England Team: ನೈಟ್‌ಕ್ಲಬ್ ವಿವಾದದ ಬೆನ್ನಲ್ಲೇ ತಂಡದಿಂದಲೇ ಹೊರಬಿದ್ದ ಬೆನ್​ ಸ್ಟೋಕ್ಸ್! ಹೊಸ ನಾಯಕನನ್ನ ಘೋಷಿಸಿದ ಇಸಿಬಿ | ಕ್ರೀಡಾ ಸುದ್ದಿ | ACTPnews

ಇಂಗ್ಲೆಂಡ್ ಟೆಸ್ಟ್ ತಂಡ


Last Updated:

ನೈಟ್​​​ ಕ್ಲಬ್​ ಘಟನೆ ತನಿಖೆಯಲ್ಲಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಹೇಳಿಕೆ ಬಿಡುಗಡೆ ಮಾಡಿದೆ.

ಇಂಗ್ಲೆಂಡ್ ಟೆಸ್ಟ್ ತಂಡ
ಇಂಗ್ಲೆಂಡ್ ಟೆಸ್ಟ್ ತಂಡ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಬುಧವಾರ ಘೋಷಿಸಲಾದ 15 ಸದಸ್ಯರ ತಂಡದಿಂದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ಮತ್ತು ವೇಗದ ಬೌಲರ್ ಗಸ್ ಅಟ್ಕಿನ್ಸನ್ ಅವರನ್ನು ಕೈಬಿಡಲಾಗಿದೆ. ನೈಟ್‌ಕ್ಲಬ್ ಘಟನೆಯಲ್ಲಿ ಭಾಗಿಯಾಗಿರುವ ಆರೋಪ ಅವರಿಬ್ಬರ ಮೇಲಿದ್ದು, ತನಿಖೆ ಬಾಕಿ ಇರುವುದರಿಂದ ಅವರಿಬ್ಬರನ್ನ ತಂಡದಿಂದಲೇ ಹೊರಗಿಡಲಾಗಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಈ ಮಾಹಿತಿಯನ್ನು ಸ್ಪಷ್ಟಪಡಿಸಿದ್ದು, ಸ್ಟೋಕ್ಸ್ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಅವರನ್ನು ಮಧ್ಯಂತರ ನಾಯಕನನ್ನಾಗಿ ನೇಮಿಸಲಾಗಿದೆ. ಎರಡನೇ ಟೆಸ್ಟ್ ಪಂದ್ಯ ಜೂನ್ 17 ರಿಂದ 21 ರವರೆಗೆ ‘ದಿ ಓವಲ್’ ನಲ್ಲಿ ನಡೆಯಲಿದೆ.

ಜೋ ರೂಟ್​​ಗೆ ಅಧಿಕಾರ

ಬುಧವಾರ ತಂಡ ಘೋಷಿಸಿ ಹೇಳಿಕೆ ಬಿಡುಗಡೆ ಮಾಡಿರುವ ಇಸಿಬಿ “ನೈಟ್​​​ ಕ್ಲಬ್​ ಘಟನೆ ತನಿಖೆಯಲ್ಲಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ದೃಢಪಡಿಸುತ್ತದೆ. ಈ ಪಂದ್ಯ ಜೂನ್ 17 ರಂದು ದಿ ಓವಲ್‌ನಲ್ಲಿ ಆರಂಭವಾಗುತ್ತದೆ. ಯಾರ್ಕ್‌ಷೈರ್ ಬ್ಯಾಟ್ಸ್‌ಮನ್ ಜೋ ರೂಟ್ ತಂಡವನ್ನು ಮಧ್ಯಂತರ ನಾಯಕರಾಗಿ ಮುನ್ನಡೆಸಲಿದ್ದಾರೆ. ಸಸೆಕ್ಸ್ ವೇಗದ ಬೌಲರ್ ಜೋಫ್ರಾ ಆರ್ಚರ್ ಮತ್ತು ಎಸೆಕ್ಸ್ ಬ್ಯಾಟ್ಸ್‌ಮನ್ ಜೋರ್ಡಾನ್ ಕಾಕ್ಸ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ” ಎಂದು ತಿಳಿಸಿದೆ.

ಕುಡಿದು ನೈಟ್​​​ಕ್ಲಬ್​​ನಲ್ಲಿ ರಗ್ಬಿ ಪ್ಲೇಯರ್ ಜೊತೆ ಜಗಳ

ಮಾಧ್ಯಮ ವರದಿಗಳ ಪ್ರಕಾರ, ಸ್ಟೋಕ್ಸ್ ತನ್ನ ತಂಡದ ಸಹ ಆಟಗಾರ ಗಸ್ ಅಟ್ಕಿನ್ಸನ್ ಜೊತೆಗೆ ನೈಟ್ ಕ್ಲಬ್ ನಲ್ಲಿ ನಡೆದ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ರಗ್ಬಿ ಆಟಗಾರನೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ರಾತ್ರಿ ಲಾರ್ಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ 115 ರನ್ ಗಳ ಜಯ ಸಾಧಿಸಿದ ನಂತರ ಈ ಘಟನೆ ನಡೆದಿದೆ. ಸೋಮವಾರ ಮುಂಜಾನೆ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಇಸಿಬಿ ನಿಯಮ ಉಲ್ಲಂಘಿಸಿ ನೈಟ್ ಕ್ಲಬ್​​ಗೆ ತೆರಳಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.

‘talkSPORT’ ಮಂಗಳವಾರದ ವರದಿಯಲ್ಲಿ ಸ್ಟೋಕ್ಸ್ ನಾಯಕತ್ವದಿಂದ ಕೆಳಗಿಳಿಯಬಹುದು ಮತ್ತು ನಿವೃತ್ತಿ ಘೋಷಿಸಬಹುದು ಎಂದು ಹೇಳಿಕೊಂಡಿದೆ.

ನೈಟ್ ಕ್ಲಬ್ ವಿವಾದವೇನು?

ಮೊದಲ ಟೆಸ್ಟ್ ನಂತರ ಸಂಭವಿಸಿದ ನೈಟ್ ಕ್ಲಬ್ ಘಟನೆಯ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮತ್ತು ಕ್ರಿಕೆಟ್ ನಿಯಂತ್ರಕರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಸಂದರ್ಭದಲ್ಲಿ, ಸ್ಟೋಕ್ಸ್ ಮತ್ತು ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ತಂಡದ ಶಿಷ್ಟಾಚಾರಗಳನ್ನು ಉಲ್ಲಂಘಿಸಿ, ಸರಾಸೆನ್ಸ್ ರಗ್ಬಿ ಆಟಗಾರ ಟೊಟೊವಾ ಆವಾ ಅವರೊಂದಿಗೆ ವಾಗ್ವಾದ ನಡೆಸಿದರು. ಘರ್ಷಣೆಯ ನಂತರ ಇಂಗ್ಲೆಂಡ್ ತಂಡದ ಭದ್ರತಾ ಅಧಿಕಾರಿಯೊಬ್ಬರಿಗೆ ಹೊಡೆತ ಬಿದ್ದಿದೆ. ಈ ಘಟನೆ ಮತ್ತೊಮ್ಮೆ ಇಂಗ್ಲೆಂಡ್ ಡ್ರೆಸ್ಸಿಂಗ್ ರೂಮ್ ಮತ್ತು ತಂಡದ ನಿರ್ವಹಣೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports