Flight Suffers Bird: ಬೆಂಗಳೂರಿನಿಂದ ಮುಂಬೈಗೆ ಹಾರುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ವಿಮಾನವು ವೇಗ ಪಡೆದುಕೊಂಡು ಟೇಕ್ ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

News18
News18

ಮುಂಬೈ: ಬೆಂಗಳೂರಿನಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ 6E 6283 ವಿಮಾನವು ಶುಕ್ರವಾರ ರನ್‌ವೇಯಲ್ಲಿ ಟ್ಯಾಕ್ಸಿ ಮಾಡುತ್ತಿದ್ದಾಗ (Flight Suffers Bird) ಹಕ್ಕಿ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಇಂಡಿಗೋ 6E 6283 ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದರಿಂದ ಪೈಲಟ್ ಮತ್ತೆ ವಿಮಾನವನ್ನು ಏರ್ಪೋರ್ಟ್ ಕಡೆಗೆ ತಿರುಗಿಸಬೇಕಾಯಿತು ಎಂದು ಮೂಲಗಳು ತಿಳಿಸಿವೆ. ಎರಡೂ ಎಂಜಿನ್‌ಗಳ ಪರಿಶೀಲನೆ ಸೇರಿದಂತೆ ಅಗತ್ಯ ತಪಾಸಣೆಗಳ ನಂತರ, ಏರ್‌ಬಸ್ A321Neo ವಿಮಾನವನ್ನು ಸುರಕ್ಷಿತವೆಂದು ಘೋಷಿಸಲಾಯಿತು. ಆ ಬಳಿಕ ಒಂದು ಗಂಟೆಯ ನಂತರ ವಿಮಾನ ತನ್ನ ಪ್ರಯಾಣವನ್ನು ಪ್ರಾರಂಭಿಸಿತು ಎಂದು ಅಧಿಕಾರಿಗಳು ಹೇಳಿದರು.

ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎಂದು ತಕ್ಷಣಕ್ಕೆ ತಿಳಿದು ಬಂದಿಲ್ಲ. ವಿಮಾನವು ವೇಗ ಪಡೆದುಕೊಂಡು ಟೇಕ್ ಆಫ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಹಕ್ಕಿ ಡಿಕ್ಕಿ ಹೊಡೆದಿದೆ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಘಟನೆಯ ಕುರಿತು ಇಂಡಿಗೋದ ಪ್ರತಿಕ್ರಿಯೆಗಳಿಗಾಗಿ ಕಾಯಲಾಗುತ್ತಿದೆ. ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್, flightradar.com ಪ್ರಕಾರ, ಇಂಡಿಗೋ ವಿಮಾನ 6E-6283 ಬೆಂಗಳೂರಿನಿಂದ ಮುಂಬೈಗೆ ಸಂಜೆ 7.04 ಕ್ಕೆ ಹೊರಡಬೇಕಿತ್ತು. ವಿಮಾನವು ಅಂತಿಮವಾಗಿ ರಾತ್ರಿ 8.46 ಕ್ಕೆ ತನ್ನ ಗಮ್ಯಸ್ಥಾನಕ್ಕೆ ಹೊರಟಿತು ಎಂದು ಮೂಲಗಳು ತಿಳಿಸಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports