Epstein-Trump: ಎಪ್ಸ್ಟೀನ್-ಟ್ರಂಪ್ ನಂಟಿಗೆ ಮತ್ತೊಂದು ಸಾಕ್ಷ್ಯ? ಎಪ್ಸ್ಟೀನ್ ಸಲಹೆಗಾರನ ಮಗಳನ್ನೇ ಮದುವೆಯಾದ ಅಮೆರಿಕ ಅಧ್ಯಕ್ಷನ ಮಗ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಎಪ್ಸ್ಟೀನ್ ಸಲಹೆಗಾರನ ಮಗಳನ್ನೇ ಮದುವೆಯಾದ ಅಮೆರಿಕ ಅಧ್ಯಕ್ಷನ ಮಗ!


Last Updated:

Epstein-Trump: ಡೊನಾಲ್ಡ್ ಟ್ರಂಪ್ ಜೂನಿಯರ್ ಮದುವೆ ಆಗಿರುವ ಬೆಟ್ಟಿನಾ ಆಂಡರ್ಸನ್, ಬೇರೆ ಯಾರು ಅಲ್ಲ, ಬದಲಾಗಿ ಲೈಂಗಿಕ ಅಪರಾಧಿ ಹಾಗೂ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಬ್ಯಾಂಕ್​ ಅಕೌಂಟ್​ಗಳನ್ನು ನೋಡಿಕೊಳ್ಳುತ್ತಿದ್ದ ಬ್ಯಾಂಕರ್ ಎಚ್ ಲಾಯ್ ಆಂಡರ್ಸನ್ ಮಗಳು. ಈ ಮೂಲಕ ಡೊನಾಲ್ಡ್​ ಟ್ರಂಪ್​ ಹಾಗೂ ಜೆಫ್ರಿ ಎಪ್ಸ್ಟೀನ್ ನಡುವಿನ ಸಂಬಂಧದ ಕುರಿತ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.

ಎಪ್ಸ್ಟೀನ್ ಸಲಹೆಗಾರನ ಮಗಳನ್ನೇ ಮದುವೆಯಾದ ಅಮೆರಿಕ ಅಧ್ಯಕ್ಷನ ಮಗ!
ಎಪ್ಸ್ಟೀನ್ ಸಲಹೆಗಾರನ ಮಗಳನ್ನೇ ಮದುವೆಯಾದ ಅಮೆರಿಕ ಅಧ್ಯಕ್ಷನ ಮಗ!

ವಾಷಿಂಗ್ಟನ್​ ಡಿ.ಸಿ. (ಅಮೆರಿಕ): ಅಮೆರಿಕದ ಅಧ್ಯಕ್ಷ (US President) ಡೊನಾಲ್ಡ್ ಟ್ರಂಪ್ (Donald Trump) ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ (Donald Trump Jr.) ಮದುವೆ ಈಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಅದಕ್ಕೆ ಕಾರಣ ಆತ ಮದುವೆ ಆಗುತ್ತಿರುವ ಹುಡುಗಿ! ಹೌದು, ಡೊನಾಲ್ಡ್ ಟ್ರಂಪ್ ಜೂನಿಯರ್ ಮದುವೆ (Donald Trump Jr.’s wedding) ಆಗಿರುವ ಬೆಟ್ಟಿನಾ ಆಂಡರ್ಸನ್ (Bettina Anderson), ಬೇರೆ ಯಾರು ಅಲ್ಲ, ಬದಲಾಗಿ ಲೈಂಗಿಕ ಅಪರಾಧಿ ಹಾಗೂ ಉದ್ಯಮಿ ಜೆಫ್ರಿ ಎಪ್ಸ್ಟೀನ್ ಬ್ಯಾಂಕ್​ ಅಕೌಂಟ್​ಗಳನ್ನು ನೋಡಿಕೊಳ್ಳುತ್ತಿದ್ದ ಬ್ಯಾಂಕರ್ ಎಚ್ ಲಾಯ್ ಆಂಡರ್ಸನ್ ಮಗಳು. ಈ ಮೂಲಕ ಡೊನಾಲ್ಡ್​ ಟ್ರಂಪ್​ ಹಾಗೂ ಜೆಫ್ರಿ ಎಪ್ಸ್ಟೀನ್ (Jeffrey Epstein) ನಡುವಿನ ಸಂಬಂಧದ ಕುರಿತ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ.

ಡೊನಾಲ್ಡ್ ಟ್ರಂಪ್ ಜೂನಿಯರ್ ಮದುವೆ

ವರದಿಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು 39 ವರ್ಷದ ಬೆಟ್ಟಿನಾ ಮೇ 21ರಂದು ಫ್ಲೋರಿಡಾದ ಪಾಮ್ ಬೀಚ್ ಕೌಂಟಿಯಲ್ಲಿ ವಿವಾಹವಾಗಿದ್ದಾರೆ. ನಂತರ ಮೇ 24ರ ಶನಿವಾರ ಬಹಾಮಾಸ್​ನ ಖಾಸಗಿ ದ್ವೀಪದಲ್ಲಿ ಆಪ್ತರೊಂದಿಗೆ ಪಾರ್ಟಿ ಕೂಡ ಮಾಡಿದ್ದಾರೆ. ಆದರೆ, ಕೆಲ ಕಾರಣಗಳಿಂದ ಡೊನಾಲ್ಡ್ ಟ್ರಂಪ್ ಅವರೇ ತಮ್ಮ ಮಗನ ವಿವಾಹದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Iran Attacks US: ಅಮೆರಿಕಾ ದಾಳಿಗೆ ದಿಟ್ಟ ಉತ್ತರ ನೀಡಿದ ಇರಾನ್! ಯುಎಸ್ ವಾಯುನೆಲೆಯ ಮೇಲೆ ಟೆಹ್ರಾನ್ ಅಟ್ಯಾಕ್

ಮುಂದುವರೆದು, ಟೈಮ್ಸ್​ ನೌ ವರದಿಯ ಪ್ರಕಾರ, ಬೆಟ್ಟಿನಾ ಆ್ಯಂಡರ್ಸನ್ ಅವರ ತಂದೆ ಎಚ್. ಲಾಯ್ ಆ್ಯಂಡರ್ಸನ್ ಅವರು ಪಾಮ್ ಬೀಚ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾಗ ಜೆಫ್ರಿ ಎಪ್ಸ್ಟೀನ್ ಅವರ ಹಣಕಾಸಿನ ಖಾತೆಗಳನ್ನು ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಕೇವಲ ವ್ಯವಹಾರ ಅಷ್ಟೇ ಅಲ್ಲದೆ ವೈಯಕ್ತಿಕವಾಗಿಯೂ ಅವರು ಎಪ್ಸ್ಟೀನ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು ಎಂಬ ಮಾಹಿತಿ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಅದರಂತೆ, ವಿವಾದಿತ ವ್ಯಕ್ತಿಯೊಬ್ಬನ ಹಣಕಾಸು ವ್ಯವಹಾರಗಳನ್ನು ನಿಭಾಯಿಸುತ್ತಿದ್ದ ಬ್ಯಾಂಕರ್ ಮಗಳು ಈಗ ಅಮೆರಿಕದ ಅಧ್ಯಕ್ಷರ ಕುಟುಂಬದ ಸೊಸೆಯಾಗಿರುವುದು ನೆಟ್ಟಿಗರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಎಪ್ಸ್ಟೀನ್ ಸಲಹೆಗಾರನ ಮಗಳನ್ನೇ ಮದುವೆಯಾದ ಅಮೆರಿಕ ಅಧ್ಯಕ್ಷನ ಮಗ!

ಎಪ್ಸ್ಟೀನ್ ಸಲಹೆಗಾರನ ಮಗಳನ್ನೇ ಮದುವೆಯಾದ ಅಮೆರಿಕ ಅಧ್ಯಕ್ಷನ ಮಗ!

ಏತನ್ಮಧ್ಯೆ, ಈ ಇಡೀ ವಿವಾದಕ್ಕೆ ಮುಖ್ಯ ಕಾರಣ ಎಚ್. ಲಾಯ್ ಆ್ಯಂಡರ್ಸನ್ ಅವರು ಈ ಹಿಂದೆ ನೀಡಿದ್ದ ಒಂದು ಹೇಳಿಕೆ. ಹೌದು, ಲಾಯ್ ಆ್ಯಂಡರ್ಸನ್ ಅವರು ಒಮ್ಮೆ, ಜೆಫ್ರಿ ಎಪ್ಸ್ಟೀನ್​ನನ್ನು ಅತ್ಯುನ್ನತ ಪ್ರಾಮಾಣಿಕತೆ ಉಳ್ಳ ಜೆಂಟಲ್‌ಮನ್ ಎಂದು ಬಣ್ಣಿಸಿದ್ದರು. ಅದರಲ್ಲೂ, ಎಪ್ಸ್ಟೀನ್ ಎದುರಿಸುತ್ತಿದ್ದ ಗಂಭೀರ ಅಪರಾಧ ಆರೋಪಗಳ ನಡುವೆಯೂ ಇಂತಹದೊಂದು ಪ್ರಶಂಸೆಯ ಮಾತುಗಳನ್ನು ಆಡಿದ್ದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಂತೆ, ಆ್ಯಂಡರ್ಸನ್ ಅವರ ಹಳೆಯ ಹೇಳಿಕೆಯ ದಾಖಲೆಗಳು ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವೈರಲ್​ ಆಗುತ್ತಿದೆ.

ಡೊನಾಲ್ಡ್ ಟ್ರಂಪ್ ಹಾಗೂ ಜೆಫ್ರಿ ಎಪ್ಸ್ಟೀನ್ ನಡುವಿನ ನಂಟೇನು?

ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಲೈಂಗಿಕ ಅಪರಾಧಿ ಎಪ್ಸ್ಟೀನ್ 1980ರಲ್ಲಿ ಪರಿಚಿತರಾದರು. ಅವರ ಸ್ನೇಹ ಎಷ್ಟರಮಟ್ಟಿಗಿತ್ತು ಅಂದ್ರೆ, 2002ರಲ್ಲಿ ಸಂದರ್ಶನವೊಂದರಲ್ಲಿ ಟ್ರಂಪ್, ಎಪ್ಸ್ಟೀನ್‌ನನ್ನು ಅದ್ಭುತ ವ್ಯಕ್ತಿ ಎಂದು ಕರೆದು, ಆತನಿಗೂ ನನ್ನಂತೆಯೇ ಸುಂದರ ಹಾಗೂ ವಯಸ್ಸಿನಲ್ಲಿ ಚಿಕ್ಕವರಾದ ಮಹಿಳೆಯರೆಂದರೆ ಇಷ್ಟ ಎಂದು ಹೇಳಿಕೆ ನೀಡಿದ್ದರು. ಆದ್ರೆ, 2004ರ ಸುಮಾರಿಗೆ, ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ಐಷಾರಾಮಿ ಬಂಗಲೆಯೊಂದನ್ನು ಹರಾಜಿನಲ್ಲಿ ಖರೀದಿಸಲು ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿತ್ತು, ಹಾಗಾಗಿ, ಅವರ ಸ್ನೇಹ ಮುರಿದುಬಿದ್ದಿತು.

ಇದನ್ನೂ ಓದಿ: Iran-US: ಇರಾನ್ ಬಳಿಕ ಒಮಾನ್ ಸ್ಫೋಟಿಸುವ ಬೆದರಿಕೆ: ಚೀನಾ ಹಾಗೂ ರಷ್ಯಾವನ್ನೂ ಕೆಣಕಿದ ಡೊನಾಲ್ಡ್‌ ಟ್ರಂಪ್

ಏತನ್ಮಧ್ಯೆ, ಕೆಲ ತಿಂಗಳ ಹಿಂದೆ ಅಮೆರಿಕದ ಕಾಂಗ್ರೆಸ್ ಅಂಗೀಕರಿಸಿದ ಎಪ್ಸ್ಟೀನ್ ಫೈಲ್ಸ್ ಪಾರದರ್ಶಕತೆ ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಇಲಾಖೆಯು ಲಕ್ಷಾಂತರ ರಹಸ್ಯ ದಾಖಲೆಗಳು, ಇಮೇಲ್‌ಗಳು ಮತ್ತು ಫ್ಲೈಟ್ ಲಾಗ್‌ಗಳನ್ನು ಬಿಡುಗಡೆ ಮಾಡಿದೆ. ಅದರಂತೆ, ಈ ಅಧಿಕೃತ ದಾಖಲೆಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೆಸರು ಸಾವಿರಾರು ಬಾರಿ ಉಲ್ಲೇಖಿಸಲಾಗಿದೆ. ಅದರಲ್ಲೂ, ಎಪ್ಸ್ಟೀನ್‌ನ ಸಂತ್ರಸ್ತೆಯೊಬ್ಬರು ತಮಗೆ 14 ವರ್ಷವಾಗಿದ್ದಾಗ ಎಪ್ಸ್ಟೀನ್ ತಮಗೆ ಟ್ರಂಪ್‌ನನ್ನು ಪರಿಚಯಿಸಿದ್ದರು ಎಂದು ಸಾಕ್ಷ್ಯ ನುಡಿದಿದ್ದಾರೆ. ಆದ್ರೆ, ಡೊನಾಲ್ಡ್ ಟ್ರಂಪ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿ, “ತಮಗೆ ಎಪ್ಸ್ಟೀನ್‌ನ ಕಾನೂನುಬಾಹಿರ ಲೈಂಗಿಕ ದಂಧೆಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಕಳೆದ 15 ವರ್ಷಗಳಿಂದ ತಮಗೂ ಆತನಿಗೂ ಯಾವುದೇ ಸಂಬಂಧವಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೀಗ ಎಪ್ಸ್ಟೀನ್ ಮಾಜಿ ಸಹಾಯಕನ ಮಗಳನ್ನೇ ಈಗ ಟ್ರಂಪ್​ ಮದುವೆ ಆಗಿರುವುದರಿಂದ, ಈ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸೆಲೆಬ್ರಿಟಿಗಳು ಹಾಗೂ ರಾಜಕೀಯ ಗಣ್ಯರ ವೈಯಕ್ತಿಕ ಜೀವನವು ಯಾವಾಗಲೂ ಸಾರ್ವಜನಿಕರ ಸೂಕ್ಷ್ಮ ಗಮನದಲ್ಲಿರುತ್ತದೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಬೆಟ್ಟಿನಾ ಆ್ಯಂಡರ್ಸನ್ ಅವರ ವಿವಾಹವು ಕೇವಲ ಒಂದು ಕೌಟುಂಬಿಕ ವಿದ್ಯಮಾನವಾಗಿ ಉಳಿಯದೆ, ಹಳೆಯ ಹಣಕಾಸು ಹಗರಣಗಳು ಮತ್ತು ವಿವಾದಿತ ವ್ಯಕ್ತಿಗಳ ಒಡನಾಟದ ವಿಷಯವನ್ನ ಮತ್ತೆ ಮುನ್ನೆಲೆಗೆ ತಂದಿದೆ. ಅದರಂತೆ, ಈ ವಿವಾದವು ಮುಂಬರುವ ದಿನಗಳಲ್ಲಿ ಟ್ರಂಪ್ ಕುಟುಂಬದ ಇಮೇಜ್ ಮೇಲೆ ಪರಿಣಾಮ ಬೀರುವುದಂತೂ ಪಕ್ಕಾ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed