FlyDubai Co-Pilot: ಸ್ಮಿತ್ ಮಚ್ಚರ್ ಮೇಲೆ ಹಲ್ಲೆ ನಡೆಸಿದ್ದವನಿಗೆ ಉಗ್ರ ಸಂಘಟನೆ ಬೆಂಬಲ! 9/11ರ ರೀತಿಯ ದಾಳಿಗೆ ಆಲ್‌ ಖೈದಾ ಕರೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹಲ್ಲೆಕೋರನಿಗೆ ಉಗ್ರ ಸಂಘಟನೆ ಬೆಂಬಲ


Last Updated:

FlyDubai Co-Pilot: ಫ್ಲೈದುಬೈ ವಿಮಾನದ ಕೋ ಪೈಲಟ್ ಇಸ್ಲಾಂ ಮೂಲಭೂತವಾದಿ ಮನಸ್ಥಿತಿ ಹೊಂದಿದ್ದ ಎಂಬ ಹಲವು ಸ್ಫೋಟಕ ವಿಚಾರಗಳು ತನಿಖೆ ವೇಳೆ ಬೆಳಕಿಗೆ ಬರುತ್ತಿವೆ. ಆತನ ಕಾರ್ಯಕ್ಕೆ ಇಡೀ ಜಗತ್ತೇ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಭಯೋತ್ಪಾದಕ ಸಂಘಟನೆ ಆಲ್‌ ಖೈದಾ ಮಾತ್ರ ಆತನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ, ಪೋಸ್ಟ್ ಹಾಕಿದೆ!

ಹಲ್ಲೆಕೋರನಿಗೆ ಉಗ್ರ ಸಂಘಟನೆ ಬೆಂಬಲ
ಹಲ್ಲೆಕೋರನಿಗೆ ಉಗ್ರ ಸಂಘಟನೆ ಬೆಂಬಲ

ಫ್ಲೈದುಬೈ (Flydubai) ವಿಮಾನದಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ (smit machchhar) ಮೇಲೆ ಹಲ್ಲೆ ಮಾಡಿದ್ದ ಸಹ ಪೈಲಟ್ (co-pilot) ಹೆಸರು ಗೊತ್ತಾಗಿದೆ. ಆತನನ್ನು ಒಮನ್ ದೇಶದ ಪ್ರಜೆ (Oman Citizen) ಹಮಾಮ್ ಹಲ್ ಹಮಾಮಿ (Hamam Al-Hamami) ಎಂದು ಗುರುತಿಸಲಾಗಿದೆ. ಆತ ಇಸ್ಲಾಂ ಮೂಲಭೂತವಾದಿ ಮನಸ್ಥಿತಿ (Islamist fundamentalist mindset) ಹೊಂದಿದ್ದ ಎಂಬ ಹಲವು ಸ್ಫೋಟಕ ವಿಚಾರಗಳು ತನಿಖೆ ವೇಳೆ ಬೆಳಕಿಗೆ ಬರುತ್ತಿವೆ. ಆತನ ಕಾರ್ಯಕ್ಕೆ ಇಡೀ ಜಗತ್ತೇ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಭಯೋತ್ಪಾದಕ ಸಂಘಟನೆ (terrorist organization) ಆಲ್‌ ಖೈದಾ (Al-Qaeda) ಮಾತ್ರ ಆತನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ, ಪೋಸ್ಟ್ ಹಾಕಿದೆ!

ಸಹ ಪೈಲಟ್ ಕಾರ್ಯಕ್ಕೆ ಆಲ್‌ ಖೈದಾ ಮೆಚ್ಚುಗೆ

ಯೆಮೆನ್ ಮೂಲದ ಆಲ್-ಖೈದಾ ಶಾಖೆ (ಎಕ್ಯೂಎಪಿ) ತನ್ನ ಸಾಪ್ತಾಹಿಕ ಪ್ರಕಟಣೆ ‘ಅಲ್-ಬಯಾನ್’ನಲ್ಲಿ ಸಂಪಾದಕೀಯ ಬರೆದು, ಫ್ಲೈದುಬೈ ವಿಮಾನದ ಒಮಾನಿ ಸಹಪೈಲಟ್ ಹಮಾಮ್ ಅಲ್-ಹಮ್ಮಾಮಿ ಕೈಗೊಂಡ ವಿಫಲ ಹೈಜಾಕ್ ಪ್ರಯತ್ನವನ್ನು ಮೆಚ್ಚಿದೆ.  ಅಮೆರಿಕ ಹಾಗೂ ಇಸ್ರೇಲ್ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗಳಿಗೆ ಆಲ್‌ ಖೈದಾ ಕರೆ ನೀಡಿದೆ.

ಯುದ್ಧ ಇನ್ನೂ ಮುಗಿದಿಲ್ಲ ಎಂದ ಆಲ್‌ ಖೈದಾ!

‘ಸೆಪ್ಟೆಂಬರ್ 11 ಮತ್ತು ಸೆಪ್ಟೆಂಬರ್ 30ರ ನಡುವೆ’ ಎಂಬ ಶೀರ್ಷಿಕೆಯ ಆಲ್‌ ಖೈದಾ ಸಂಪಾದಕೀಯದಲ್ಲಿ 2001ರ ಸೆಪ್ಟೆಂಬರ್ 11ರಂದು ವಿಶ್ವ ವ್ಯಾಪಾರ ಕೇಂದ್ರಕ್ಕೆ ಅಪ್ಪಳಿಸಿದ ವಿಮಾನದ ಚಿತ್ರದ ಜೊತೆಗೆ ಇಸ್ರೇಲ್‌ನ ಟೆಲ್ ಅವೀವ್ ಗಮ್ಯಸ್ಥಾನದ ಫ್ಲೈದುಬೈ ವಿಮಾನ FZ 1073ರ ಉಲ್ಲೇಖವೂ ಇದೆ. ಅರೇಬಿಕ್ ಭಾಷೆಯಲ್ಲಿ ಬರೆದ ಲೇಖನದಲ್ಲಿ, ಯುದ್ಧ ಇನ್ನೂ ಮುಗಿದಿಲ್ಲ ಅಂತ ಘೋಷಿಸಿದೆ.

9/11ರ ದಾಳಿಯಂತೆ ಮತ್ತೆ ದಾಳಿಗೆ ಸಿದ್ಧತೆ!

ಜಿಯೋನಿಸ್ಟ್‌ಗಳು, ಅಮೆರಿಕನ್ನರು ಹಾಗೂ ಇಸ್ಲಾಂ ವಿರುದ್ಧ ಹೋರಾಡುತ್ತಿರುವ ಇತರ ಶಿಬಿರಗಳ ಶಕ್ತಿಗಳನ್ನು ಹೊತ್ತ ವಿಮಾನಗಳು ಇನ್ನೂ ಆಕಾಶದಲ್ಲಿ ಸಂಚರಿಸುತ್ತಿವೆ. ಸೆಪ್ಟೆಂಬರ್ 11 ಮತ್ತು ಸೆಪ್ಟೆಂಬರ್ 30ರಂದು ಸಾಬೀತಾದಂತೆ ಅವು ದಾಳಿಗೆ ತೆರೆದಿವೆ” ಎಂದು ಆಲ್ ಖೈದಾ ತಮ್ಮ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ದಾಳಿಯ ಫಲ ಮುಸ್ಲಿಮರ ಹಿತಕ್ಕೆ ಸೇರಬೇಕು!

ಹೈಜಾಕ್ ಯಶಸ್ವಿಯಾಗಿದ್ದರೆ ಪ್ರದೇಶದ ಶಕ್ತಿ ಸಮತೋಲನವೇ ಬದಲಾಗಬಹುದಿತ್ತು ಎಂದು ಲೇಖನ ಹೇಳುತ್ತದೆ. ಅಮೆರಿಕ ಮತ್ತು ಇಸ್ರೇಲ್‌ನ ಶತ್ರುಗಳು ಹಿಂದಿಗಿಂತ ಈಗ ಹೆಚ್ಚಾಗಿದ್ದಾರೆ ಎಂದು ತಿಳಿಸಿ, ದೇವರನ್ನೂ ಪರಲೋಕವನ್ನೂ ನಂಬದವರೂ ಕೂಡ ಇಂಥ ದಾಳಿ ನಡೆಸಬಹುದು; ಆದರೆ ಅದರ ಫಲ ಮುಸ್ಲಿಮರ ಹಿತಕ್ಕೆ ಸೇರಬಹುದು ಎಂದು ಸಂಪಾದಕೀಯ ವಾದಿಸಿದೆ.

ಪೋಸ್ಟ್ ಮಾಡಿ, ಡಿಲೀಟ್ ಮಾಡಿದ ಆಲ್ ಖೈದಾ!

ಆಲ್-ಖೈದಾ ಪ್ರಕಟಣೆ ಈ ವಿಫಲ ಪ್ರಯತ್ನವನ್ನು ಸೆಪ್ಟೆಂಬರ್ 11ರ ದಾಳಿಗಳ ಜೊತೆ ಹೋಲಿಸಿ, ಅಮೆರಿಕ ಮತ್ತು ಇಸ್ರೇಲ್ ವಿಮಾನಯಾನಕ್ಕೆ ಮತ್ತಷ್ಟು ಅಪಾಯವಿದೆ ಎಂದು ಸೂಚಿಸಿದೆ. ಇನ್ನು ಪೋಸ್ಟ್ ಮಾಡಿ, ಬಳಿಕ ಡಿಲೀಟ್ ಮಾಡಿದೆ ಅಂತ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಭಾರತೀಯ ಪೈಲಟ್ ಮೇಲೆ ಹಲ್ಲೆ

ದುಬೈಯಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನ ಎಫ್‌ಝಡ್ 1073ರಲ್ಲಿ ಒಮಾನಿ ದೇಶದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತ ತುರ್ತು ಪರಿಸ್ಥಿತಿಗಾಗಿ ವಿಮಾನದಲ್ಲಿದ್ದ ಕ್ರ್ಯಾಶ್ ಆಕ್ಸ್‌ನಿಂದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ್ದ. ಈ ವೇಳೆ ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲು ತೆರೆದು ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಪ್ರಯಾಣಿಕರು ಸಹಪೈಲಟ್‌ನನ್ನು ಹಿಡಿದಿದ್ದರು.
ಸುರಕ್ಷಿತವಾಗಿ ಇಳಿದಿದ್ದ ವಿಮಾನ

ಈ ನಡುವೆ ಬೋಯಿಂಗ್ 737 ವಿಮಾನವು 30 ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಸುಮಾರು 14,000 ಅಡಿ ಇಳಿದಿತ್ತು. ವಿಮಾನದಲ್ಲಿದ್ದ ಇನ್ನೊಂದು ಜೋಡಿ ಫ್ಲೈದುಬೈ ಪೈಲಟ್‌ಗಳು ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿಸಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed