ಕಟೌಟ್ ಯಾಕ್ ಇಲ್ಲ…
(ಚಿತ್ರ ಕೃಪೆ: ಸಿನಿ ಜರ್ನಿ ಇನ್‌ಸ್ಟಾಗ್ರಾಮ್)
ಈ ಚಿತ್ರದ ಇನ್ನೂ ಒಂದು ವಿಚಾರ ಗಮನಿಸಬಹುದು. ಹೌದು, ಈ ಚಿತ್ರ ಎಲ್ಲಿ ರಿಲೀಸ್ ಆಗಿದಿಯೋ ಅಲ್ಲಿ ಎಲ್ಲೂ ಕಟೌಟ್ ಇಲ್ಲ. ಅದರ ಬದಲು ಕನ್ನಡ ಇಂಡಸ್ಟ್ರಿಯ ಎಲ್ಲ ಕಲಾವಿದರು ಇರೋ ಬ್ಯಾನರ್ ಇದೆ. ಇದರಲ್ಲಿ ಎಲ್ಲರ ಆಶೀರ್ವಾದದೊಂದಿಗೆ ಅಂತಲೂ ಬರೆಯಲಾಗಿದೆ.
ಈ ಒಂದು ಐಡಿಯಾ ಚೆನ್ನಾಗಿದೆ. ಎಲ್ಲರೂ ಒಂದು ಅನ್ನುವುದನ್ನು ಇದು ತೋರಿಸಿಕೊಡುತ್ತದೆ. ಈ ಹಿನ್ನೆಲೆಯ ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ.
ಈ ಒಂದು ಐಡಿಯಾ ನಾನೇ ಮಾಡಿರೋದು. ಒಂದು ವೇಳೆ ಕಟೌಟ್ ಹಾಕಿದರೆ ಹಾರ ಹಾಕ್ಬೇಕು, ಹಾರ ಬಿದ್ದರೆ ಯಾರು ಹಾಕಿದರು ಅನ್ನುವ ಪ್ರಶ್ನೆ ಬರುತ್ತದೆ. ಹಾಕದೆ ಇದ್ದರೆ ಮರ್ಯಾದೆ ಹೋಗುತ್ತದೆ. ಅದಕ್ಕೆ ಕಟೌಟ್ ಐಡಿಯಾ ಬೇಡ ಅಂತ ಸಲಹೆ ಕೊಟ್ಟೆ ಅಂತಲೇ ಸುದೀಪ್ ಹೇಳಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರದ ಈ ಪ್ರೆಸ್ ಮೀಟ್ ಅಲ್ಲಿ ಸುದೀಪ್ ಅವರಿಗೆ ನೆಪೋಟಿಸಂ ಕುರಿತು ಪ್ರಶ್ನೆ ಕೇಳಾಗಿದೆ. ಈ ಪ್ರಶ್ನೆ ಕೇಳಿದಾಕ್ಷಣ ಸುದೀಪ್ ಗರಂ ಆಗಿದ್ದಾರೆ.
ಯಾರದು ಈ ಐಡಿಯಾ
(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)
ಈ ಪ್ರಶ್ನೆ ಯಾಕೆ ಶಿವರಾಜ್ ಕುಮಾರ್ ಅವರಿಗೆ ಕೇಳಿಲ್ಲಿಲ್ಲ. ಆಗ ಇರಲಿಲ್ಲವೇ ನೆಪೋಟಿಸಂ ಅಂತಲೂ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ವಿವರಣೆ ಅನ್ನು ಕೊಟ್ಟಿದ್ದಾರೆ.
ಬಾಲಿವುಡ್ ಅಲ್ಲಿ ನೆಪೋಟಿಸಂ ಅನ್ನುವ ಪದ ಇದೆ. ಇದನ್ನ ಇಲ್ಲಿ ಬಳಕೆ ಮಾಡದ್ಬೇಡಿ. ಇದು ಇಲ್ಲಿಯ ಜನಕ್ಕೆ ಅರ್ಥ ಕೂಡ ಆಗೋದಿಲ್ಲ. ಇಲ್ಲಿಯ ಜನಕ್ಕೆ ಕಲೆ ಒಂದೇ ಅರ್ಥ ಆಗುತ್ತದೆ.
ಈ ಒಂದು ಪದ ಇಲ್ಲಿ ಜನಕ್ಕೆ ಏನು ಅಂತಲೂ ಗೊತ್ತಿಲ್ಲ. ಪ್ರತಿಭೆ ಇದ್ದರೆ ಗೆಲ್ತಾರೆ. ಶಿವರಾಜ್ ಕುಮಾರ್ ದೊಡ್ಡ ಹೆಸರು ಮಾಡಿಲ್ವೇ ಅಂತಲೂ ಪ್ರಶ್ನೆ ಮಾಡಿದ್ದಾರೆ ನೋಡಿ.
ಈ ಒಂದು ನೆಪೋಟಿಸಂ ಬಗೆಗಿನ ಪ್ರಶ್ನೆಗೆ ಸಂಚಿತ್ ಸಂಜೀವ್ ಉತ್ತರ ಕೊಟ್ಟಿದ್ದಾರೆ. ಸದ್ಯದ ಕಾಮೆಂಟ್ ಬಗ್ಗೆ ನಾನು ಏನೂ ಹೇಳೋದಿಲ್ಲ. ಜನರು ಚಿತ್ರಕ್ಕೆ ಅಷ್ಟು ಪ್ರೀತಿ ತೋರಿಸುತ್ತಿದ್ದಾರೆ. ಹಾಗಾಗಿಯೇ ಇದು ಏನು ಕಾಣಿಸುತ್ತಿಲ್ಲ ಅಂತಲೇ ಸಂಚಿತ್ ಸಂಜೀವ್ ಹೇಳಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹುಚ್ಚ ಚಿತ್ರದ ಯಾವುದೇ ಸೀನ್ ಕೂಡ ನೆನಪಿಗೆ ಬರಲಿಲ್ಲ. ಕಾರಣ, ನಮ್ಮ ಡೈರೆಕ್ಟರ್ ವಿವೇಕ್ ಏನ್ ಹೇಳ್ತಾರೋ ಆ ಕಡೆಗೇನೆ ಹೆಚ್ಚಿನ ಫೋಕಸ್ ಇತ್ತು ಅಂತಲೂ ಸಂಚಿತ್ ಇಲ್ಲಿ ಹೇಳಿಕೊಂಡಿದ್ದಾರೆ.
ಸಂಚಿತ್ ಸಂಜೀವ್ ನನ್ನ ಬೆಳ್ಳಿ ತೆರೆ ಮೇಲೆ ನೋಡೋದು ತುಂಬಾನೆ ಖುಷಿ ಆಗುತ್ತದೆ. ಸಂಚಿತ್ ಸಂಜೀವ್ ತುಂಬಾನೆ ಕಾಂಪಿಟೇಟಿವ್ ಆಗಿದ್ದಾರೆ. ಇನ್ಮುಂದೆ ಡೈರೆಕ್ಟರ್‌ಗಳು ಮನೆಗೆ ಬಂದ್ರೆ, ಯಾವ ಹೀರೋಗಾಗಿಯೇ ಬಂದಿದ್ದಾರೆ ಅಂತ ಕೇಳುವ ಸ್ಥಿತಿ ಇದೆ.
ಸುದೀಪ್ ಬ್ಯುಸಿ ಇದ್ದರೆ ಸಂಚಿತ್ ಇದ್ದಾರೆ ಅನ್ನುವ ನಂಬಿಕೆನೂ ಮೂಡಿದೆ. ಇದು ನಿಜಕ್ಕೂ ಖುಷಿ ಕೊಡುವ ವಿಚಾರವೇ ಆಗಿದೆ ಅಂತಲೂ ಸುದೀಪ್ ಇಲ್ಲಿ ಹೇಳಿದ್ದಾರೆ ಅಂತಲೇ ಹೇಳಬಹುದು.












