Last Updated:
ಕನ್ನಡದ ಮೊದಲ ಬೈಕರ್ಸ್ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ವಿಶೇಷವಾಗಿದೆ. ಜುಲೈ-17 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಈಗೀನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಫಾದರ್ಸ್ ಡೇ ಚಿತ್ರ (Father’s Day) ಕನ್ನಡದ ಮೊದಲ ಬೈಕರ್ಸ್ ಚಿತ್ರವೇ (Bikers Movie) ಆಗಿದೆ. ಅಪ್ಪ ಮತ್ತು ಮಗನ ಬಾಂಧವ್ಯದ ಚಿತ್ರವೂ ಇದಾಗಿದೆ. ಆದರೆ, ಇಲ್ಲಿ ಇವರು ಸಹ ಪಯಣಿಗರಾಗಿಯೇ ಸಾಗುತ್ತಾರೆ. ತಾವು ತಂದೆ ಮತ್ತು ಮಗ ಅನ್ನೋದು ಮಾತ್ರ ಪರಸ್ಪರ ಇವರಿಗೆ ತಿಳಿದಿರೋದಿಲ್ಲ. ಪ್ರೇಕ್ಷಕರಿಗೆ ಇದು ಗೊತ್ತಾಗುತ್ತದೆ. ಬೈಕರ್ಸ್ ಲೈಫ್ನ (Bikers Life) ಈ ಸ್ಟೋರಿಯಲ್ಲಿ ಎಮೋಷನ್ಸ್ ಇವೆ. ಕೌಟುಂಬಿಕ ಎಲಿಮೆಂಟ್ಸ್ ಕೂಡ ಇವೆ. ಈ ಚಿತ್ರದ ಪ್ರಚಾರಕ್ಕೆ ಮ್ಯೂಸಿಕ್ ಡೈರೆಕ್ಟರ್ ಆಲ್ ಓಕೆ ಅಲೋಕ್ (All Okay Allok) ಒಂದು ಗೀತೆ ಮಾಡಿದ್ದಾರೆ. ಇದರ ಬಿಡುಗಡೆಯ ಸಮಯದಲ್ಲಿಯೆ ಚಿತ್ರದ ಇತರ ವಿವರವೂ ಗೊತ್ತಾಗಿದೆ. ಅದರ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.
ಫಾದರ್ಸ್ ಡೇ ಚಿತ್ರದ ಮೊದಲ ಟ್ರೈಲರ್ ಫಾದರ್ಸ್ ದಿನವೇ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ಕೂಡ ಪಡೆದುಕೊಂಡಿದೆ.
ಕನ್ನಡದ ಮೊದಲ ಬೈಕರ್ಸ್ ಸಿನಿಮಾ
(ಚಿತ್ರ ಕೃಪೆ: ಅಜಿತ್ ಹಂಡೆ ಇನ್ಸ್ಟಾಗ್ರಾಮ್)
ಈ ಚಿತ್ರದ ರಿಲೀಸ್ ಡೇ ಸಹ ಅನೌನ್ಸ್ ಆಗಿದೆ. ಜುಲೈ-17 ರಂದು ರಿಲೀಸ್ ಆಗ್ತಿರೋ ಈ ಚಿತ್ರಕ್ಕೆ ಪ್ರಮೋಷನ್ ಕೂಡ ಶುರು ಆಗಿದೆ. ಚಿತ್ರದಲ್ಲಿ ನಟಿಸಿರೋ ಆಲ್ ಓಕೆ ಅಲೋಕ್ ಈ ಒಂದು ಪ್ರಮೋಷನಲ್ ಸಾಂಗ್ ಅನ್ನ ಕಂಪೋಸ್ ಮಾಡಿದ್ದಾರೆ. ಅದು ಈಗ ರಿಲೀಸ್ ಆಗಿದೆ.
ಫಾದರ್ಸ್ ಡೇ ಚಿತ್ರ ಕನ್ನಡದ ಮೊದಲ ಬೈಕರ್ಸ್ ಚಿತ್ರವಾಗಿದೆ. ಇದರಲ್ಲಿ ಅಪ್ಪ ಹಾಗೂ ಮಗ ಸಹ ಪಯಣಿಗರಾಗಿರುತ್ತಾರೆ. ಆದರೆ, ಇವರಿಗೆ ತಾವು ಅಪ್ಪ ಮತ್ತು ಮಗ ಅಂತ ತಿಳಿದಿರೋದಿಲ್ಲ.
ಪ್ರೇಕ್ಷಕರಿಗೆ ಗೊತ್ತಿರುತ್ತದೆ ಬಿಡಿ. ಆದರೆ, ಚಿತ್ರದಲ್ಲಿ ಎಮೋಷನ್ಸ್ ಇವೆ. ಹಾಸ್ಯವೂ ಇದೆ. ಆದರೆ, ಈ ಸಿನಿಮಾದ ಕ್ಲೈಮ್ಯಾಕ್ಸ್ ವಿಶೇಷವಾಗಿದೆ. ಇದೇ ಈ ಚಿತ್ರದ ಪ್ರಮುಖ ಹೈಲೈಟ್ ಅಂತಲೂ ಹೇಳಬಹುದು.
ಈ ಚಿತ್ರದ ವಿಶೇಷ ಏನಂದ್ರೆ ಪಾತ್ರಧಾರಿಗಳು ಈ ಚಿತ್ರಕ್ಕೆ ಡಬ್ಬಿಂಗ್ ಮಾಡಿಯೇ ಇಲ್ಲ. ನಟನೆ ಮಾಡುವಾಗ ಏನು ಮಾತನಾಡಿದ್ದಾರೋ ಅದನ್ನೆ ಡೈರೆಕ್ಟರ್ ಇಲ್ಲಿ ಉಳಿಸಿಕೊಂಡಿದ್ದಾರೆ.
ಫಾದರ್ಸ್ ಡೇ ರಿಲೀಸ್ ಡೇಟ್ ಅನೌನ್ಸ್
(ಚಿತ್ರ ಕೃಪೆ: ಅಜಿತ್ ಹಂಡೆ ಇನ್ಸ್ಟಾಗ್ರಾಮ್)
ಈ ಚಿತ್ರದಲ್ಲಿ ಹರ್ಷಿಲ್ ಕೌಶಿಕ್ ಮಗನ ರೋಲ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮನರಂಜನೆ ಇದೆ. ಎಲ್ಲ ವಯಸ್ಸಿನವರು ಈ ಚಿತ್ರ ನೋಡಬಹುದು ಅಂತ ಚಿತ್ರದ ನಾಯಕ ಹರ್ಷಿಲ್ ಕೌಶಿಕ್ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಸಮ್ರಾಗ್ನಿ ರಾಜನ್ ನಾಯಕಿ ಆಗಿದ್ದಾರೆ. ಇವರ ತಂದೆ ಮತ್ತು ತಾಯಿ ಬೈಕ್ ರೈಡರ್ಸ್ ಆಗಿದ್ದಾರೆ. ಚಿಕ್ಕವಯಸ್ಸಿನಿಂದಲೂ ಇವರಿಗೆ ಬೈಕ್ಗಳ ಬಗ್ಗೆ ಆಸಕ್ತಿ ಇದೆ.
ಈ ಚಿತ್ರದಲ್ಲಿ ಬೈಕ್ ರೈಡರ್ ಆಗಿಯೇ ಸಮ್ರಾಗ್ನಿ ರಾಜನ್ ನಟಿಸಿದ್ದಾರೆ. ಹಾಗೆ ಈ ಚಿತ್ರವನ್ನ ರಾಜಾರಾಮ್ ರಾಜೇಂದ್ರನ್ ಡೈರೆಕ್ಷನ್ ಮಾಡಿದ್ದಾರೆ. ಜೋ ಪ್ಯಾನಿಕರ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 13, 2026 10:45 PM IST














