನಿಖಾ ವರದಿ ಬಿಡುಗಡೆಯಾಗಿದೆ. ಇಸ್ರೇಲ್ ಪ್ರಧಾನಿ (Israeli Prime Minister) ಬೆಂಜಮಿನ್ ನೆತನ್ಯಾಹು (Benjamin Netanyahu) ಮಹತ್ವದ ವಿಚಾರವನ್ನು ಇದೀಗ ಬಹಿರಂಗ ಪಡಿಸಿದ್ದಾರೆ. ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Captain Smit Machchar) ಮೇಲೆ ದಾಳಿ ಮಾಡಿದ ಒಮಾನಿ ಸಹ ಪೈಲಟ್ ಹೇಗೆ ಭಯೋತ್ಪಾದಕ ನಂಟಿರಬಹುದು ಎಂದು ಶಂಕಿಸಲಾಗಿದೆ. ಒಮನ್ ಸಹ-ಪೈಲಟ್ (Omani co-pilot) ಹೇಗೆ ಭಯೋತ್ಪಾದಕನಾದನೆಂದು (terrorist) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಟಿವಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಒಮನ್ ಸಹ ಪೈಲಟ್‌ಗೆ ಭಯೋತ್ಪಾದಕ ನಂಟು?

ದುಬೈನಿಂದ ಇಸ್ರೇಲ್‌ಗೆ ಹಾರುತ್ತಿದ್ದ ಫ್ಲೈದುಬೈ ವಿಮಾನ FZ1073 ರ ಮೇಲೆ ನಡೆದ ಭೀಕರ ಕಾಕ್‌ಪಿಟ್ ದಾಳಿಯ ತನಿಖೆಯು ಇದುವರೆಗಿನ ಅತಿದೊಡ್ಡ ಸ್ಫೋಟಕ ವಿಚಾರವನ್ನು ಬಹಿರಂಗಪಡಿಸಿದೆ. ಒಮನ್ ಪ್ರಜೆಯಾದ ಸಹ-ಪೈಲಟ್ ಭಾರತೀಯ ಪೈಲಟ್‌ ಮೇಲೆ ಚಾಕುವಿನಿಂದ ದಾಳಿ ಮಾಡಿ ವಿಮಾನವನ್ನು ಅಪ್ಪಳಿಸಲು ಸಂಚು ರೂಪಿಸಿದ್ದ. ಶಂಕಿತನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಏತನ್ಮಧ್ಯೆ, ತನಿಖಾ ಸಂಸ್ಥೆಗಳಿಂದ ಮೊದಲ ಆಘಾತಕಾರಿ ಮಾಹಿತಿ ಸೋರಿಕೆಯಾಗಿದೆ. ಒಮನ್ ಸಹ-ಪೈಲಟ್ ಹೇಗೆ ಭಯೋತ್ಪಾದಕನಾದನೆಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಟಿವಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತಕ್ಕೆ ಶರಣು?

ನೆತನ್ಯಾಹು ಅವರ ಪ್ರಕಾರ, ಪ್ರಾಥಮಿಕ ತನಿಖೆಗಳು ಮತ್ತು ಆರೋಪಿಗಳ ವೈಯಕ್ತಿಕ ಮಾಹಿತಿಯು ಒಮಾನಿ ಪೈಲಟ್ “ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತಕ್ಕೆ” ಒಳಗಾಗಿದ್ದ ಎಂದು ಬಹಿರಂಗಪಡಿಸಿದೆ. 174 ಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಈ ಘಟನೆಯು ಕೇವಲ ವೈಯಕ್ತಿಕ ವಿವಾದದ ಪರಿಣಾಮವಲ್ಲ, ಬದಲಾಗಿ ಉಗ್ರವಾದದ ಆಳವಾದ ಮತ್ತು ಅಪಾಯಕಾರಿ ಸಿದ್ಧಾಂತವಾಗಿದೆ ಎಂಬುದನ್ನು ಈ ಬಹಿರಂಗಪಡಿಸುವಿಕೆಯು ಸ್ಪಷ್ಟಪಡಿಸುತ್ತದೆ.

ಒಮನ್ ಸಹ ಪೈಲಟ್ ವಿಚಾರಣೆ ಚುರುಕು

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಫಾಕ್ಸ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತನಿಖೆಯ ಮೊದಲ ವಿವರಗಳನ್ನು  ಹಂಚಿಕೊಂಡಿದ್ದಾರೆ. ಕ್ಯಾಪ್ಟನ್‌ ಸ್ಮಿತ್ ಮಚ್ಚಲ್‌ಗೆ ಮಾರಕವಾಗಿ ಹಲ್ಲೆ ಮಾಡಿದ ಒಮಾನಿ ಸಹ-ಪೈಲಟ್‌ನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಆತನನ್ನು ಕಠಿಣ ವಿಚಾರಣೆ ನಡೆಸಲಾಗುತ್ತಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಮೂಲಭೂತ ಇಸ್ಲಾಮಿಕ್ ಬ್ರೈನ್ ವಾಶ್!

“ತನಿಖೆಯಲ್ಲಿ ಇಲ್ಲಿಯವರೆಗೆ ಬಹಿರಂಗಗೊಂಡಿರುವ ಮಾಹಿತಿಯ ಪ್ರಕಾರ, ವಿಮಾನದ ಮೇಲೆ ದಾಳಿ ಮಾಡಿದ ಸಹ-ಪೈಲಟ್ ಅನ್ನು ಮೂಲಭೂತ ಇಸ್ಲಾಮಿಕ್ ಬ್ರೈನ್ ವಾಶ್‌ಗೆ ಒಳಪಡಿಸಲಾಗಿದೆ ಎಂದು ನಮಗೆ ತಿಳಿದಿದೆ. ಸಂಗ್ರಹಿಸಿದ ವೈಯಕ್ತಿಕ ಮಾಹಿತಿ ಮತ್ತು ಹಿನ್ನೆಲೆ ದತ್ತಾಂಶಗಳು ಆತ ಉಗ್ರಗಾಮಿ ಚಿಂತನೆಯಲ್ಲಿ ಆಳವಾಗಿ ಬೇರೂರಿದ್ದ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ” ಎಂದು ನೆತನ್ಯಾಹು ಸಂದರ್ಶನದಲ್ಲಿ ಹೇಳಿದ್ದಾರೆ.

ಆರೋಪಿ ಜಾಡು ಬೆನ್ನು ಹತ್ತಿದ ತನಿಖಾ ತಂಡ

ಖುದ್ದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೇ ಸ್ಫೋಟಕ ಮಾಹಿತಿ ನೀಡಿದ ಬಳಿಕ ಇಸ್ರೇಲ್ ತನಿಖಾ ಸಂಸ್ಥೆಗಳು ಈಗ ಈ ಒಮಾನಿ ಪೈಲಟ್ ಯಾರು ಮತ್ತು ಹೇಗೆ ಆ ರೀತಿ ವರ್ತಿಸಿದ ಎಂಬುದರ ಕುರಿತು ಆಳವಾಗಿ ತನಿಖೆ ನಡೆಸುತ್ತಿದ್ದಾರೆ. ಆತನನು ಆನ್‌ಲೈನ್ ತೀವ್ರಗಾಮಿ ಜಾಲದೊಂದಿಗೆ ಸಂಪರ್ಕ ಹೊಂದಿದ್ದನೇ? ಅವನು ಏಕಾಂಗಿಯಾಗಿದ್ದನೇ? ದೊಡ್ಡ ಉಗ್ರಗಾಮಿ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದನೇ? ಅಂತೆಲ್ಲ ಹುಡುಕುತ್ತಿದ್ದಾರೆ ಎಂದು ನ್ಯೂಸ್ 18 ಹಿಂದಿ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed